
ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿರುವುದಕ್ಕೆ ಕೇಂದ್ರ ಸರ್ಕಾರ ಪುರಾವೆ ಒದಗಿಸಬೇಕೆಂದು ಆಗ್ರಹಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್’ ಅವರನ್ನು ಚಲನಚಿತ್ರ ನಿರ್ದೇಶಕ ರಾಮಗೋಪಾಲ್ ವರ್ಮಾ ಕೋತಿಗೆ ಹೋಲಿಸಿದ್ದಾರೆ.
ಸೇನೆಯ ಬದ್ಧತೆಯನ್ನು ಸಂಶಯಿಸಿ, ಕೇಜ್ರಿವಾಲ್ ತಾನು ಹನುಮಂತ ಹಾಗೂ ಮುಶರಫ್ ನವಾಝ್ ಶರೀಫ್’ಗಳ ಮಿಶ್ರತಳಿಯೆಂದು ಸಾಬೀತು ಪಡಿಸಿದ್ದಾರೆ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.
ಸೇನೆಯು ಗಡಿಯ ಹೊರಗೆ ಸರ್ಜಿಕಲ್ ದಾಳಿ ಮಾಡುವುದರ ಜೊತೆಗೆ ದೇಶದೊಳಗೂ ಕೇಜ್ರಿವಾಲ್’ರಂತಹ ದೇಶ-ವಿರೋಧಿಗಳ ಮೇಲೂ ಸರ್ಜಿಕಲ್ ದಾಳಿ ಮಾಡಬೇಕೆಂದು ವರ್ಮಾ ಹೇಳಿದ್ದಾರೆ.
ಮಫ್ಲರ್ ಧರಿಸಕೊಂಡಿರುವ ಅವರು ಯಾವಾಗಲೂ ಕೋತಿಯಂತೆ ಕಾಣುತ್ತಿದ್ದರು, ಆದರೆ ಸೇನೆ ಬಗ್ಗೆ ಅವರ ಹೇಳಿಕೆ ಕೇಳಿದ ಬಳಿಕ ಅವರು ಕೋತಿಯೆಂದು ಖಾತ್ರಿಯಾಗಿದೆ, ಎಂದು ರಾಮಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಆದರೆ ಕೇಜ್ರಿವಾಲ್ ಈವರೆಗೆ ವರ್ಮಾ ಟ್ವೀಟ್’ಗೆ ಏನು ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.