ಮಾತೆ ಚುನಾವಣೆಗೆ ನಿಲ್ಲಲಿ: ಶ್ರೀಶೈಲ ಶ್ರೀ

Published : Apr 09, 2018, 08:44 AM ISTUpdated : Apr 14, 2018, 01:13 PM IST
ಮಾತೆ ಚುನಾವಣೆಗೆ ನಿಲ್ಲಲಿ: ಶ್ರೀಶೈಲ ಶ್ರೀ

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಶುದ್ಧ ಸುಳ್ಳುಗಾರ. ಹಿಂದೆ ವೀರಶೈವ ಹಾಗೂ ಲಿಂಗಾಯತರನ್ನು ಸೇರಿಸಿ ಸಭೆ ನಡೆಸಿ, ಕೇಂದ್ರಕ್ಕೆ ವರದಿ ಸಲ್ಲಿಸುತ್ತೇನೆ ಎಂದಿದ್ದರು. ಈಗ ಲಿಂಗಾಯತರನ್ನು ಬೇರ್ಪಡಿಸಲು ಹೊರಟವರೊಂದಿಗೆ ಶಾಮೀಲಾಗಿ ಕೇಂದ್ರಕ್ಕೆ ಶಿಫಾರಸು ಮಾಡಿ ವರದಿ ಸಲ್ಲಿಸಿದ್ದಾರೆ. ಇದು ಯಾವ ನ್ಯಾಯ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಚಾರ್ಯರು ಪ್ರಶ್ನಿಸಿದರು.

ಜಮಖಂಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಶುದ್ಧ ಸುಳ್ಳುಗಾರ. ಹಿಂದೆ ವೀರಶೈವ ಹಾಗೂ ಲಿಂಗಾಯತರನ್ನು ಸೇರಿಸಿ ಸಭೆ ನಡೆಸಿ, ಕೇಂದ್ರಕ್ಕೆ ವರದಿ ಸಲ್ಲಿಸುತ್ತೇನೆ ಎಂದಿದ್ದರು. ಈಗ ಲಿಂಗಾಯತರನ್ನು ಬೇರ್ಪಡಿಸಲು ಹೊರಟವರೊಂದಿಗೆ ಶಾಮೀಲಾಗಿ ಕೇಂದ್ರಕ್ಕೆ ಶಿಫಾರಸು ಮಾಡಿ ವರದಿ ಸಲ್ಲಿಸಿದ್ದಾರೆ. ಇದು ಯಾವ ನ್ಯಾಯ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಚಾರ್ಯರು ಪ್ರಶ್ನಿಸಿದರು.

ಅಲ್ಲದೆ, ಮಾತೆ ಮಹಾದೇವಿ ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದು, ಕಾಂಗ್ರೆಸ್‌ ಮೇಲೆ ಅಷ್ಟೊಂದು ಅಭಿಮಾನವಿದ್ದರೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿ ಎಂದರು.

ಮಾತೆ ಶೂರ್ಪನಖಿ- ಶಿತಿಕಂಠೇಶ್ವರ ಶ್ರೀ:  ಇಂಥವರಿಗೆ ಮತ ಹಾಕಿ ಎಂದು ಹೇಳುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುತ್ತಿರುವ ಅವರು ಕಲಿಯುಗದ ಶೂರ್ಪನಖಿ ಎಂದು ಕುಂದಗೋಳದ ಶಿತಿಕಂಠೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.

ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳನ್ನು ಕೊಡಿಸುವುದಾಗಿ ಹೇಳಿ, ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರ ನಡೆದಿದೆ. ಇದನ್ನು ನಾವು ಎಂದೂ ನಂಬುವುದಿಲ್ಲ. ಸಮಾಜದಲ್ಲಿ ಬೆಂಕಿ ಹಚ್ಚುವವರು ತಮಗೇ ತಾವು ಬೆಂಕಿ ಹಚ್ಚಿಕೊಳ್ಳುವ ಕಾಲ ಬರುತ್ತದೆ. ತಮ್ಮ ಲಾಭಕ್ಕಾಗಿ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಯವರು ಜಾತಿ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಧರ್ಮ, ಸಮಾಜವನ್ನು ಒಡೆಯುವರಿಗೆ ತಕ್ಕ ಪಠ ಕಲಿಸಬೇಕು. ಧರ್ಮ ಇಬ್ಭಾಗ ಮಾಡುವ ಕೆಲಸ ಆಗಿದೆ. ಈಗ ಧರ್ಮ ಜೋಡಿಸುವ ಕಾರ್ಯ ಆಗಬೇಕು. ವೀರಶೈವರೆಂದರೆ ಜಂಗಮರು, ಉಳಿದವರು ಲಿಂಗಾಯತರೆಂದು ಬಿಂಬಿಸುವವರ ಮಾತಿಗೆ ಬೆಲೆ ಕೊಡಬೇಡಿ. ವೀರಶೈವ-ಲಿಂಗಾಯತ ಒಂದೇ, ನಮ್ಮ ಎರಡು ಕಣ್ಣುಗಳಿದ್ದಂತೆ ಎಂದರು.

ಮಾತೆಮಹಾದೇವಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿ: ಮಾತೆ ಮಹಾದೇವಿ ಅವರು ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದು, ಕಾಂಗ್ರೆಸ್‌ ಮೇಲೆ ಅಷ್ಟೊಂದು ಅಭಿಮಾನವಿದ್ದರೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ, ನಂತರ ಯಾವ ಪಕ್ಷವನ್ನು ಬೇಕಾದರೂ ಬೆಂಬಲಿಸಲಿ. ಹಿಂದೆ ಬಸವಣ್ಣನವರ ವಚನಾಂಕಿತವನ್ನು ತಿದ್ದಿ, ಲಿಂಗಾಯತ ಧರ್ಮಕ್ಕೆ ದ್ರೋಹ ಮಾಡಿದ್ದರು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ