ಭಾರತಕ್ಕೆ ಹಿಂದೂ ರಾಷ್ಟ್ರೀಯತೆ ಅಪಾಯ: ಅಮೆರಿಕ ವರದಿ ಯಾರ ‘ಉಪಾಯ’?

By Web DeskFirst Published Sep 15, 2018, 11:59 AM IST
Highlights

ಭಾರತದಲ್ಲಿ ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯತೆ! ಭಾರತದ ಜಾತ್ಯಾತೀತ ಸ್ವರೂಪ ನಾಶದ ಭಯ! ಅಮೆರಿಕದ ಕಾಂಗ್ರೆಸ್ ವರದಿಯಲ್ಲಿ ಎಚ್ಚರಿಕೆಯ ಸಂದೇಶ! ಸಾಮಾಜಿಕ ಜಾಲತಾಣಗಳು ಬಹುಸಂಖ್ಯಾತರ ಹಿಂಸಾಚಾರಕ್ಕೆ ಪೂರಕ!
ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ  ದೌರ್ಜನ್ಯ? 

ವಾಷಿಂಗ್ಟನ್(ಸೆ.15): ಇದೊಂದು ತರಾ ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ಪಕ್ಕದ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಗಮನಿಸದಂತೆ ಆಯ್ತು. ಅಮೆರಿಕದಲ್ಲಿ ನಿತ್ಯವೂ ಭಾರತೀಯರು ಮತ್ತು ಕಪ್ಪು ಜನಾಂಗದವರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ, ಭಾರತದಲ್ಲಿ ಅಲ್ಲೊಂದು ಇಲ್ಲೊಂದು ಹಲ್ಲೆ ಪ್ರಕರಣಗಳನ್ನು ಅಮೆರಿಕ ದೊಡ್ಡದು ಮಾಡುತ್ತಿದೆ. 

ಭಾರತದಲ್ಲಿ ಹಿಂದೂ ರಾಷ್ಟ್ರೀಯತೆ ಎಂಬುದು ರಾಜಕೀಯ ಶಕ್ತಿಯಾಗಿ ಪರಿವರ್ತನೆಯಾಗುತ್ತಿದ್ದು, ಭಾರತದ ಜಾತ್ಯಾತೀತ ಸ್ವರೂಪವನ್ನು ನಾಶ ಮಾಡುತ್ತಿದೆ ಎಂದು ಅಮೆರಿಕದ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ವರದಿ ಸಿದ್ದಪಡಿಸಿರುವ ಅಮೆರಿಕದ ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳು ಬಹುಸಂಖ್ಯಾತರು ನಡೆಸುತ್ತಿರುವ ಹಿಂಸಾಚಾರಕ್ಕೆ ಪೂರಕವಾಗಿದೆ ಎಂದು ಎಚ್ಚರಿಕೆ ನೀಡಿದೆ. 

ಕಾಂಗ್ರೆಶನಲ್ ರಿಸರ್ಚ್ ಸರ್ವಿಸ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಧಾರ್ಮಿಕತೆಯಿಂದ ಉತ್ತೇಜನಗೊಂಡ ಹಿಂಸಾಚಾರ, ಸರ್ಕಾರದ ಮತಾಂತರ ನಿಷೇಧ ಕಾಯ್ದೆ,  ಗೋ ರಕ್ಷಣೆ ಹೆಸರಿನಲ್ಲಿ ಸರ್ಕಾರೇತರ ಸಂಸ್ಥೆಗಳು  ನಡೆಸುತ್ತಿರುವ ಹಿಂಸಾಚಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯಗಳು ಭಾರತದ ಜಾತ್ಯಾತೀತತೆಯ ಸ್ವರೂಪಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ತೀವ್ರ ಆತಂಕ ವ್ಯಕ್ತಪಡಿಸಲಾಗಿದೆ.

ಸಿಆರ್ ಎಸ್ ಅಮೆರಿಕದ ಕಾಂಗ್ರೆಸ್ ನ ಅಧಿಕೃತ ವರದಿ ಅಥವಾ, ಅಲ್ಲಿನ ಸಂಸದರ ಅಭಿಪ್ರಾಯವನ್ನೂ ಬಿಂಬಿಸುವುದಿಲ್ಲ. ತಜ್ಞರ ಅಭಿಪ್ರಾಯ ಪಡೆದು ಸಂಸದರಿಗೆ ನಿರ್ದಿಷ್ಟ ವಿಚಾರಗಳಲ್ಲಿ ತೀರ್ಮಾನ ಕೈಗೊಳ್ಳುವುದಕ್ಕೆ ಸಹಕಾರಿಯಾಗಲೆಂದು ಈ ವರದಿಗಳನ್ನು ಸಿದ್ಧಪಡಿಸಲಾಗಿರುತ್ತದೆ. ಭಾರತ ಕುರಿತ ಈ ವರದಿ ಭಾರತ: ಧಾರ್ಮಿಕ ಸ್ವಾತಂತ್ರ್ಯ ವಿಷಯಗಳು (India: Religious Freedom issues) ಎಂಬ ಶೀರ್ಷಿಕೆಯಡಿ ಪ್ರಕಟವಾಗಿದೆ.

click me!