
ತುಮಕೂರು (ನ.20): ಸಮಾಜದ ಸ್ವಾಸ್ಥ ಕಾಪಾಡಬೇಕಿದ್ದ ಪೊಲೀಸರೇ ಅಕ್ರಮ ದಂಧೆಗೆ ಇಳಿದಿದ್ದಾರೆ. ತನಿಖೆ ವೇಳೆ ಆ ಇಬ್ಬರು ನಡೆಸಿದ ದಂಧೆ ಸಾಕ್ಷ್ಯ ಸಮೇತ ಸಾಬೀತಾಗಿದೆ.
ಬೆಂಗಳೂರಿನ ಶಿವಾಜಿ ನಗರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಇನ್ಸೆಪೆಕ್ಟರ್ ಆಗಿರುವ ಕನಕಲಕ್ಷ್ಮಿ ಹಾಗೂ ಸಿಐಡಿಯಲ್ಲಿ ಇನ್ಸೆಪೆಕ್ಟರ್ ಆಗಿರುವ ನದಾಫ್ ರೈಸ್ ಪುಲ್ಲಿಂಗ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಶಿರಾ ನಗರದಲ್ಲಿ ಇನ್ಸೆಪೆಕ್ಟರ್ ಹಾಗೂ ಸಬ್ ಇನ್ಸೆಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಡಾಬಾ ರಾಜಣ್ಣ ಎಂಬುವನ ಜೊತೆ ಗೂಡಿ ರೈಸ್ ಪುಲ್ಲಿಂಗ್ ವ್ಯವಹಾರ ನಡೆಸಿರುವುದು ಇಲಾಖಾ ವಿಚಾರಣೆಯಲ್ಲಿ ಸಾಬೀತಾಗಿದೆ .
ಬಳ್ಳಾರಿ ಮೂಲದ ಸುಧಾಕರ್ ರೆಡ್ಡಿ ಎಂಬಾತನಿಗೆ ರೈಸ್ ಪುಲ್ಲಿಂಗ್ ನೀಡುತ್ತೇವೆಂದು ನಂಬಿಸಿ ಆತನಿಂದ 17.5 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ. ಇಲಾಖೆ ನಡೆಸಿದ ತನಿಖೆಯಿಂದ ಅಕ್ರಮ ಸಾಬೀತಾಗಿದ್ದು, ಇಬ್ಬರಿಗೂ ತಲಾ ಐದು ವರ್ಷಗಳ ಬಡ್ತಿ ವೇತನವನ್ನು ಕಡಿತಗೊಳಿಸವಂತೆ ಕೇಂದ್ರ ವಲಯದ ಐಜಿ ಅರುಣ್ ಚಕ್ರವರ್ತಿ ಆದೇಶಿದ್ದಾರೆ. ಇಬ್ಬರು ಅಧಿಕಾರಿಗಳ ವಿರುದ್ದ ಹೆಚ್ಚಿನ ತನಿಖೆ ನಡೆಸುವಂತೆ ಹೈ ಕೋರ್ಟ್ ಕೂಡ ಆದೇಶಿಸಿದೆ. ಒಟ್ಟಾರೆ ಕ್ರಿಮಿನಲ್ ಗಳನ್ನು ಪತ್ತೆ ಹಚ್ಚಬೇಕಿದ್ದ ಪೊಲೀಸರು ಹೀಗೆ ತಾವೇ ಕ್ರಿಮಿನಲ್ ಗಳಂತೆ ವರ್ತಿಸಿರುವುದು ಮಾತ್ರ ದುರಂತವೇ ಸರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.