ಯೋಧರ ಆರೋಪ: ಸಮಗ್ರ ವರದಿ ನೀಡುವಂತೆ ಪ್ರಧಾನಿ ಕಚೇರಿ ಸೂಚನೆ

By Suvarna Web DeskFirst Published Jan 12, 2017, 10:41 AM IST
Highlights

ಸಿಆರ್’ಪಿಎಫ್ ಯೋಧರಿಗೆ ಪಿಂಚಣಿ, ವೈದ್ಯಕೀಯ ಸೇರಿದಂತೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಯೋಧ ಜೀತ್​ ಸಿಂಗ್ ಆರೋಪಿಸಿದ್ದಾರೆ.

ನವದೆಹಲಿ (ಜ.12): ಫೇಸ್​ಬುಕ್​​ನಲ್ಲಿ​ ಸಿಆರ್’ಪಿಎಫ್ ಪೇದೆ ಜೀತ್ ಸಿಂಗ್ ವಿಡಿಯೋ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಪ್ರಧಾನಿ ಕಾರ್ಯಾಲಯವು ಗೃಹ ಇಲಾಖೆಗೆ ಸೂಚಿಸಿದೆ.

ಸಿಆರ್’ಪಿಎಫ್ ಯೋಧರಿಗೆ ಪಿಂಚಣಿ​​, ವೈದ್ಯಕೀಯ ಸೇರಿದಂತೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಯೋಧ ಜೀತ್​ ಸಿಂಗ್ ಆರೋಪಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Latest Videos

ಮೊನ್ನೆ ತೇಜ್ ಬಹದ್ದೂರ್  ಎಂಬ ಯೋಧ, ಹಿರಿಯ ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರದಿಂದ ಆಹಾರ ಮತ್ತಿತರ ಮೂಲಭೂತ ಸೌಕರ್ಯಗಳು ಸೈನಿಕರಿಗೆ ಸರಿಯಾಗಿ ತಲುಪುತ್ತಿಲ್ಲವೆಂದು  ವಿಡಿಯೊವೊಂದರಲ್ಲಿ ಆರೋಪಿಸಿದ್ದರು.

click me!