ಹೋಟೆಲ್, ರೆಸ್ಟೋರೆಂಟ್'ಗಳಲ್ಲಿ ಸರ್ವಿಸ್ ಚಾರ್ಜ್ ಕಡ್ಡಾಯವಲ್ಲ!

By Suvarna Web DeskFirst Published Apr 21, 2017, 12:22 PM IST
Highlights

ರೆಸ್ಟೋರೆಂಟ್'ಗಳು ತನ್ನ ಗ್ರಾಹಕರಿಗೆ ಬಿಲ್ ಜೊತೆ ಇನ್ನುಂದೆ ಸರ್ವಿಸ್ ಚಾರ್ಜ್ ಕೊಡಿ ಎಂದು ಒತ್ತಾಯಿಸುವಂತಿಲ್ಲ. ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾ, ಬಿಡಬೇಕಾ ಎನ್ನುವುದು ಗ್ರಾಹಕರಿಗೆ  ಬಿಟ್ಟ ನಿರ್ಧಾರ ಎಂದು ಕೇಂದ್ರ ಸರ್ಕಾರ ಹೇಳಿದೆ.

ನವದೆಹಲಿ (ಏ.21): ರೆಸ್ಟೋರೆಂಟ್ ಗಳು ತನ್ನ ಗ್ರಾಹಕರಿಗೆ ಬಿಲ್ ಜೊತೆ ಇನ್ನುಂದೆ ಸರ್ವಿಸ್ ಚಾರ್ಜ್ ಕೊಡಿ ಎಂದು ಒತ್ತಾಯಿಸುವಂತಿಲ್ಲ. ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾ, ಬಿಡಬೇಕಾ ಎನ್ನುವುದು ಗ್ರಾಹಕರಿಗೆ  ಬಿಟ್ಟ ನಿರ್ಧಾರ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸೇವಾ ಶುಲ್ಕವು ಗ್ರಾಹಕರ ಇಚ್ಚೆಗೆ ಬಿಟ್ಟಿದ್ದೇ ವಿನಃ ಕಡ್ಡಾಯವಲ್ಲ. ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಗ್ರಾಹಕರು ಎಷ್ಟು ಸರ್ವಿಸ್ ಚಾರ್ಜ್ ನೀಡಬೇಕೆಂದು ನಿರ್ಧರಿಸುವಂತಿಲ್ಲ. ಿದನ್ನು ಗ್ರಾಹಕರಿಗೇ ಬಿಡಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಈ ಸಂಬಂಧ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಒಂದಷ್ಟು ಗೈಡ್’ಲೈನ್’ಗಳನ್ನು ನೀಡಿದ್ದು, ಅದರನ್ವಯ ಸೇವಾ ಶುಲ್ಕ ಕಡ್ಡಾಯವಲ್ಲ ಎನ್ನಲಾಗಿದೆ.

click me!