2019ಕ್ಕೆ ಎಲ್ಲರಿಗೂ ಬಿಎಸ್'ಎನ್'ಎಲ್ ಸ್ಯಾಟಲೈಟ್‌ ಫೋನ್‌

By Suvarna Web DeskFirst Published May 29, 2017, 12:47 PM IST
Highlights

ಎಲ್ಲರಿಗೂ ಸ್ಯಾಟಲೈಟ್‌ ಫೋನ್‌ ಸೇವೆ ನೀಡುವ ಸಲುವಾಗಿ ನಾವು ಇಂಟರ್‌ನ್ಯಾಷನಲ್‌ ಮೇರಿಟೈಮ್‌ ಆರ್ಗನೈಸೇಷನ್‌ಗೆ ಕೋರಿಕೆ ಸಲ್ಲಿಸಿದ್ದೇವೆ. ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ಸಮಯ ತಗುಲಲಿದ್ದು, 18-​24 ತಿಂಗಳಿನಲ್ಲಿ ಎಲ್ಲಾ ನಾಗರಿಕರಿಗೂ ಹಂತ ಹಂತವಾಗಿ ಸ್ಯಾಟಲೈಟ್‌ ಫೋನ್‌ ಸೇವೆ ಆರಂಭಿಸಲು ಸಾಧ್ಯವಾಗಲಿದೆ ಎಂದು ಬಿಎಸ್‌ಎನ್‌ಎಲ್‌ ಮುಖ್ಯಸ್ಥ ಅನುಪಮ್‌ ಶ್ರೀವಾಸ್ತವ ಅವರು ತಿಳಿಸಿದ್ದಾರೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಇನ್ನೆರಡು ವರ್ಷದಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಸ್ಯಾಟಲೈಟ್‌ (ಉಪಗ್ರಹ) ಫೋನ್‌ ಸೇವೆ ನೀಡಲು ಉದ್ದೇಶಿಸಿದೆ. ಸ್ಯಾಟಲೈಟ್‌ ಫೋನ್‌ ದೇಶದ ಯಾವುದೇ ಮೂಲೆಯಲ್ಲಿಯೂ ಕಾರ್ಯನಿರ್ವಹಿಸಬಲ್ಲದು. ಅಲ್ಲದೇ ನೈಸರ್ಗಿಕ ವಿಕೋಪದಿಂದಾಗಿ ಮೊಬೈಲ್‌ ಸೇವೆಗಳು ವ್ಯತ್ಯಯಗೊಂಡರೂ ಸ್ಯಾಟಲೈಟ್‌ ಫೋನ್‌ಗಳಿಗೆ ಹಾನಿ ಇಲ್ಲ.

ಎಲ್ಲರಿಗೂ ಸ್ಯಾಟಲೈಟ್‌ ಫೋನ್‌ ಸೇವೆ ನೀಡುವ ಸಲುವಾಗಿ ನಾವು ಇಂಟರ್‌ನ್ಯಾಷನಲ್‌ ಮೇರಿಟೈಮ್‌ ಆರ್ಗನೈಸೇಷನ್‌ಗೆ ಕೋರಿಕೆ ಸಲ್ಲಿಸಿದ್ದೇವೆ. ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ಸಮಯ ತಗುಲಲಿದ್ದು, 18-​24 ತಿಂಗಳಿನಲ್ಲಿ ಎಲ್ಲಾ ನಾಗರಿಕರಿಗೂ ಹಂತ ಹಂತವಾಗಿ ಸ್ಯಾಟಲೈಟ್‌ ಫೋನ್‌ ಸೇವೆ ಆರಂಭಿಸಲು ಸಾಧ್ಯವಾಗಲಿದೆ ಎಂದು ಬಿಎಸ್‌ಎನ್‌ಎಲ್‌ ಮುಖ್ಯಸ್ಥ ಅನುಪಮ್‌ ಶ್ರೀವಾಸ್ತವ ಅವರು ತಿಳಿಸಿದ್ದಾರೆ.

ಸ್ಯಾಟಲೈಟ್‌ ಫೋನ್‌ಗಳು ಭೂಮಿಯಿಂದ 35,700 ಅಡಿ ಎತ್ತದಲ್ಲಿರುವ ಉಪಗ್ರಹಗಳಿಂದ ನೇರವಾಗಿ ಸಂಕೇತಗಳನ್ನು ಪಡೆಯುವುದರಿಂದ ವಿಮಾನ, ಹಡಗುಗಳ ಒಳಗೂ ಕಾರ್ಯನಿರ್ವಹಿಸಲಿವೆ. ಆದರೆ, ಸಾಂಪ್ರದಾಯಿಕ ಮೊಬೈಲ್‌ ಫೋನ್‌ಗಳು ಟವರ್‌ಗಳಿಂದ 25​-30 ಕಿ.ಮೀ.ಯ ಸುತ್ತಮುತ್ತ ಮಾತ್ರ ಕಾರ್ಯನಿರ್ವಹಿಸುತ್ತವೆ.

ವೆಚ್ಚ ಕಡಿಮೆ ಆಗುವ ನಿರೀಕ್ಷೆ: ಮೊದಲ ಹಂತದಲ್ಲಿ ವಿಪತ್ತು ನಿರ್ವಹಣಾ ಸಂಸ್ಥೆಗಳು, ರಾಜ್ಯ ಪೊಲೀಸ್‌, ರೈಲ್ವೆ, ಗಡಿ ಭದ್ರತಾ ಪಡೆ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಸ್ಯಾಟಲೈಟ್‌ ಫೋನ್‌ಗಳನ್ನು ನೀಡಲಾಗುತ್ತದೆ. ಸೇವೆ ವಿಸ್ತರಿಸಿ ಹೆಚ್ಚು ಹೆಚ್ಚು ಜನರು ಸ್ಯಾಟಲೈಟ್‌ ಫೋನ್‌ ಬಳಸಲು ಆರಂಭಿಸಿದರೆ ರೂ.40,000 ಬೆಲೆಯ ಫೋನ್‌ ದರ ಕಡಿಮೆಯಾಗಲಿದೆ.

(ಸಾಂದರ್ಭಿಕ ಚಿತ್ರ)

click me!