ಮೂರು ದೇಶಗಳ ಪೌರತ್ವ ಹೊಂದಿದ್ದ ಭಾರತದ ಮೊದಲ ಮತದಾರ ಸಾವು!

By Suvarna Web DeskFirst Published Jan 9, 2017, 7:41 AM IST
Highlights

1913 ರಲ್ಲಿ ಜನಿಸಿ, ಮೂರು ದೇಶಗಳ ಪೌರತ್ವ ಹೊಂದಿದ್ದ ಭಾರತದ ಹಿರಿಯ ಹಾಗೂ ಮೊದಲ ಮತದಾರ ಎಂಬ ಖ್ಯಾತಿ ಪಡೆದಿದ್ದ ಅಸರ್ ಅಲಿ ಭಾನುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅಸರ್ ಅಲಿ ಭಾರತದೊಳಗಿದ್ದ ಬಾಂಗ್ಲಾದೇಶದ ಭಾಗದಲ್ಲಿ ನೆಲೆಸಿದ್ದ 9776 ನಿವಾಸಿಗಳಲ್ಲಿ ಅಸರ್ ಅಲಿ ಕೂಡಾ ಒಬ್ಬರಾಗಿದ್ದರು. ಐತಿಹಾಸಿಕ ದ್ವಿಪಕ್ಷೀಯ ಭೂ ಒಪ್ಪಂದದ ಬಳಿಕ, ಕಳೆದ ವರ್ಷವಷ್ಟೇ ಇವರು ಭಾರತದ ಪೌರತ್ವವನ್ನು ಪಡೆದಿದ್ದರು. ಅಲ್ಲದೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೂಚ್ ಬೆಹರ್'ನಲ್ಲಿ ಮೊದಲ ಮತದಾನ ಮಾಡಿದ್ದರು.   

ನವದೆಹಲಿ(ಜ.09): 1913 ರಲ್ಲಿ ಜನಿಸಿ, ಮೂರು ದೇಶಗಳ ಪೌರತ್ವ ಹೊಂದಿದ್ದ ಭಾರತದ ಹಿರಿಯ ಹಾಗೂ ಮೊದಲ ಮತದಾರ ಎಂಬ ಖ್ಯಾತಿ ಪಡೆದಿದ್ದ ಅಸರ್ ಅಲಿ ಭಾನುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

ಅಸರ್ ಅಲಿ ಭಾರತದೊಳಗಿದ್ದ ಬಾಂಗ್ಲಾದೇಶದ ಭಾಗದಲ್ಲಿ ನೆಲೆಸಿದ್ದ 9776 ನಿವಾಸಿಗಳಲ್ಲಿ ಅಸರ್ ಅಲಿ ಕೂಡಾ ಒಬ್ಬರಾಗಿದ್ದರು. ಐತಿಹಾಸಿಕ ದ್ವಿಪಕ್ಷೀಯ ಭೂ ಒಪ್ಪಂದದ ಬಳಿಕ, ಕಳೆದ ವರ್ಷವಷ್ಟೇ ಇವರು ಭಾರತದ ಪೌರತ್ವವನ್ನು ಪಡೆದಿದ್ದರು. ಅಲ್ಲದೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೂಚ್ ಬೆಹರ್'ನಲ್ಲಿ ಮೊದಲ ಮತದಾನ ಮಾಡಿದ್ದರು.   

ಅಸರ್ ಅಲಿ ತನ್ನ ಜೀವನವನ್ನು ಪೂರ್ವ ಪಾಕಿಸ್ತಾನದ ಮಧ್ಯ ಮಾಶಲ್'ದಂಗ ಎಂಬ ಪ್ರದೇಶದಲ್ಲಿ ಕಳೆದಿದ್ದರು. ಆದರೆ ಗಡಿ ಒಪ್ಪಂದದ ಬಳಿಕ ಇವರು ವಾಸವಿದ್ದ ಪ್ರದೇಶ ಬಾಂಗ್ಲಾದೇಶಕ್ಕೆ ಸೇರಿಕೊಂಡಿತ್ತು. ಬಳಿಕ 2015ರ ಆಗಸ್ಟ್ 1 ರಂದು ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಒಪ್ಪಂದದಲ್ಲಿ, ತಮ್ಮ ಕೆಲವು ಗಡಿ ಪ್ರದೇಶಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಅಲಿ ಅಸರ್ ಇದ್ದ ಆ ಪ್ರದೇಶವೂ ಭಾರತಕ್ಕೆ ಸೇರಿಕೊಂಡಿದ್ದು, ಅಸರ್ ಸೇರಿದಂತೆ 14,864 ಮಂದಿಗೆ ಭಾರತದ ಪೌರತ್ವ ದೊರಕಿತ್ತು.

ಇವರು ನೆಲೆಸಿದ್ದ ಈ ಪ್ರದೇಶ ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಭಾರತಕ್ಕೆ ಸೇರಿದ ಬಳಿಕ ಕಳೆದ ಬಾರಿ ಇಲ್ಲಿ ಮೊದಲ ಚುನಾವಣೆ ನಡೆದಿತ್ತು. ಈ ಕೂಚ್ ಬಿಹಾರ್'ಗೆ ನಡೆದ ಈ ಮೊದಲ ಚುನಾವಣೆಯಲ್ಲಿ ಮತದಾನ ಮಾಡಿದವರಲ್ಲಿ ಅಸರ್ ಅಲಿ ಮೊದಲಿಗರಾಗಿದ್ದರು. ಆದರೆ ನಿನ್ನೆ ಮುಂಜಾನೆ ಸುಮಾರು 5 ಗಂಟೆಗೆ ಇವರು ಅಸು ನೀಗಿದ್ದಾರೆ. 'ಭಾರತದ ಪೌರತ್ವ ಪಡೆಯುವುದು ಇವರ ಕನಸಾಗಿತ್ತು ಹಾಗೂ ಪೌರತ್ವ ಪಡೆದ ಬಳಿಕ ಇವರು ಬಹಳ ಖುಷಿ ಮತ್ತು ನೆಮ್ಮದಿಯಿಂದಿದ್ದರು' ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅದೇನಿದ್ದರೂ ಮೂರು ದೇಶಗಳ ಪೌರತ್ವ ಪಡೆದಿದ್ದ ಅಪರೂಪದ ವ್ಯಕ್ತಿ ಈಗ ಇಹಲೋಕ ತ್ಯಜಿಸಿರುವುದು ನಿಜಕ್ಕೂ ವಿಷಾದನೀಯ.

click me!