ಶೀಘ್ರದಲ್ಲೇ ರೂ.200 ನೋಟು ಚಲಾವಣೆಗೆ

By Suvarna Web DeskFirst Published Aug 23, 2017, 1:50 PM IST
Highlights

ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಭಾರತೀಯ ರಿಸರ್ವ್ ಬ್ಯಾಂಕ್ ರೂ.200 ಮುಖಬೆಲೆಯ ನೊಟುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ನೂತನ ರೂ. 200 ನೋಟುಗಳು ಶೀಘ್ರದಲ್ಲೇ ಲಭ್ಯವಾಗಲಿವೆ ಎಂದು ಹೇಳಲಾಗಿದೆ. ಈ ಕುರಿತು ರಿಸರ್ವ್ ಬ್ಯಾಂಕ್ ನಿರ್ಧಾರಕ್ಕೆ ಕೇಂದ್ರ ಹಣಕಾಸು ಇಲಾಖೆ ಹಸಿರು ನಿಶಾನೆ ತೋರಿಸಿದೆ.

ನವದೆಹಲಿ/ ಮುಂಬೈ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಭಾರತೀಯ ರಿಸರ್ವ್ ಬ್ಯಾಂಕ್ ರೂ.200 ಮುಖಬೆಲೆಯ ನೊಟುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ನೂತನ ರೂ. 200 ನೋಟುಗಳು ಶೀಘ್ರದಲ್ಲೇ ಲಭ್ಯವಾಗಲಿವೆ ಎಂದು ಹೇಳಲಾಗಿದೆ. ಈ ಕುರಿತು ರಿಸರ್ವ್ ಬ್ಯಾಂಕ್ ನಿರ್ಧಾರಕ್ಕೆ ಕೇಂದ್ರ ಹಣಕಾಸು ಇಲಾಖೆ ಹಸಿರು ನಿಶಾನೆ ತೋರಿಸಿದೆ.

ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟಂಬರ್’ನಲ್ಲೇ ಹೊಸ ನೋಟು ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ರೂ. 100 ಮತ್ತು ರೂ.500 ಮುಖಬೆಲೆ ನೋಟುಗಳ ನಡುವೆ ಬೇರಾವುದೇ ನೋಟುಗಳು ಈವರೆಗೆ ಲಭ್ಯವಿಲ್ಲ.  ಈ ಮೂಲಕ ನೋಟು ಅಮಾನ್ಯ ಕ್ರಮದ ಬಳಿಕ ಉಂಟಾಗಿರುವ ಒತ್ತಡವನ್ನು ಈ ಮೂಲಕ ನಿಭಾಯಿಸಬಹುದಾಗಿದೆ ಎಂಬ ಲೆಕ್ಕಾಚಾರ ಇದೆ ಎನ್ನಲಾಗಿದೆ.

 

click me!