
ಹಾಸನ : ಹಾಸನ ಜಿಲ್ಲಾಧಿಕಾರಿ ಹಾಗೂ ಸಚಿವರ ನಡುವಿನ ಸಮರ ಮುಂದುವರಿದಿದೆ. ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ - ಸಚಿವ ಮಂಜು ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಎ. ಮಂಜುಗೆ ನೋಟಿಸ್ ಜಾರಿ ಮಾಡಲಾಗಿದೆ. ಅರಕಲಗೂಡು ಚುನಾವಣಾ ಅಧಿಕಾರಿ ಮೂಲಕ ನೋಟಿಸ್ ನೀಡಲಾಗಿದೆ. ಎರಡು ದಿನಗಳಲ್ಲಿ ಈ ಸಂಬಂಧ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.
ನೀತಿ ಸಂಹಿತೆ ಬಳಿಕ ಬಗರ್ ಹುಕುಂ ಸಾಗುವಳಿದಾರರ ಸಕ್ರಮಕ್ಕೆ ಅಂಕಿತ ನೀಡಿದ್ದು, ಈ ಸಂಬಂಧ ಇದೀಗ ನೋಟಿಸ್ ನೀಡಲಾಗಿದೆ. ಇನ್ನು ಅರಕಲಗೂಡು ತಹಸಿಲ್ದಾರ್ ಪ್ರಸನ್ನ ಮೂರ್ತಿ ಹಾಗು ಸಚಿವ ಎ.ಮಂಜುಗೆ ನೋಟಿಸ್ ನೀಡಿದ್ದು, ಸಚಿವರ ವಿರುದ್ದ ಮತ್ತೊಂದು ಎಫ್.ಐ.ಆರ್ ದಾಖಲಿಸಲು ನಡೆದಿದೆಯಾ ಸಿದ್ದತೆ ಎನ್ನುವ ಪ್ರಶ್ನೆ ಇದೀಗ ಮೂಡಿದೆ.
ಸಭೆ ನಡೆಸದೆಯೇ 800ಕ್ಕೂ ಹೆಚ್ಚು ಅರ್ಜಿಗಳ ವಿಲೆಮಾಡಿರೊ ಆರೋಪ ಎದುರಾಗಿದ್ದು, ಅರ್ಜಿಗಳನ್ನ ತಿದ್ದಿ,ಅನರ್ಹರಿಗೆ ಸಾಗುವಳಿ ಚೀಟಿ ನೀಡಿರುವ ಬಗ್ಗೆ ಕೂಡ ಸಂಶಯ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.