ಬಾಂಗ್ಲಾ ನಟಿ ಬಿಜೆಪಿಗೆ: ಪೌರತ್ವದ ಬಗ್ಗೆ ಎದ್ದಿದೆ ನೂರಾರು ಪ್ರಶ್ನೆ

By Web DeskFirst Published Jun 6, 2019, 2:02 PM IST
Highlights

ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ನಟಿಯೋರ್ವರು ಬಿಜೆಪಿ ಸೇರ್ಪಡೆಯಾಗಿದ್ದು, ಇದೀಗ ವಿಪಕ್ಷಗಳಿಗೆ ಆಹಾರವಾಗಿದೆ. ನಟಿ ಸೇರ್ಪಡೆ ಬಗ್ಗೆ ಪ್ರಶ್ನೆ ಎದ್ದಿದೆ. 

ಕೋಲ್ಕತಾ : ಬಾಂಗ್ಲಾದೇಶ ಮೂಲದ ನಟಿ 80ರ ದಶಕದ ನಟಿ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. 30 ವರ್ಷಗಳ ಹಿಂದಿನ ಸೂಪರ್ ಸ್ಟಾರ್ ಅಂಜು ಘೋಷ್ ಕಮಲದ ಕೈ ಹಿಡಿದಿದ್ದಾರೆ. 

53 ವರ್ಷದ ಅಂಜು ಘೋಷ್ 2002ರಲ್ಲೇ ಭಾರತೀಯ ಪಾಸ್ ಪೋರ್ಟ್ ಪಡೆದಿದ್ದು  ಮತದಾರರ ಚೀಟಿ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. 

ಕೋಲ್ಕತಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದು, ಪಕ್ಷದ ನಾಯಕರು ಅಂಜು ಘೋಷ್ ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದ್ದಾರೆ. 

ಇನ್ನು ಅಂಜು ಘೋಷ್ ಪಕ್ಷ ಸೇರ್ಪಡೆಯಾಗಿರುವ ಸಂಬಂಧ ವಿಪಕ್ಷಗಳಿಂದ ಪ್ರಶ್ನೆ ಎದ್ದಿದ್ದು, ಅವರ ಭಾರತೀಯ ಪೌರತ್ವದ ಬಗ್ಗೆ ಇನ್ನೂ ಕೂಡ ಸ್ಪಷ್ಟನೆ ಇಲ್ಲದಾಗ ಅದು ಹೇಗೆ ಭಾರತೀಯ ಪಕ್ಷವೊಂದನ್ನು ಸೇರ್ಪಡೆಯಾದರು ಎಂದು ಪ್ರಶ್ನೆ ಮಾಡಿದ್ದಾರೆ. 

ಲೋಕಸಭಾ ಚುನಾವಣೆ ಅವಧಿಯಲ್ಲಿ ಬಂಗ್ಲಾದೇಶದ ನಟರು ಟಿಎಂಸಿ ಪರವಾಗಿ ಪ್ರಚಾರ ಮಾಡಿದ್ದಕ್ಕೆ ಬಿಜೆಪಿ ಪ್ರಶ್ನೆ ಮಾಡಿದ್ದು, ಬಳಿಕ ಅವರನ್ನು ದೇಶದಿಂದ ಹೊರಹಾಕಲಾಗಿತ್ತು. ಈ ನಿಟ್ಟಿನಲ್ಲಿ ಬಾಂಗ್ಲಾದೇಶದ ತಾರೆ ಭಾರತೀಯ ಪಕ್ಷ ಸೇರಿದ್ದಕ್ಕೆ ವಿಪಕ್ಷಗಳು ಪ್ರಶ್ನೆ ಮಾಡಿವೆ. 

click me!