ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ರೋಹಿಣಿ, ಅಣ್ಣಾಮಲೈರಿಂದ ಅಧಿಕಾರ ಹಸ್ತಾಂತರ

By Web Desk  |  First Published Jun 10, 2019, 10:18 PM IST

ಕೋಲಾರದ ಪೊಲೀಸ್ ವರಿಷ್ಠಾಧಿಕಾರಿಯಾದ್ದ ರೋಹಿಣಿ ಅವರು ಈಗ ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದು, ಇಂದು ಅಧಿಕಾರ ಸ್ವೀಕರಿಸಿದರು.


ಬೆಂಗಳೂರು, [ಜೂನ್.10]: ಕರ್ನಾಟಕದ ಸಿಂಗಂ ಎಂದೇ ಹೆಸರಾಗಿದ್ದ ಕೆ.ಅಣ್ಣಾಮಲೈ ಅವರ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರು ದಕ್ಷಿಣ ಡಿಸಿಪಿ ಸ್ಥಾನಕ್ಕೆ ರೋಹಿಣಿ ಕಟೋಚ್ ಸೆಪಟ್ ನೇಮಕಗೊಂಡಿದ್ದಾರೆ.

ಇಂದು [ಸೋಮವಾರ] ಬೆಂಗಳೂರಿನ ಕಚೇರಿಯಲ್ಲಿ ರೋಹಿಣಿ ಕಟೋಚ್ ಸೆಪಟ್ ಅವರಿಗೆ ಅಣ್ಣಾಮಲೈ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.ಬಳಿಕ ಅಣ್ಣಾಮಲೈ ಅವರೊಂದಿಗೆ ಸಿಬ್ಬಂದಿ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.

Tap to resize

Latest Videos

undefined

9 IPS ಅಧಿಕಾರಿಗಳ ವರ್ಗಾವಣೆ: ಅಣ್ಣಾಮಲೈ ಜಾಗಕ್ಕೆ ರೋಹಿಣಿ

ರೋಹಿಣಿ ಕಟೋಚ್ ಸೆಪಟ್ ಅವರು ಈ ಹಿಂದೆ ಕೋಲಾರದ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಣ್ಣಾಮಲೈ ಅವರು ರಾಜೀನಾಮೆ ನೀಡಿದ ಹಿನ್ನೆಲೆ ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ರೋಹಿಣಿ ಕಟೋಚ್ ಸೆಪಟ್​ರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. 

click me!