ಆರು ತಿಂಗಳು ಜೈಲಿನಲ್ಲಿದ್ದ ಲಾಲುಗೆ ₹10 ಸಾವಿರ ಪಿಂಚಣಿ

Published : Jan 12, 2017, 10:45 AM ISTUpdated : Apr 11, 2018, 12:47 PM IST
ಆರು ತಿಂಗಳು ಜೈಲಿನಲ್ಲಿದ್ದ ಲಾಲುಗೆ ₹10 ಸಾವಿರ ಪಿಂಚಣಿ

ಸಾರಾಂಶ

1975ರ ತುರ್ತು ಪರಿಸ್ಥಿತಿ ವೇಳೆ ಜೈಲು ಶಿಕ್ಷೆ ಅನುಭವಿಸಿದ್ದಕ್ಕಾಗಿ ‘ಜೆ.ಪಿ.ಸೇನಾನಿ ಸಮ್ಮಾನ್ ಪಿಂಚಣಿ’ ಯೋಜನೆಯನ್ವಯ ಲಾಲು ಅವರಿಗೆ ಈ ಸೌಲಭ್ಯ ಸಿಗಲಿದೆ.

ಪಟನಾ(ಜ.12): ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ₹10 ಸಾವಿರ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಬಿಹಾರ ಸರ್ಕಾರ ಒಪ್ಪಿಗೆ ನೀಡಿದೆ.

1975ರ ತುರ್ತು ಪರಿಸ್ಥಿತಿ ವೇಳೆ ಜೈಲು ಶಿಕ್ಷೆ ಅನುಭವಿಸಿದ್ದಕ್ಕಾಗಿ ‘ಜೆ.ಪಿ.ಸೇನಾನಿ ಸಮ್ಮಾನ್ ಪಿಂಚಣಿ’ ಯೋಜನೆಯನ್ವಯ ಲಾಲು ಅವರಿಗೆ ಈ ಸೌಲಭ್ಯ ಸಿಗಲಿದೆ.

ಹಾಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ 2009ರಲ್ಲಿಯೇ ಈ ಯೋಜನೆ ಅನುಷ್ಠಾನಗೊಂಡಿತ್ತು. ಜೆ.ಪಿ.ಚಳವಳಿಯಲ್ಲಿ ಭಾಗವಹಿಸಿದ ಪ್ರಮುಖರಿಗಾಗಿ ಈ ಸೌಲಭ್ಯ ನೀಡಬೇಕೆನ್ನುವುದು ಈ ಯೋಜನೆಯ ಆಶಯ. ಬಿಹಾರ ಸರ್ಕಾರದ ದಾಖಲೆಗಳ ಪ್ರಕಾರ ಸೌಲಭ್ಯ ಪಡೆಯಲು 3,200 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 2,500 ಮಂದಿಗೆ ಪಿಂಚಣಿ ಸಿಗುತ್ತಿದೆ.

ಎರಡು ವಿಧಗಳು: ಪಿಂಚಣಿ ಪಡೆಯಲು ಎರಡು ವಿಭಾಗಗಳಲ್ಲಿ ಬರುವವರು ಅರ್ಹರಾಗುತ್ತಾರೆ. ತುರ್ತು ಪರಿಸ್ಥಿತಿ ಅವಧಿಯಲ್ಲಿ 1 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರೆ ₹5 ಸಾವಿರ, 6 ತಿಂಗಳು, ಅದಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದರೆ ₹10 ಸಾವಿರ ಪಿಂಚಣಿಗೆ ಅರ್ಹರಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಲಾಲು ಯಾದವ್ 6 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರಿಂದ ಪ್ರತಿ ತಿಂಗಳು ₹10 ಸಾವಿರ ಪಿಂಚಣಿ ಪಡೆಯಲಿದ್ದಾರೆ. 2009ರಿಂದ ಯೋಜನೆ ಜಾರಿಯಾಗಿದ್ದುದರಿಂದ ಆ ವರ್ಷದಿಂದ ಪೂರ್ವಾನ್ವಯವಾಗಿ ಹಿಂಬಾಕಿ (ಅರಿಯರ್ಸ್) ಅನ್ನೂ ಪಡೆಯಲಿದ್ದಾರೆ.

ಪಟನಾ ವಿವಿ ವಿದ್ಯಾರ್ಥಿ ಸಂಘಟನೆ ನಾಯಕರಾಗಿದ್ದ ವೇಳೆ ಲಾಲು ಯಾದವ್ 1974ರ ಮಾ.18ರಂದು ಬಿಹಾರ ಪ್ರದೇಶ ಸಂಘರ್ಷ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರದ ದಿನಗಳಲ್ಲಿ ವಿದ್ಯಾರ್ಥಿ ಚಳವಳಿಯ ನೇತೃತ್ವವನ್ನು ಜಯಪ್ರಕಾಶ್ ನಾರಾಯಣ್ ವಹಿಸಿದ್ದರು. ಒಂದು ವರ್ಷ ಕಾಲ ಲಾಲು ಯಾದವ್ ಬಂಧನ ತಪ್ಪಿಸಿಕೊಳ್ಳುತ್ತಿದ್ದರು. ಹಲವೆಡೆ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅಂತಿಮವಾಗಿ ಅವರು ಸೆರೆ ಸಿಕ್ಕು, ಪಟನಾ ಮೆಡಿಕಲ್ ಕಾಲೇಜಿನಲ್ಲಿದ್ದ ತಾತ್ಕಾಲಿಕ ಜೈಲು ಮತ್ತು ಬಕ್ಸಾರ್‌'ನಲ್ಲಿರುವ ಕಾರಾಗೃಹದಲ್ಲಿದ್ದರು ಎಂದು ‘ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!