ಓವರ್ ಟೇಕ್ ಮಾಡಿದ್ದಕ್ಕೆ ಹತ್ಯೆ: ರಾಕಿ ಯಾದವ್ ಅಪರಾಧಿ

By Suvarna Web Desk  |  First Published Aug 31, 2017, 4:28 PM IST

ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಜೆಡಿಯು ನಾಯಕಿ ಮನೋರಮಾ ದೇವಿ ಪುತ್ರ ರಾಕಿ ಯಾದವ್ ದೋಷಿಯೆಂದು ವಿಚಾರಣಾ ನ್ಯಾಯಾಲಯವು ಘೋಷಿಸಿದೆ.


ಪಾಟ್ನಾ:  ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಜೆಡಿಯು ನಾಯಕಿ ಮನೋರಮಾ ದೇವಿ ಪುತ್ರ ರಾಕಿ ಯಾದವ್ ದೋಷಿಯೆಂದು ವಿಚಾರಣಾ ನ್ಯಾಯಾಲಯವು ಘೋಷಿಸಿದೆ.

ತನ್ನ ಕಾರಿಗೆ ದಾರಿ ಕೊಡಲಿಲ್ಲ ಎಂಬ ಕಾರಣಕ್ಕೆ ರಾಕಿ ಯಾದವ್, ಆದಿತ್ಯ ಸಚದೇವ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಘಟನೆ ಕಳೆದ ವರ್ಷ ಮೇ 7ರಂದು  ಬಿಹಾರದ ಗಯಾದಲ್ಲಿ ನಡೆದಿತ್ತು.

ಕಳೆದ  ಅಕ್ಟೋಬರ್ 19ರಂದು ಪಾಟ್ನಾ ಹೈಕೋರ್ಟ್ ಆರೋಪಿ ರಾಕಿ ಯಾದವ್’ಗೆ ಜಾಮೀನು ನೀಡಿತ್ತು. ಆದರೆ ಪಾಟ್ನಾ ಹೈಕೋರ್ಟ್ ನೀಡಿರುವ ಜಾಮೀನಿಗೆ ಸುಪ್ರೀಂ ಕೋರ್ಟ್  ತಡೆಯಾಜ್ಞೆ ನೀಡಿತ್ತು. ಹಾಗೂ ಪ್ರಕರಣವನ್ನು ವಿಚಾರಣೆ ನಡೆಸಿ ಸೆ. 5ರೊಳಗೆ ತೀರ್ಪು ನೀಡುವಂತೆ ಸುಪ್ರೀಂ ಸೂಚಿಸಿತ್ತು.

ಕಳೆದ 15 ತಿಂಗಳುಗಳಲ್ಲಿ ಈ ಪ್ರಕರಣವು ಭಾರಿ ತಿರುವುಗಳನ್ನು ಪಡೆದುಕೊಂಡಿತ್ತು. ಪ್ರಕರಣದ 4 ಆರೋಪಿಗಳ ಪೈಕಿ 3 ಮಂದಿ ರಾಕಿ ಯಾದವ್ ಕುಟುಂಬಸ್ಥರೇ ಆಗಿದ್ದಾರೆ.



 

click me!