(ವಿಡಿಯೋ)ಮೂರು ದಿನದ ಶಿಶುವಿನ ಕಾಲು ಮುರಿದ ವಾರ್ಡ್'ಬಾಯ್: ಸಿಸಿಟಿವಿಯಲ್ಲಿ ಸೆರೆಯಾಯ್ತು ರಾಕ್ಷಸ ಕೃತ್ಯ

Published : Feb 07, 2017, 06:35 AM ISTUpdated : Apr 11, 2018, 12:34 PM IST
(ವಿಡಿಯೋ)ಮೂರು ದಿನದ ಶಿಶುವಿನ ಕಾಲು ಮುರಿದ ವಾರ್ಡ್'ಬಾಯ್: ಸಿಸಿಟಿವಿಯಲ್ಲಿ ಸೆರೆಯಾಯ್ತು ರಾಕ್ಷಸ ಕೃತ್ಯ

ಸಾರಾಂಶ

ಮೂರು ದಿನದ ಹಿಂದೆ ಹುಟ್ಟಿದ ಶಿಶು ಅಳುತ್ತಿದೆ ಎಂಬ ಕಾರಣಕ್ಕೆ ಆಸ್ಪತ್ರೆಯ ವಾರ್ಡ್‌‌ ಬಾಯ್‌ ಆ ಶಿಶುವಿನ ಕಾಲು ಮುರಿದ ಘಟನೆ ಉತ್ತರಾಖಂಡ್‌'ನ ರೂರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಉತ್ತರಾಖಂಡ್‌(ಫೆ.07): ಮೂರು ದಿನದ ಹಿಂದೆ ಹುಟ್ಟಿದ ಶಿಶು ಅಳುತ್ತಿದೆ ಎಂಬ ಕಾರಣಕ್ಕೆ ಆಸ್ಪತ್ರೆಯ ವಾರ್ಡ್‌‌ ಬಾಯ್‌ ಆ ಶಿಶುವಿನ ಕಾಲು ಮುರಿದ ಘಟನೆ ಉತ್ತರಾಖಂಡ್‌'ನ ರೂರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಜನವರಿ 25ರಂದು ಶಿಶು ಜನಿಸಿತ್ತು. ಶಿಶುವಿಗೆ ಉಸಿರಾಟದ ಸಮಸ್ಯೆ ಇದ್ದ ಕಾರಣ ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಶಿಶು ಅಳುವುದನ್ನು ಕೇಳಿ ಕಿರಿಕಿರಿ ಅನುಭವಿಸಿದ ವಾರ್ಡ್‌ಬಾಯ್‌ ಸಿಟ್ಟಿಗೆದ್ದಿದ್ದಾನೆ.  ವಾರ್ಡ್‌‌‌'ನಲ್ಲಿ ತಾನು ಒಬ್ಬನೇ ಇರುವಾಗ ಮಗವಿನ ಶಿಶುವಿನ ಕಾಲು ಮುರಿದು ರಕ್ಕಸತನ ಮೆರೆದಿದ್ದಾನೆ.

ಈ ಘಟನೆ 28ರಂದು ನಡೆದಿದ್ದು, ಆಸ್ಪತ್ರೆಯ ಸಿಸಿಟಿವಿಯಲ್ಲಿ ವಾರ್ಡ್‌‌ ಬಾಯ್‌ ಕೃತ್ಯ ಸೆರೆಯಾಗಿದೆ. ಆದರೆ, ವಾರ್ಡ್‌ಬಾಯ್ ಈ ವಿಷಯ ತನಗೆ ಗೊತ್ತಿಲ್ಲ ಎಂಬಂತೆ ನಟಿಸಿದ್ದಾನೆ. ಇದಾದ ನಂತರ ರೂರ್ಕಿ ಆಸ್ಪತ್ರೆ ವೈದ್ಯರು ಶಿಶುವನ್ನು ಡೆಹ್ರಾಡೂನ್‌ ಆಸ್ಪತ್ರೆಗೆ ರೆಫರ್‌ ಮಾಡಿದ್ದಾರೆ. ಆಗ ಈ ಡೆಹ್ರಾಡೂನ್‌ ವೈದ್ಯರು ಶಿಶುವಿನ ಕಾಲು ಮುರಿದಿರುವುದುನ್ನು ಗುರುತಿಸಿದ್ದಾರೆ. ಈ ಬಗ್ಗೆ ಮಗುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಷ್ಣುವರ್ಧನ್‌, ರವಿಚಂದ್ರನ್‌, ಶಶಿಕುಮಾರ್‌ಗೆ ಹೀರೋಯಿನ್‌ ಆಗಿದ್ದ ಈಕೆಯೆ ಬಾಳಿಗೆ ಕೊನೆಗೆ ಜೊತೆಯಾಗಿದ್ದು ಟೀಮ್‌ ಇಂಡಿಯಾ ಸ್ಟಾರ್‌ ಕ್ರಿಕೆಟರ್‌!
ಕಾರ್ತಿಕ ದೀಪಕ್ಕೆ ಅಡ್ಡಿ, ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿ ಬಿಗ್ ಟ್ವಿಸ್ಟ್ ಕೊಟ್ಟ ವಿಜಯ್ ಸರ್ಕಾರ