ಸುರಂಗ ಕೊರೆದು ಕೋಟ್ಯಂತರ ದೋಚಿದ ದರೋಡೆಕೋರರು

Published : Nov 14, 2017, 04:08 PM ISTUpdated : Apr 11, 2018, 12:49 PM IST
ಸುರಂಗ ಕೊರೆದು ಕೋಟ್ಯಂತರ ದೋಚಿದ ದರೋಡೆಕೋರರು

ಸಾರಾಂಶ

ಭಾನುವಾರ ರಾತ್ರಿ ಬರೋಡ ಬ್ಯಾಂಕ್'ನಲ್ಲಿ ಈ ದರೋಡೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಸೋಮವಾರ ಬ್ಯಾಂಕ್'ಗೆ ಆಗಮಿಸಿ ಲಾಕರ್'ಗಳ ಪರಿಶೀಲಿಸಿದಾಗ ಪ್ರಕರಣ ಬೆಳಕಿದೆ ಬಂದಿದೆ.

ಮುಂಬೈ(ನ.14):  ಈ ಘಟನೆ ನಿಮಗೆ ಹಾಲಿವುಡ್ ಸಿನಿಮಾಗಳನ್ನು ನೆನಪಿಸುತ್ತದೆ. ವಾಣಿಜ್ಯ ರಾಜಧಾನಿ ನೇವಿ ಮುಂಬೈನಲ್ಲಿ 30 ಅಡಿ ಸುರಂಗ ಕೊರೆದು ಒಳನುಗ್ಗಿರುವ ದರೋಡೆಕೋರರು 30 ಲಾಕರ್'ಗಳಲ್ಲಿದ್ದ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.

ಭಾನುವಾರ ರಾತ್ರಿ ಬರೋಡ ಬ್ಯಾಂಕ್'ನಲ್ಲಿ ಈ ದರೋಡೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಸೋಮವಾರ ಬ್ಯಾಂಕ್'ಗೆ ಆಗಮಿಸಿ ಲಾಕರ್'ಗಳ ಪರಿಶೀಲಿಸಿದಾಗ ಪ್ರಕರಣ ಬೆಳಕಿದೆ ಬಂದಿದೆ. ಲಾಕರ್ ಬಳಿ ಗುಂಡಿ ಪತ್ತೆಯಾಗಿದ್ದು ಗುಂಡಿಯನ್ನು ಪರಿಶೀಲನೆಗೊಳಪಡಿಸಿದಾಗ 30 ಅಡಿ ಸುರಂಗ ಬ್ಯಾಂಕ್ ಹತ್ತಿರದಲ್ಲೇ ಇರುವ ದಿನಸಿ ಅಂಗಡಿಗೆ ಸಂಪರ್ಕ ಕಲ್ಪಿಸಿದೆ.

ದರೋಡೆಕೋರರು ದಿನಸಿ ಅಂಗಡಿಯಿಂದ ಸುರಂಗ ಕೊರೆದಿರುವ ಸಾಧ್ಯತೆಯಿದೆ. 2 ಅಡಿ ಅಗಲವಿರುವ ಸುರಂಗ ಒಬ್ಬ ಮನುಷ್ಯ ನುಸುಳಿಹೋಗಬಹುದಾಗಿದೆ. ಬ್ಯಾಂಕ್ ಲೂಟಿಯಾದ ದಿನದಿಂದ ದಿನಸಿ ಅಂಗಡಿ ಮಾಲೀಕ ನಾಪತ್ತೆಯಾಗಿದ್ದಾನೆ. ಮೂಲತಃ ಜಾರ್ಖಂಡ್ ರಾಜ್ಯದವನಾದ ಈತ ಕೆಲವು ತಿಂಗಳ ಹಿಂದೆ ಮಳಿಗೆಯನ್ನು ಬಾಡಿಗೆ ಪಡೆದು ದಿನಸಿ ಅಂಗಡಿ ತೆರೆದಿದ್ದ. ಆದರೆ ಇದು ಈತನ ಕೃತ್ಯವೇ ಅಥವಾ ಬೇರೆಯವರು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!