
ಬೆಂಗಳೂರು(ಜು.11): ಬೆಳಗಾವಿ ಸಿಸಿಬಿ ಪೊಲೀಸ್ರು ಭರ್ಜರಿ ಬೇಟೆಯಾಡಿದ್ದಾರೆ. ಹಳೆಯ 500 ಮತ್ತು 1000 ರುಪಾಯಿ ಮುಖಬೆಲೆ ನೋಟುಗಳನ್ನು ಬದಲಿ ಮಾಡಿಕೊಂಡುವ ಮರಿ ಬಾಂಬ್ ನಾಗಾ ಸೇರಿ 6 ಜನರನ್ನು ಬಂಧಿಸಿದ್ದಾರೆ. ಖದೀಮರಿಂದ ಪೊಲೀಸರು 3 ಕೋಟಿ 11 ಲಕ್ಷದ ಹಳೆ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿಯ CCB ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನೋಟು ಅದಲು-ಬದಲಿ ಜಾಡನ್ನು ಹಿಡಿದು ಜೈಲಿಗಟ್ಟಿದೆ. ನಿನ್ನೆ ಸಂಜೆ ಖಚಿತ ಮಾಹಿತಿ ಮೇರೆಗೆ ಕೃಷ್ಣದೇವರಾಯ ಸರ್ಕಲ್'ನಲ್ಲಿರುವ ರೋಹಣ ರೆಸಿಡೆನ್ಸಿ ಮೇಲೆ ದಾಳಿ ನಡೆಸಿದ್ದಾರೆ. ಈ ಟೈಮ್ನಲ್ಲಿ ಹಳೆಯ 500 ಮತ್ತು 1000 ರುಪಾಯಿ ಮುಖಬೆಲೆ ನೋಟು ಅದಲು-ಬದಲು ಮಾಡುವ ಮರಿ ಬಾಂಬ್ ನಾಗ ಸೇರಿ ಆರು ಆರೋಪಿಗಳನ್ನ ಬಂಧಿಸಿದ್ದಾರೆ.
ಕೋಟ್ಯಂತರ ರುಪಾಯಿ ಹಣವನ್ನ ಜನರಿಂದ ಸಂಗ್ರಹಿಸಿ ಕಮೀಷನ್ ಮೇಲೆ ಪ್ರಮುಖ ಆರೋಪಿ ಅನಿಲ್ ಪಟೇಲ್ ವ್ಯವಹಾರ ಮಾಡುತ್ತಿದ್ದ. ನನಗೆ RBIನಲ್ಲಿ ಗೊತ್ತಿದ್ದಾರೆ ಅಂತ ಅನಿಲ್ ಹೇಳಿಕೊಂಡು ಕಪ್ಪು ಹಣ ಇರೋರನ್ನ ನಂಬಿಸುತ್ತಿದ್ದನು. ಈ ಮಾತನ್ನ ನಂಬಿ ಲಕ್ಷಾಂತರ ರುಪಾಯಿ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಬಂದಿದ್ದ ಗೋವಾ, ಪುನಾ ಹಾಗೂ ಮೀರಜ್‌ನಿಂದ ಬಂದಿದ್ದವರನ್ನೂ ಪೊಲೀಸರು ಬಂಧಿಸಿದ್ದಾರೆ. ಈವರೆಗೂ ಅನಿಲ್ ಪಟೇಲ್ ಎಷ್ಟು ಮೊತ್ತದ ಹಣವನ್ನು ಅದಲು-ಬದಲು ಮಾಡಿದ್ದಾನೆ. ನಿಜವಾಗಿಯೂ ಆರ್‌ಬಿಐನಲ್ಲಿ ನಂಟು ಇತ್ತೇ ಅನ್ನೋ ಪ್ರಶ್ನೆಗಳು ಮುಂದಿಟ್ಟುಕೊಂಡು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ..
ಬೆಳಗಾವಿಯ APMC ಸ್ಟೇಷನ್ನಲ್ಲಿ ಕೇಸ್ ಬುಕ್ ಮಾಡಿರೋ ಪೊಲೀಸ್ರು ಎಲ್ಲ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿ ಇನ್ನೂ ಹಳೆಯ ನೋಟುಗಳ ಅದಲು-ಬದಲು ಧಂದೆ ಅವ್ಯಾಹತವಾಗಿ ನಡೆದಿದೆ ೆನ್ನುವುದು ಈ ಪ್ರಕರಣದಿಂದ ರುಜುವಾತು ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.