ಯೋಧರ ಸಾವಿಗೂ ಜಾತಿ ಬಣ್ಣ ಮೆತ್ತಿದ ಒವೈಸಿ

By Suvarna Web DeskFirst Published Feb 14, 2018, 8:31 AM IST
Highlights

ಜಮ್ಮು- ಕಾಶ್ಮೀರದ ಸುಂಜ್ವಾನ್‌ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ ಏಳು ಜನರ ಪೈಕಿ ಐವರು ಕಾಶ್ಮೀರಿ ಮುಸ್ಲಿಮರಾಗಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ನವದೆಹಲಿ: ಜಮ್ಮು- ಕಾಶ್ಮೀರದ ಸುಂಜ್ವಾನ್‌ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ ಏಳು ಜನರ ಪೈಕಿ ಐವರು ಕಾಶ್ಮೀರಿ ಮುಸ್ಲಿಮರಾಗಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ಈ ಮೂಲಕ ಯೋಧರ ಸಾವಿಗೂ ಜಾತಿ ಬಣ್ಣ ಮೆತ್ತಿದ್ದಾರೆ. ಆದರೆ, ದೇಶದ ಕೆಲವು ವ್ಯಕ್ತಿಗಳು ಮುಸ್ಲಿಮರ ರಾಷ್ಟ್ರೀಯತೆಯನ್ನು ಅನುಮಾನಿಸುತ್ತಾರೆ. ಉಗ್ರರು ಕಾಶ್ಮೀರಿ ಮುಸ್ಲಿಮರನ್ನು ಹತ್ಯೆ ಮಾಡಿದ್ದಕ್ಕೆ ಯಾರೂ ಏನ್ನನ್ನೂ ಹೇಳುತ್ತಿಲ್ಲ.

ಕೆಲವರು ಮುಸ್ಲಿಮರನ್ನು ಪಾಕಿಸ್ತಾನಿಗಳು ಎಂದು ಕರೆಯುತ್ತಾರೆ. ಉಗ್ರರು ನಮ್ಮನ್ನೂ ಹತ್ಯೆ ಮಾಡಿದ್ದಾರೆ. ಮುಸ್ಲಿಮರ ನೈತಿಕತೆಯ ಬಗ್ಗೆ ಸಂದೇಹ ಪಡುವ ವ್ಯಕ್ತಿಗಳು ಇದರಿಂದ ಪಾಠ ಕಲಿಯುವ ಅಗತ್ಯವಿದೆ ಎಂದು ಒವೈಸಿ ಹೇಳಿದ್ದಾರೆ.

click me!