
ಒಂದು ಕಾಲದಲ್ಲಿ ಅವರನ್ನು ಎನ್ಕೌಂಟರ್ ಸ್ಪೆಷಲಿಸ್ಟ್ ಅನ್ನುತ್ತಿದ್ರು. ರೌಡಿಗಳ ಹೆಡೆಮುರಿಕಟ್ಟುತ್ತಿದ್ದ ಈ ಆಫೀಸರ್ ಇದೀಗ ಕಳ್ಳರ ತಂಡ ಕಟ್ಟಿಕೊಂಡು ಬಂಧನವಾಗಿದ್ದಾರೆ. ಅವರು ಬೇರ್ಯಾರು ಅಲ್ಲ ಬಾಬು ನರೋನಾ!
ಬಾಬು ನರೋನಾ, ಸಬ್ ಇನ್ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದವರು. ಡಿವೈಎಸ್ಪಿಯಾಗಿ ಪದನ್ನೋತಿ ಹೊಂದಿ ಇತ್ತೀಚಿಗಷ್ಟೇ ನಿವೃತ್ತಿಯಾಗಿದ್ದರು. ನಿವೃತ್ತಿಯಾದ ಬಳಿಕ ಹಲವರಿಗೆ ಮಾರ್ಗದರ್ಶನ ನೀಡಬೇಕಾಗಿದ್ದ ಈ ಆಫೀಸರ್, ಅದನ್ನ ಬಿಟ್ಟು ಒಂದು ದರೋಡೆ ತಂಡವನ್ನೇ ಕಟ್ಟಿದ್ದಾರೆ. ನವೆಂಬರ್ 20 ರಂದು ಜೆಪಿ ನಗರದಲ್ಲಿ ಉದ್ಯಮಿಯೊಬ್ಬರಿಂದ ದರೋಡೆಯಾಗಿದ್ದ 83 ಲಕ್ಷ ದೋಚಿದ ಪ್ರಕರಣದಲ್ಲಿ ಬಾಬು ನರೋನಾ ಅಂಡ್ ಟೀಮ್ ಬಂಧನವಾಗಿತ್ತು.
ಬಾಬು ನರೋನಾ ವಿರುದ್ಧ ಮತ್ತೊಂದು ಕೇಸ್
ಜೆಪಿ ನಗರದಲ್ಲಿ ನರೋನಾ ಅಂಡ್ ಟೀಮ್ ಬಂಧನವಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ , ಮತ್ತೊಬ್ಬ ಉದ್ಯಮಿಯೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಕೆಆರ್ ಪುರ ನಿವಾಸಿ ಬಾಲಾಜಿ ಎಂಬ ಉದ್ಯಮಿಯನ್ನೂ ಇದೇ ಬಾಬು ನರೋನಾ ಗ್ಯಾಂಗ್ ಬ್ಲಾಕ್ ಮನಿ ವೈಟ್ ಮಾಡಿಕೊಡುವುದಾಗಿ ಹೇಳಿ, 30 ಲಕ್ಷ ರೂಪಾಯಿ ಹಣ ದೋಚಿದ್ದರು. ಸಿಸಿಬಿ ಪೊಲೀಸರ ಸೋಗಿನಲ್ಲಿ ಹೋಗಿದ್ದ ಬಾಬು ನರೋನಾ ಅಂಡ್ ಟೀಮ್, ತಮ್ಮನ್ನು ಸಿಸಿಬಿ ಡಿವೈಎಸ್ಪಿ ಅಂತೇಳಿ ಪರಿಚಯ ಮಾಡಿಕೊಂಡಿದ್ದರು. ಬಳಿಕ, ಬಾಲಾಜಿಯನ್ನ ಕೆಆರ್ಪುರಂನ ದೇವಸಂದ್ರದಿಂದ ಕಿಡ್ನಾಪ್ ಮಾಡಿ ಆತನಿಂದ ಹಣ ಕಿತ್ತುಕೊಂಡು ಬಿಟ್ಟಿದ್ದಾರೆ. ಬಾಲಾಜಿ ದೂರು ಹಿನ್ನೆಲೆಯಲ್ಲಿ ಬಾಬು ನರೋನಾನನ್ನ ತಮ್ಮ ಕಸ್ಡಡಿಗೆ ಪಡೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಸಾರ್ವಜನಿಕರಿಗೆ ಕಣ್ಗಾವಲಾಗಿ ಇರಬೇಕಾದ ಖಾಕಿ ಅಧಿಕಾರಿಗಳೇ ಇತ್ತೀಚಿನ ದಿನಗಳಲ್ಲಿ ಬ್ಲಾಕ್ ಅಂಡ್ ಕೇಸ್ನಲ್ಲಿ ಜೈಲು ಸೇರುತ್ತಿದ್ದಾರೆ. ರಕ್ಷಕರಾಗಿರಬೇಕಾದವರೇ ಭಕ್ಷಕರಾದರೇ ಇನೇನು ಗತಿ..! ಅನ್ನುವ ಪ್ರಶ್ನೆ ಎದುರಾಗಿದೆ.
ರವಿಕುಮಾರ್,ಕ್ರೈಂಬ್ಯೂರೋ,ಸುವರ್ಣನ್ಯೂಸ್,ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.