'ರಫೇಲ್ ಒಪ್ಪಂದದ ಮೇಲೆ ಕಣ್ಣಿಟ್ಟಿದ್ದ ವಾದ್ರಾ'

By Web DeskFirst Published Sep 24, 2018, 10:23 PM IST
Highlights

ರಫೇಲ್ ಡೀಲಿನಲ್ಲಿ ರಿಲಯನ್ಸ್ ಕಂಪನಿಯನ್ನು ಪಾಲುದಾರನನ್ನಾಗಿ ಮಾಡಿಕೊಳ್ಳಲು ಭಾರತವೇ ಸೂಚಿಸಿತ್ತು ಎಂದು ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಯಾಂಡ್ ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೇ ಹೇಳಿಕೆ ಮುಂದಿಟ್ಟುಕೊಂಡೇ ರಾಹುಲ್ ಗಾಂಧಿಯನ್ನು ಕಳ್ಳ ಎಂದು ಕರೆದಿದ್ದರು. 

ನವದೆಹಲಿ[ಸೆ.24]: ರಫೇಲ್ ಹೆಸರಿನಲ್ಲಿ ನಡೆಯುತ್ತಿರುವ ವಿವಾದಕ್ಕೆ ಬಿಜೆಪಿ ರಾಬರ್ಟ್ ವಾದ್ರಾರನ್ನು ಎಳೆತಂದಿದೆ. ರಾಬರ್ಟ್ ವಾದ್ರಾಗೆ ವ್ಯಾವಹಾರಿಕ ಸ್ನೇಹಿತನಾಗಿರುವ  ಉದ್ಯಮಿ ಸಂಜಯ್ ಬಂಡಾರಿ ಡೋಸಾಲ್ಟ್ ಏವಿಯೇಷನ್ ಜತೆ ಒಪ್ಪಂದಕ್ಕೆ ಲಾಬಿ ನಡೆಸಿದ್ದರು. ಆದರೆ ಡೋಸಾಲ್ಟ್ ಕಂಪನಿ ಸಂಜಯ್ ಬಂಡಾರಿ ಜತೆ ಒಪ್ಪಂದಕ್ಕೆ ನಿರಾಕರಿಸಿತ್ತು. ಇದೇ ಕಾರಣದಿಂದ ರಾಬರ್ಟ್ ವಾದ್ರಾ ಪರವಾಗಿ ರಾಹುಲ್ ಹೋರಾಟ ನಡೆಸುತ್ತಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ರಫೇಲ್ ಡೀಲಿನಲ್ಲಿ ರಿಲಯನ್ಸ್ ಕಂಪನಿಯನ್ನು ಪಾಲುದಾರನನ್ನಾಗಿ ಮಾಡಿಕೊಳ್ಳಲು ಭಾರತವೇ ಸೂಚಿಸಿತ್ತು ಎಂದು ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಯಾಂಡ್ ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೇ ಹೇಳಿಕೆ ಮುಂದಿಟ್ಟುಕೊಂಡೇ ರಾಹುಲ್ ಗಾಂಧಿಯನ್ನು ಕಳ್ಳ ಎಂದು ಕರೆದಿದ್ದರು. ಆದರೆ ಈ ವಿಚಾರ ವಿವಾದಕ್ಕೊಳಗಾಗುತ್ತಿದ್ದಂತೆ ಉಲ್ಟಾ ಹೊಡೆದಿದ್ದ ಫ್ರಾಂಕೋಯಿಸ್ ಹೊಲ್ಯಾಂಡ್ ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದಿದ್ದರು. ರಫೇಲ್ ವಿಚಾರದಲ್ಲಿ ಮುಂದಿನ ಕೆಲ ವಾರಗಳಲ್ಲಿ ಬಾಂಬ್ ಸ್ಫೋಟವಾಗಲಿದೆ ಎಂಬರ್ಥದಲ್ಲಿ ಆಗಸ್ಟ್ 30ರಂದು ರಾಹುಲ್ ಮಾಡಿದ್ದ ಟ್ವೀಟ್, ಅದರ ಬೆನ್ನಿಗೇ ಫ್ರಾಂಕೋಯಿಸ್ ಹೊಲ್ಯಾಂಡ್ ನೀಡಿದ ಹೇಳಿಕೆ ನೀಡಿದರೆ ಇದು ಸರ್ಕಾರದ ವಿರುದ್ಧದ ದೊಡ್ಡ ಪಿತೂರಿ ಎಂದು ಅರುಣ್ ಜೇಟ್ಲಿ ಆರೋಪಿಸಿದ್ದಾರೆ.

ಮುಂದುವರೆದ ರಂಪಾಟ
ರಫೇಲ್ ಡೀಲ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನಡೆಯುತ್ತಿರುವ ವಿವಾದದ ವಾರ್ ಮುಂದುವರಿದಿದೆ. ಮೋದಿಯನ್ನು ಕಳ್ಳ ಎಂದು ಕರೆದು ವಿವಾದ ಮೈಮೇಲೆ ಎಳೆದುಕೊಂಡಿದ್ದ ರಾಹುಲ್ ಗಾಂಧಿ ಈಗ ತಮ್ಮ ಮಾತನ್ನು ಪುನರುಚ್ಚರಿಸಿದ್ದಾರೆ. ಟ್ವೀಟ್ ಮಾಡಿರುವ ಎಐಸಿಸಿ ಅಧಿನಾಯಕ, ಮೋದಿಯನ್ನು ಕಳ್ಳರ ಕಮಾಂಡರ್ ಎಂದು ಜರಿದಿದ್ದಾರೆ. ಆ ಮೂಲಕ ಮುಂದಿನ ಚುನಾವಣೆಗೆ ರಫೇಲ್ ಡೀಲ್ ವಿಚಾರವೇ ಚುನಾವಣಾ ಅಸ್ತ್ರ ಎಂದು ಸಾರಿದ್ದಾರೆ.

ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಒಂದೇ ಒಂದು ಭ್ರಷ್ಟಾಚಾರದ ಆರೋಪ ಕೇಳಿಬಂದಿರಲಿಲ್ಲ. ಆದರೆ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ರಾಹುಲ್ ಗಾಂಧಿ ನಿರಂತರವಾಗಿ ಆರೋಪ ಮಾಡುತ್ತಲೇ ಇರುವುದರಿಂದ ಪ್ರಧಾನಿ ಮೋದಿ ಮೌನ ಮುರಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದಂತಿದೆ. 
 

click me!