ಹೋಗಲ್ಲಾ ಅಂದ್ರೆ ರೋಹಿಂಗ್ಯಾಗಳಿಗೆ ಗುಂಡಿಕ್ಕಿ: ಬಿಜೆಪಿ ಶಾಸಕ!

Published : Aug 01, 2018, 12:07 PM ISTUpdated : Aug 01, 2018, 12:35 PM IST
ಹೋಗಲ್ಲಾ ಅಂದ್ರೆ ರೋಹಿಂಗ್ಯಾಗಳಿಗೆ ಗುಂಡಿಕ್ಕಿ: ಬಿಜೆಪಿ ಶಾಸಕ!

ಸಾರಾಂಶ

ಅಕ್ರಮ ವಲಸಿಗರ ವಿರುದ್ಧ ಬಿಜೆಪಿ ಶಾಸಕ ಗರಂ ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅಕ್ರಮ ವಲಸಿಗರಿಗೆ ಗುಂಡಿಕ್ಕಿ ಎಂದ ಶಾಸಕ ದೇಶ ಬಿಡದಿದ್ದರೆ ಹಿಂಸಾ ಮಾರ್ಗ ಅನುಸರಿಸುತ್ತೇವೆ

ಹೈದರಾಬಾದ್(ಆ.1): ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಕುರಿತು ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ದೇಶ ಬಿಡಲು ಒಪ್ಪದ ವಲಸಿಗರಿಗೆ ಗುಂಡಿಕ್ಕಿ ಎಂದು ಹೇಳಿರುವ ರಾಜಾ ಸಿಂಗ್, ಹಿಂಸಾ ಮಾರ್ಗ ಅನುಸರಿಸಿಯಾದರೂ ಅಕ್ರಮ ವಲಸಿಗರನ್ನು ದೇಶದಿಂದ ಹೊರ ದಬ್ಬಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ದಾಖಲೆಯಲ್ಲಿ ಹೆಸರು ಕೈಬಿಡಲಾದ 40 ಲಕ್ಷ ಅಕ್ರಮ ವಲಸಿಗರು ತಾವಾಗಿಯೇ ದೇಶ ಬಿಟ್ಟರೆ ಸರಿ, ಇಲ್ಲದಿದ್ದರೆ ಗುಂಡು ಹೊಡೆದು ದೇಶ ಬಿಡುವಂತೆ ಮಾಡಲಾಗುವುದು ಎಂದು ರಾಜಾ ಸಿಂಗ್ ಗುಡುಗಿದ್ದಾರೆ.

ಪಾಕ್‌ ಜತೆಗಿನ 1971ರ ಯುದ್ಧದ ವೇಳೆ ಭಾರತಕ್ಕೆ ನುಸುಳಿದ ಬಾಂಗ್ಲಾದೇಶದ ಮುಸ್ಲಿಮರು ಇವರಾಗಿದ್ದು, ಭಾರತದ ವಿರುದ್ಧ ಸಂಚಿನ ಭಾಗವಾಗಿ ಇಷ್ಟು ವರ್ಷ ಇಲ್ಲೇ ಉಳಿಸಿಕೊಳ್ಳಲಾಗಿತ್ತು ಎಂದು ರಾಜಾ ಸಿಂಗ್ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

NRI arrested in Bangalore: ಅಮೆರಿಕದಿಂದ ಜೀವಂತ 7 ಗುಂಡು ತಂದಿದ್ದಅನಿವಾಸಿ ಭಾರತೀಯನ ಸೆರೆ!
India Latest News Live: IPL 2026 - ನಿನ್ನೆ ನಡೆದ ಲಖನೌ ಸೂಪರ್ ಜೈಂಟ್ಸ್-ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?