ಕೊನೆಗೂ ರಾಜಧಾನಿಯಲ್ಲಿ ರೇರಾ ಕಾಯಿದೆ ಜಾರಿ: ಫ್ಲ್ಯಾಟ್, ಮನೆಗಳ ಖರೀದಿಗೆ ಕಾಯಿದೆಯ ‘ಬಲ’

Published : Jul 11, 2017, 09:25 AM ISTUpdated : Apr 11, 2018, 12:48 PM IST
ಕೊನೆಗೂ ರಾಜಧಾನಿಯಲ್ಲಿ ರೇರಾ ಕಾಯಿದೆ ಜಾರಿ: ಫ್ಲ್ಯಾಟ್, ಮನೆಗಳ ಖರೀದಿಗೆ ಕಾಯಿದೆಯ ‘ಬಲ’

ಸಾರಾಂಶ

ಕೊನೆಗೂ ರಾಜಧಾನಿ ಬೆಂಗಳೂರಲ್ಲಿ ರೇರಾ ಕಾಯಿದೆ ಜಾರಿ ಆಗಿದೆ. ನಿನ್ನೆಯಿಂದಲೇ ರಾಜ್ಯಾದ್ಯಂತ ಅಧಿಸೂಚನೆ ಪ್ರಕಟವಾಗಿದ್ದು ಬಿಲ್ಡರ್​​ಗಳಿಗೆ ಹೆಚ್ಚಿನ ಷರತ್ತು ವಿಧಿಸಲಾಗಿದೆ. ಅದೇ ರೀತಿ ಫ್ಲ್ಯಾಟ್, ಮನೆಗಳ ಖರೀದಿಗೆ ಅನುಕೂಲ ಮಾಡಿಕೊಡಲಾಗಿದೆ. ಹಾಗಿದ್ರೆ  ರೇರಾ ಕಾಯಿದೆಯಲ್ಲಿ ಏನಿದೆ? ಇಲ್ಲಿದೆ ವಿವರ.

ಬೆಂಗಳೂರು(ಜು.11): ಕೊನೆಗೂ ರಾಜಧಾನಿ ಬೆಂಗಳೂರಲ್ಲಿ ರೇರಾ ಕಾಯಿದೆ ಜಾರಿ ಆಗಿದೆ. ನಿನ್ನೆಯಿಂದಲೇ ರಾಜ್ಯಾದ್ಯಂತ ಅಧಿಸೂಚನೆ ಪ್ರಕಟವಾಗಿದ್ದು ಬಿಲ್ಡರ್​​ಗಳಿಗೆ ಹೆಚ್ಚಿನ ಷರತ್ತು ವಿಧಿಸಲಾಗಿದೆ. ಅದೇ ರೀತಿ ಫ್ಲ್ಯಾಟ್, ಮನೆಗಳ ಖರೀದಿಗೆ ಅನುಕೂಲ ಮಾಡಿಕೊಡಲಾಗಿದೆ. ಹಾಗಿದ್ರೆ  ರೇರಾ ಕಾಯಿದೆಯಲ್ಲಿ ಏನಿದೆ? ಇಲ್ಲಿದೆ ವಿವರ.

ರಿಯಲ್‌ ಎಸ್ಟೇಟ್‌ ಹೆಸರಲ್ಲಿ ನಡೆಯುತ್ತಿರುವ ವಂಚನೆ, ಲೂಟಿಗೆ ಕಡಿವಾಣ ಹಾಕಲು ರೇರಾ ಅಂದ್ರೆ ರಿಯಲ್ ಎಸ್ಟೇಟ್​​​​ ರೆಗ್ಯುಲೇಟರ ಅಥಾರಿಟಿ ಜಾರಿಯಾಗಿದೆ. ನಿನ್ನೆಯೇ ರಾಜ್ಯಾದ್ಯಂತ ಅಧಿಸೂಚನೆ ಹೊರಬಿದ್ದಿದ್ದು, ರೇರಾ ನಿಯಮ ಬೆಂಗಳೂರಲ್ಲೂ ಜಾರಿಯಲ್ಲಿದೆ. ರಾಜ್ಯ ಸರ್ಕಾರ ತನ್ನ ವಿವೇಚನಾ ಅಧಿಕಾರ ಬಳಸಿ ಕೆಲ ಪ್ರಮುಖ ಬದಲಾವಣೆಗಳೊಂದಿಗೆ ರೇರಾ ನಿಯಮ ರೂಪಿಸಿದೆ. 

- ಆರಂಭದ ಹಂತದ ಎಲ್ಲಾ ಯೋಜನೆಗಳಿಗೂ ಕಾಯ್ದೆ ಅನ್ವಯ

- ಪಾರದರ್ಶಕ ವ್ಯವಹಾರಕ್ಕೆ ದಾಖಲೆ, ಹಣಕಾಸು ವ್ಯವಹಾರದ ಮಾಹಿತಿ

- ಕಾಲಮಿತಿಯಲ್ಲಿ ಫ್ಲ್ಯಾಟ್​ಗಳನ್ನು ಗ್ರಾಹಕರಿಗೆ ನಿರ್ಮಿಸಿಕೊಡಬೇಕು

- ನಿಯಮ ಮೀರಿದವರಿಗೆ ಬಿಲ್ಡರ್​​ಗಳಿಗೆ ಜೈಲು ಶಿಕ್ಷೆ, ದಂಡ ಕಡ್ಡಾಯ

- ಆಯಾ ಭಾಗದ ಮಾರ್ಗಸೂಚಿ ದರದ ಮೇಲೆ ಫ್ಲ್ಯಾಟ್ ಮೌಲ್ಯ ನಿರ್ಧಾರ

- ವ್ಯಾಜ್ಯಗಳ ಇತ್ಯರ್ಥಕ್ಕೆ ನ್ಯಾಯಮಂಡಳಿ ಮಾದರಿ ಸಂಸ್ಥೆ ರಚನೆಗೆ ಅವಕಾಶ

ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳು

ಗ್ರಾಃಕರಿಗೆ ಶೇ.60ರಷ್ಟು ಕ್ರಯಪತ್ರ ಮಾಡಿಕೊಟ್ಟಿರುವ ಸಂಸ್ಥೆಗಳು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ

ನಗರಾಭಿವೃದ್ಧಿ ಪ್ರಾಧಿಕಾರಗಳ ಯೋಜನೆಗಳಿಗೂ ಅನ್ವಯಿಸುವುದಿಲ್ಲ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿಯಮಗಳಿಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಮ 2017 ಎಂದು ಹೆಸರಿಡಲಾಗಿದ್ದು, ಬಿಲ್ಡರ್ ಗಳಿಗೆ ಹೆಚ್ಚಿನ ಷರತ್ತು ವಿಧಿಸಿದೆ. ಇನ್ಮುಂದೆ ಬಿಲ್ಡರ್ ಗಳು ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಗಳು ಪಾರದರ್ಶಕ ವ್ಯವಹಾರ ನಡೆಸಬೇಕು. ಒಟ್ಟಿನಲ್ಲಿ ರಿಯಲ್ ಎಸ್ಟೇಟ್​​ ಏಜೆಂಟ್'​ಗಳಿಗೆ ಕಡಿವಾಣ ಬಿದ್ದಿದ್ದು ಗ್ರಾಹಕನನ್ನೇ ದೊರೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ; ತಿರುಪತಿ ಪ್ರಯಾಣ ರದ್ದು, ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್ ಕುಟುಂಬ ತಕ್ಷಣ ವಾಪಸ್!
ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?