
ನವದೆಹಲಿ: 200 ಆನೆಗಳಷ್ಟುತೂಕ ಹೊಂದಿರುವ, ಭಾರತ ಇದುವರೆಗೂ ಅಭಿವೃದ್ಧಿಪಡಿಸಿದ ಉಪಗ್ರಹಗಳಲ್ಲೇ ಅತ್ಯಂತ ಬೃಹತ್ ಗಾತ್ರದ್ದಾಗಿರುವ ಜಿಎಸ್‌ಎಲ್‌ವಿ ಮಾರ್ಕ್-3 ರಾಕೆಟ್ ಅನ್ನು ಜೂನ್ ಮೊದಲ ವಾರ ಪ್ರಾಯೋಗಿಕವಾಗಿ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಭರದ ಸಿದ್ಧತೆಯಲ್ಲಿ ತೊಡಗಿದೆ.
ಭವಿಷ್ಯದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಬಾಹ್ಯಾಕಾಶ ಯಾತ್ರೆಗೂ ಇದೇ ರಾಕೆಟ್ ಬಳಕೆಯಾಗಬಹುದು ಎಂದು ಎಣಿಸಲಾಗಿದೆ. ಚೊಚ್ಚಲ ಮಾನವಸಹಿತ ಗಗನಯಾತ್ರೆ ಕೈಗೊಳ್ಳುವ ಭಾರತೀಯ ವ್ಯಕ್ತಿಯ ಮಹಿಳೆಯೇ ಆಗಿರಲಿದ್ದಾರೆ ಎಂದು ಇಸ್ರೋ ಹೇಳಿಕೊಳ್ಳುತ್ತಿದೆ.
ಆಂಧ್ರದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿರುವ ಈ ರಾಕೆಟ್ 8 ಟನ್ ಗಾತ್ರದವರೆಗಿನ ವಸ್ತುಗಳನ್ನೂ ನಭೋಮಂಡಲಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸ್ವದೇಶಿ ನಿರ್ಮಿತ ರಾಕೆಟ್ ಇದಾಗಿದ್ದು, 640 ಟನ್ ತೂಕವಿದೆ. ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿರುವ ಐದು ಜಂಬೋಜೆಟ್ ವಿಮಾನಗಳಿಗೆ ಈ ತೂಕ ಸಮ ಎಂಬುದು ಗಮನಾರ್ಹ. ಈ ರಾಕೆಟ್ ನಿರ್ಮಾಣಕ್ಕೆ 300 ಕೋಟಿ ರು. ವೆಚ್ಚವಾಗಿದೆಯಾದರೂ, ಭಾರತದ ಸಂಪರ್ಕ ಉಪಗ್ರಹಗಳನ್ನು ಉಡಾವಣೆ ಮಾಡಲು ಬೇರೆ ದೇಶಗಳ ಮೇಲಿನ ಅವಲಂಬನೆ ತಪ್ಪುವುದರಿಂದ ಅಷ್ಟೇ ಮೊತ್ತ ಉಳಿತಾಯವಾಗಲಿದೆ.
(ಸಾಂದರ್ಭಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.