ರೋಹಿಂಗ್ಯಾಗಳಿಗೆ ಭಾರತವೇ ಏಕೆ ಬೇಕು?

By Suvarna Web DeskFirst Published Sep 26, 2017, 9:55 PM IST
Highlights

ರೋಹಿಂಗ್ಯಾ ಮುಸ್ಲಿಮರಿಗೆ ಭಾರತ ಆಶ್ರಯ ನೀಡಬೇಕು ಎಂಬ ಪ್ರತಿಭಟನೆಗಳು ದೇಶದಲ್ಲಿ ನಿತ್ಯ ನಡೆಯುತ್ತಲೇ ಇವೆ. ಮುಸ್ಲಿಂ ಮುಖಂಡರು, ಹೋರಾಟಗಾರರು, ಬುದ್ದಿಜೀವಿಗಳು ಈ ಆಗ್ರಹವನ್ನು ಮಾಡುತ್ತಲೇ ಇವೆ. ದೇಶದ ಭದ್ರತೆಗೆ ರೋಹಿಂಗ್ಯಾ ಮುಸ್ಲಿಮರು ಅಪಾಯ ಅಂತ ಕೇಂದ್ರ ಸರ್ಕಾರ ದೇಶದಲ್ಲಿರುವ ರೋಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ ನಿರ್ಧರಿಸಿದ ನಂತರವೂ ಈ ಪ್ರತಿಭಟನೆ ಮುಂದುವರಿದಿದೆ... ಈಗ ಅದೇ ರೋಹಿಂಗ್ಯಾ ಮುಸ್ಲಿಮರು ಮಯನ್ಮಾರ್​ನಲ್ಲಿ ಹಿಂದೂಗಳ ಮಾರಣಹೋಮ ನಡೆಸಿರುವ ಸ್ಫೋಟಕ ಸತ್ಯ ಬಯಲಾಗಿದೆ. ತಮ್ಮ ಉಗ್ರ ಕೃತ್ಯಗಳಿಂದಲೇ ಯಾವ ದೇಶಗಳಿಗೂ ಬೇಡವಾಗಿರುವ ರೋಹಿಂಗ್ಯಾ ಉಗ್ರ ಗುಂಪುಗಳ ಅಸಲೀತನ ಬಯಲಾಗಿದೆ.

ಬೆಂಗಳೂರು (ಸೆ.26):  ರೋಹಿಂಗ್ಯಾ ಮುಸ್ಲಿಮರಿಗೆ ಭಾರತ ಆಶ್ರಯ ನೀಡಬೇಕು ಎಂಬ ಪ್ರತಿಭಟನೆಗಳು ದೇಶದಲ್ಲಿ ನಿತ್ಯ ನಡೆಯುತ್ತಲೇ ಇವೆ. ಮುಸ್ಲಿಂ ಮುಖಂಡರು, ಹೋರಾಟಗಾರರು, ಬುದ್ದಿಜೀವಿಗಳು ಈ ಆಗ್ರಹವನ್ನು ಮಾಡುತ್ತಲೇ ಇವೆ. ದೇಶದ ಭದ್ರತೆಗೆ ರೋಹಿಂಗ್ಯಾ ಮುಸ್ಲಿಮರು ಅಪಾಯ ಅಂತ ಕೇಂದ್ರ ಸರ್ಕಾರ ದೇಶದಲ್ಲಿರುವ ರೋಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ ನಿರ್ಧರಿಸಿದ ನಂತರವೂ ಈ ಪ್ರತಿಭಟನೆ ಮುಂದುವರಿದಿದೆ... ಈಗ ಅದೇ ರೋಹಿಂಗ್ಯಾ ಮುಸ್ಲಿಮರು ಮಯನ್ಮಾರ್​ನಲ್ಲಿ ಹಿಂದೂಗಳ ಮಾರಣಹೋಮ ನಡೆಸಿರುವ ಸ್ಫೋಟಕ ಸತ್ಯ ಬಯಲಾಗಿದೆ. ತಮ್ಮ ಉಗ್ರ ಕೃತ್ಯಗಳಿಂದಲೇ ಯಾವ ದೇಶಗಳಿಗೂ ಬೇಡವಾಗಿರುವ ರೋಹಿಂಗ್ಯಾ ಉಗ್ರ ಗುಂಪುಗಳ ಅಸಲೀತನ ಬಯಲಾಗಿದೆ.

ರೋಹಿಂಗ್ಯಾಗಳ ನೆಲೆ ರಖಿನೆ ಪ್ರಾಂತ್ಯದ ಹಳ್ಳಿಯೊಂದರಲ್ಲಿ 28 ಹಿಂದೂಗಳನ್ನು ಹತ್ಯೆ ಮಾಡಿ ಸಾಮೂಹಿಕ ಸಮಾದಿ ಮಾಡಲಾಗಿದೆ ಎಂದು ಮಯನ್ಮಾರ್ ಸೇನೆ ಅಧಿಕೃತವಾಗಿ ಹೇಳಿದೆ. ಆಗಸ್ಟ್​ 25 ರಂದು ರೋಹಿಂಗ್ಯಾ ಉಗ್ರಗಾಮಿಗಳು ಮಿಲಿಟರಿ ಕಾರ್ಯಾಚರಣೆಗೆ ವಿರುದ್ಧವಾಗಿ ಹಿಂದೂಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ್ದಾರೆ ಎಂದು ಸೇನೆ ತಿಳಿಸಿದೆ. ರೋಹಿಂಗ್ಯಾ ಉಗ್ರರಿಂದ ವಶಪಡಿಸಿಕೊಂಡ ಜಾಗದಲ್ಲಿ ಈ ಸಾಮೂಹಿಕ ಸಮಾದಿ ಪತ್ತೆಯಾಗಿದ್ದು, ಭದ್ರತಾ ಕಾರಣಗಳಿಗಾಗಿ ತಡವಾಗಿ ಬಹಿರಂಗಪಡಿಸಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.

ರೋಹಿಂಗ್ಯಾ ಮುಸ್ಲಿಂ ಭಯೋತ್ಪಾದಕ ಸಂಘಟನೆ ಅರಕಾನ್ ರೋಹಿಂಗ್ಯಾ ಸೆಲ್ವೇಷನ್ ಆರ್ಮಿ ಇದುವರೆಗೂ ಮಯನ್ಮಾರ್ ಗಡಿಯಲ್ಲಿ  86 ಹಿಂದೂಗಳನ್ನು ಹತ್ಯೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ಇದೆ. ರಖಿನೆ ರಾಜ್ಯದಲ್ಲಿ ಹಿಂದೂಗಳು ಮತ್ತು ಬೌದ್ಧ ಧರ್ಮೀಯರನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಹತ್ಯೆ ನಡೆಸಿದ ಹಿನ್ನೆಲೆಯಲ್ಲಿ ಮಯನ್ಮಾರ್ ಸೇನೆ ರೋಹಿಂಗ್ಯಾಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ರೋಹಿಂಗ್ಯಾ ಉಗ್ರರ ಉಪಟಳದಿಂದ ರಖಿನೆಯಲ್ಲಿ ನೆಮ್ಮದಿಯಾಗಿದ್ದ ರೋಹಿಂಗ್ಯಾ ಮುಸ್ಲಿಮರು ಮತ್ತು ಹಿಂದೂಗಳು ಅಲ್ಲಿಂದ ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದಾರೆ. ಬಾಂಗ್ಲಾದೇಶದಲ್ಲಿರುವ ನಿರಾಶ್ರಿತರ ಕ್ಯಾಂಪ್​ಗಳಲ್ಲೂ ರೋಹಿಂಗ್ಯಾ ಉಗ್ರರು ಹಿಂದೂ ನಿರಾಶ್ರಿತರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸುತ್ತಿದ್ದಾರೆ.

ಭಾರತ ಮತ್ತೊಂದು ಯೂರೋಪ್​ ಆಗಬೇಕಾ..?

ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಲು ಯಾವ ದೇಶಗಳೂ ಮುಂದಾಗದೇ ಇರೋದಕ್ಕೆ ಕಾರಣ ಇದೆ. ಇದೇ ನಿರಾಶ್ರಿತರ ಜೊತೆಯಲ್ಲಿ ಉಗ್ರರೂ ಕೂಡ ಸೇರಿ ಬಾಂಗ್ಲಾದೇಶ, ಮಯನ್ಮಾರ್, ಭಾರತ, ಥೈಲಾಂಡ್, ಮಲೇಷಿಯಾ ದೇಶಗಳಿಗೆ ಅಕ್ರಮವಾಗಿ ನುಸುಳುತ್ತಿದ್ದಾರೆ. ಸಿರಿಯಾ ನಿರಾಶ್ರಿತರ ಜೊತೆ ಉಗ್ರರನ್ನೂ ಒಳಬಿಟ್ಟುಕೊಂಡು ಯೂರೋಪ್ ಮಾಡಿದ ತಪ್ಪಿಗೆ ಅಲ್ಲಿ ಭಯೋತ್ಪಾದಕ ದಾಳಿಗಳು ನಡೆದವು. ಅದೇ ರೀತಿಯ ದಾಳಿಗಳು ಪುನರಾವರ್ತನೆಯಾಗಬಾರದು ಎಂಬ ಕಾರಣಕ್ಕೆ ರೋಹಿಂಗ್ಯಾಗಳಿಗೆ ಆಶ್ರಯ ನೀಡಲು ಭಾರತ ನಿರಾಕರಿಸುತ್ತಿದೆ.. ಇಡೀ ಭಾರತವನ್ನ ಮುಸ್ಲಿಂ ದೇಶವನ್ನಾಗಿ ಮಾಡುವ ಉದ್ದೇಶ ಹೊಂದಿರುವ ಅರಕಾನ್ ರೋಹಿಂಗ್ಯಾ ಸೆಲ್ವೇಷನ್ ಆರ್ಮಿಯ ಉಗ್ರರು ನಿರಾಶ್ರಿತರೊಂದಿಗೆ ದೇಶದೊಳಕ್ಕೆ ಬರುತ್ತಿದ್ದಾರೆ.

 

click me!