ರೈಲ್ವೆ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್

By Web DeskFirst Published Sep 15, 2018, 12:18 PM IST
Highlights

ಶೀಘ್ರದಲ್ಲೇ ರೈಲ್ವೆ ಶುಭ ಸುದ್ದಿಯೊಂದನ್ನು ನೀಡುತ್ತಿದೆ. ರೈಲ್ವೆ ಇಲಾಖೆಯೂ ಟಿಕೆಟ್ ದರವನ್ನು ಇಳಿಕೆ ಮಾಡಲು ಚಿಂತನೆ ನಡೆಸಿದೆ. 

ನವದೆಹಲಿ :  ರೈಲ್ವೆ ಪ್ರಯಾಣಿಕರಿಗೆ ಇಲ್ಲಿದೆ ಒಂದು ಶುಭ ಸುದ್ದಿ. 2016ರಲ್ಲಿ ಫ್ಲೆಕ್ಸಿ ಫೇರ್ ಜಾರಿ ಮಾಡಿದ್ದ ರೈಲ್ವೆ  ಅದರಲ್ಲಿ ಸಡಿಲಿಕೆಯನ್ನು ತಂದು  ಟಿಕೆಟ್ ದರವನ್ನು ಇಳಿಕೆ  ಮಾಡಲು ಚಿಂತನೆ ನಡೆಸಿದೆ.  ಈ ಬಗ್ಗೆ ಶೀಘ್ರವೇ ರೈಲ್ವೆ ಸಚಿವ ಪೀಯೂಷ್ ಗೋಯಲ್ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. 

ಈ ಬಗ್ಗೆ ರೈಲ್ವೆ ಇಲಾಖೆ ಅಂತಿಮ ಹಂತದ ಶಿಫಾರಸನ್ನು ಸಚಿವರಿಗೆ ಕಳುಹಿಸಿದ್ದು, ಸಚಿವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಷ್ಟೇ ಬಾಕಿ ಇದೆ. 

ಈಗಾಗಲೇ ಸುಮಾರು 100ಕ್ಕೂ ಅಧಿಕ ರೈಲುಗಳ ಟಿಕೆಟ್ ದರದ ಮೇಲೆ ಫ್ಲೆಕ್ಸಿ ಫೇರ್ ಜಾರಿಯಲ್ಲಿದ್ದು ಇದೀಗ ಕೆಲ ರೈಲುಗಳಿಗೆ ಫ್ಲೆಕ್ಸಿ ವ್ಯವಸ್ಥೆಯಿಂದ ರಿಲೀಫ್ ನೀಡಲಾಗುವುದು ಎಂದು ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. 

ಸುಮಾರು 40 ರೈಲುಗಳ ಫ್ಲೆಕ್ಸಿ ಫೇರ್ ತೆಗೆಯಲು ಚಿಂತನೆ ನಡೆದಿದೆ. ಆದರೆ ಈ ಬಗ್ಗೆ ಇನ್ನೂ ಕೂಡ ರೈಲ್ವೆ ಸಚಿವಾಲಯದಿಂದ ಅಂತಿಮ ನಿರ್ಧಾರ ಹೊರ ಬಿದ್ದಿಲ್ಲ. 

ಫ್ಲೆಕ್ಸಿ ಫೇರ್ ವ್ಯವಸ್ಥೆ ಜಾರಿಯಾದ ಬಳಿಕ ಹಲವು ರೈಲುಗಳ ಟಿಕೆಟ್ ದರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿತ್ತು ಇದೀಗ ಹೊಸ ನೀತಿಯಿಂದ ದರ ಇಳಿಕೆಯಾಗಲಿದ್ದು, ಪ್ರಯಾಣಿಕರಿಗೆ ರಿಲೀಫ್ ದೊರೆಯಲಿದೆ.

ಫ್ಲೆಕ್ಸಿ ಫೇರ್ ವ್ಯವಸ್ಥೆಯಡಿಯಲ್ಲಿ ಕೆಲವೊಂದು ರೈಲುಗಳ ಟಿಕೆಟ್ ಬುಕ್ಕಿಂಗ್ ಆಧರಿಸಿ ಅವುಗಳ ದರದ ಏರಿಕೆ ಮಾಡಲಾಗುತ್ತಿತ್ತು. ಆದರೆ ಈ ಹೊಸ ನೀತಿಯಿಂದ  ಇದರಿಂದ ಪ್ರಯಾಣಿಕರಿಗೆ ರಿಲೀಫ್ ದೊರೆಯಲಿದೆ.

click me!