ವಿಶ್ವದಾದ್ಯಂತ ವಿವಾದಕ್ಕೀಡಾಗಿದೆ ಫಿಲಿಪ್ಪೀನ್ಸ್ ಅಧ್ಯಕ್ಷರ ಈ ಕೆಟ್ಟ ಹೇಳಿಕೆ

By Suvarna Web DeskFirst Published Feb 14, 2018, 9:15 AM IST
Highlights

​ದೌರ್ಜನ್ಯದ ಮೂಲಕ ಪ್ರತಿಭಟನೆಗಳನ್ನು ಹತ್ತಿಕ್ಕುವ ಆರೋಪ ಎದುರಿಸುತ್ತಿರುವ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡ್ಯುಯೆರ್ಟೆ ಮಹಿಳೆಯರ ಕುರಿತು ನೀಡಿರುವ ಕೆಟ್ಟಹೇಳಿಕೆಯು ಈಗ ವಿಶ್ವಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ‘

ಮನಿಲಾ: ದೌರ್ಜನ್ಯದ ಮೂಲಕ ಪ್ರತಿಭಟನೆಗಳನ್ನು ಹತ್ತಿಕ್ಕುವ ಆರೋಪ ಎದುರಿಸುತ್ತಿರುವ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡ್ಯುಯೆರ್ಟೆ ಮಹಿಳೆಯರ ಕುರಿತು ನೀಡಿರುವ ಕೆಟ್ಟಹೇಳಿಕೆಯು ಈಗ ವಿಶ್ವಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ‘ಮಹಿಳಾ ಬಂಡುಕೋರರನ್ನು ಸುಮ್ಮನೇ ಬಿಡಬೇಡಿ. ಅವರ ಯೋನಿಗೆ ಗುಂಡಿಕ್ಕಿ’ ಎಂದು ರಾಡ್ರಿಗೋ ಅವರು ದೇಶದ ಯೋಧರಿಗೆ ಕಳೆದ ವಾರ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.

 ಯೋಧರನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ‘ನಾವು ಮಹಿಳಾ ಬಂಡುಕೋರರನ್ನು ಕೊಲ್ಲುವುದಿಲ್ಲ. ನಾವು ನಿಮ್ಮ ಯೋನಿಗೆ ಗುಂಡಿಕ್ಕುತ್ತೇವಷ್ಟೇ. ಯೋಧರಿಗೆ ಈ ಸಂಬಂಧ ಆದೇಶಿಸಿದ್ದೇನೆ’ ಎಂದು ಅಧ್ಯಕ್ಷರು ಹೇಳಿದ್ದಾರೆ. ‘ಯೋನಿಯೇ ಇಲ್ಲವೆಂದರೆ ಮಹಿಳೆ ಪ್ರಯೋಜನಕ್ಕೆ ಬರಲ್ಲ’ ಎಂದು ರಾಡ್ರಿಗೋ ಹೇಳಿದರೆಂದು ಮಾಧ್ಯಮಗಳು ವರದಿ ಮಾಡಿವೆ.

 ಕಳೆದ ವರ್ಷವೂ ರಾಡ್ರಿಗೋ ಇಂಥದ್ದೇ ಹೇಳಿಕೆ ನೀಡಿದ್ದರು. ‘ಭುವನ ಸುಂದರಿಯನ್ನೇ ಅತ್ಯಾಚಾರ ಮಾಡಿ. ನಾನೇನೂ ಕೇಳಲ್ಲ. ಓರ್ವ ವ್ಯಕ್ತಿ ಗರಿಷ್ಠ 3 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದರೆ ಅದು ತಪ್ಪಲ್ಲ’ ಎಂದಿದ್ದರು.

click me!