
ನವದೆಹಲಿ[ಜೂ.06]: ಉದ್ಯಮಿ ಆನಂದ್ ಮಹೀಂದ್ರ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಆಗಿರುತ್ತಾರೆ, ಅಲ್ಲದೇ ಹಲವಾಋಉ ವೈರಲ್ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಈ ಬಾರಿ ಅವರು ಶೇರ್ ಮಾಡಿರುವ ಫೋಟೋ ಒಂದು ಪ್ರತಿಯೊಬ್ಬರನ್ನೂ ನಗೆ ಗಡಲಲ್ಲಿ ತೇಲಿಸುವಂತಿದೆ. ಅಷ್ಟಕ್ಕೂ ಫೋಟೋದಲ್ಲೇನಿದೆ?
ಈ ಬಾರಿ ಆನಂದ್ ಮಹೀಂದ್ರ ಶೇರ್ ಮಾಡಿರುವುದು ಜಾಹೀರಾತು ಒಂದರ ಫೋಟೋ. ಬಾಡಿ ಮಸಾಜ್ ನ ಈ ಜಾಹೀರಾತು ಇದೀಗ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ರೋಡ್ ರೋಲರ್ ನ ರೋಲರ್ ಮೇಲೆ ಈ ಜಾಹೀರಾತನ್ನು ಅಂಟಿಸಿದ್ದಾರೆ. ಈ ಜಾಹೀರಾತಿನಲ್ಲಿ ಕೇವಲ 499 ರೂಪಾಯಿಗೆ ಬಾಡಿ ಮಸಾಜ್ ಆಫರ್ ಇರುವುದಾಗಿಯೂ ತಿಳಿಸಲಾಗಿದೆ.
ಈ ಫೋಟೋ ಶೇರ್ ಮಾಡಿಕೊಂಡಿರುವ ಆನಂದ್ ಮಹೀಂದ್ರ ಈ ಮಸಾಜ್ ಬಳಿಕ, ಬೇರೆ ಯಾವುದೇ ರೀತಿಯ ಮಸಾಜ್ ಮಾಡಿಸುವ ಸಗತ್ಯ ಬೀಳುವುದಿಲ್ಲ. ಇದು ಎಲ್ಲಾ ರೀತಿಯ ರೋಗಗಳಿಗೂ ಸೂಕ್ತವಾದ ಚಿಕಿತ್ಸೆ[ಈ ಜಾಹೀರಾತು ಅಂಟಿಸಿದಾತ ಅದ್ಭುತ ಹಾಸ್ಯ ಪ್ರಜ್ಞೆಯುಳ್ಳ ವ್ಯಕ್ತಿಯಾಗಿರಬಹುದು, ಇಲ್ಲವೇ ಆತ ಏನೂ ತಿಳಿಯದ ಹೆಡ್ಡನಿರಬೇಕು ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋ ಹಾಗೂ ಫೋಟೋ ಶೇರ್ ಮಾಡುವಲ್ಲಿ ಮುಂಚೂಣಿಯಲ್ಲಿರುವ ಆನಂದ್ ಮಹೀಂದ್ರರಿಗೆ ಟ್ವಿಟರ್ ನಲ್ಲಿ ಸುಮಾರು 7 ಮಿಲಿಯನ್ ಹಿಂಬಾಲಕರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.