ಏನ್ ಸರ್, ಕೃಷ್ಣ ಮಠಕ್ಕೆ ಯಾಕೆ ಹೋಗಲ್ಲ ಅಂತಾ ಕೇಳಿದ್ದಕ್ಕೆ ಸಿಎಂ ಹೇಳಿದ್ದೇನು ಗೊತ್ತಾ?

Published : Nov 19, 2017, 10:32 PM ISTUpdated : Apr 11, 2018, 12:58 PM IST
ಏನ್ ಸರ್, ಕೃಷ್ಣ ಮಠಕ್ಕೆ ಯಾಕೆ ಹೋಗಲ್ಲ ಅಂತಾ ಕೇಳಿದ್ದಕ್ಕೆ ಸಿಎಂ ಹೇಳಿದ್ದೇನು ಗೊತ್ತಾ?

ಸಾರಾಂಶ

ಸಿಎಂ ಸಿದ್ದರಾಮಯ್ಯ ಉಡುಪಿ ಕೃಷ್ಣಮಠದ ಮೇಲಿನ ಮುನಿಸು ಮುಂದುವರಿಸಿದ್ದಾರೆ. ಸಿಎಂ ಆದ ಬಳಿಕ ಉಡುಪಿಗೆ ನೀಡಿದ ಐದನೇ ಬೇಟಿಯಲ್ಲೂ ಕೃಷ್ಣ ದೇವರ ದರ್ಶನ ಮಾಡಲಿಲ್ಲ, ಪೇಜಾವರ ಸ್ವಾಮೀಜಿಯನ್ನು ಬೇಟಿಯಾಗಲಿಲ್ಲ.

ಬೆಂಗಳೂರು (ನ.19): ಸಿಎಂ ಸಿದ್ದರಾಮಯ್ಯ ಉಡುಪಿ ಕೃಷ್ಣಮಠದ ಮೇಲಿನ ಮುನಿಸು ಮುಂದುವರಿಸಿದ್ದಾರೆ. ಸಿಎಂ ಆದ ಬಳಿಕ ಉಡುಪಿಗೆ ನೀಡಿದ ಐದನೇ ಬೇಟಿಯಲ್ಲೂ ಕೃಷ್ಣ ದೇವರ ದರ್ಶನ ಮಾಡಲಿಲ್ಲ, ಪೇಜಾವರ ಸ್ವಾಮೀಜಿಯನ್ನು ಬೇಟಿಯಾಗಲಿಲ್ಲ.

ಸಿಎಂ ನೇರವಾಗಿ ವಿರೋಧವನ್ನೂ ಮಾಡದೆ, ಕೃಷ್ಣಮಠಕ್ಕೆ ಭೇಟಿಯನ್ನೂ ನೀಡದೆ ಐದನೇ ಬಾರಿ ಉಡುಪಿ ಪ್ರವಾಸ ಮುಗಿಸಿ ಬಂದಿದ್ದಾರೆ. ಇವತ್ತು ಉದ್ಯಮಿ ಬಿ.ಆರ್. ಶೆಟ್ಟಿ ಸಹಭಾಗಿತ್ವದ ಆಸ್ಪತ್ರೆ ಉದ್ಘಾಟನೆಗೆಂದು ಸಿಎಂ ಉಡುಪಿಗೆ ಬಂದಿದ್ದರು. ಅಪ್ಪಿ ತಪ್ಪಿಯೂ ಮಠದತ್ತ ಮುಖ ಮಾಡದೇ ವಾಪಾಸ್ ಆಗಿದ್ದಾರೆ.  ಏನ್ ಸರ್ ಕೃಷ್ಣ ಮಠಕ್ಕೆ ಯಾಕೆ ಹೋಗಲ್ಲ ಅಂತಾ ಕೇಳಿದ್ದಕ್ಕೆ ಬಸವಣ್ಣನ ವಚನ ಹೇಳಿದ್ದಾರೆ.

ಉಡುಪಿಯಲ್ಲಿ ಈ ವಾರಾತ್ಯದಿಂದ ಮೂರು ದಿನ ಧರ್ಮಸಂಸತ್ತು ಹಿನ್ನೆಲೆಯಲ್ಲಿ ನಗರದಲ್ಲಿ ಕೈ ಬಾವುಟಕ್ಕಿಂತ ಕೇಸರಿ ಧ್ವಜಗಳೇ ರಾರಾಜಿಸುತ್ತಿದ್ದವು. ಇದು ಸಿಎಂಗೆ ಸ್ವಲ್ಪ ಮುಜುಗರ ಹುಟ್ಟಿಸಿದ್ದಂತೂ ಸತ್ಯ. ಒಟ್ಟಿನಲ್ಲಿ, ಈ ಬಾರಿಯಾದರೂ ಸಿಎಂ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರೆನೋ ಅನ್ನೋ ನಂಬಿಕೆ ಹುಸಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2025ರ ಪ್ರವಾಸೋದ್ಯಮದಲ್ಲಿ ಬೆಂಗಳೂರು ದರ್ಬಾರ್: ಬಿಸಿನೆಸ್, ವಿರಾಮಕ್ಕೆ ಪ್ರವಾಸಿಗರ ಮೊದಲ ಆಯ್ಕೆ ಸಿಲಿಕಾನ್ ಸಿಟಿ!
ತಿರುಪತಿ ತಿಮ್ಮಪ್ಪನಿಗೆ 1.2 ಕೋಟಿ ರೂಪಾಯಿ ಮೌಲ್ಯದ ಬ್ಲೇಡ್‌ ದಾನ ಮಾಡಿದ ಹೈದರಾಬಾದ್‌ ಉದ್ಯಮಿ