
ಮುಂಬೈ(ಮಾ.26): ಭಾರತದ ಪ್ರತಿಷ್ಟಿತ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ತನ್ನ 6 ತಿಂಗಳ ಉಚಿತ ಸೇವೆ ಹ್ಯಾಪಿ ನ್ಯೂ ಇಯರ್ ಆಫರ್'ಅನ್ನು ಮಾರ್ಚ್' 31ಕ್ಕೆ ಕೊನೆಗೊಳಿಸದೆ ಮುಂದುವರಿಸಲು ಯೋಜಿಸಿದೆ.
ಉಚಿತ ಸೇವೆ ಆಫರ್ ಇನ್ನು ಒಂದು ತಿಂಗಳು ಮುಂದುವರಿಯಲಿದ್ದು, ಈಗಾಗಲೇ 99 ರೂ. ಪಾವತಿಸಿದವರಿಗೆ ಹಣವನ್ನು ಬ್ಯಾಲೆನ್ಸ್ ಅಕೌಂಟ್'ಗೆ ಮರುಪಾವತಿಸಲು ಸಹ ಚಿಂತಿಸಿದೆ. ಈ ಸೌಲಭ್ಯದಿಂದ 6 ತಿಂಗಳಿಂದ ಉಚಿತ ಇಂಟರ್'ನೆಟ್,ಕರೆ ಹಾಗೂ ಎಸ್'ಎಂಎಸ್ ಸೌಲಭ್ಯ ಪಡೆಯುತ್ತಿರುವ ಗ್ರಾಹಕರು ಮತ್ತೊಂದು ತಿಂಗಳು ಅಂದರೆ ಏಪ್ರಿಲ್ 30ರ ವರೆಗೂ ಆರಾಮದಾಯಕವಾಗಿ ಉಪಯೋಗಿಸಿಕೊಳ್ಳಬಹುದು.
ಒಂದು ತಿಂಗಳ ಮೊದಲು ಸ್ವತಃ ರಿಲಯಾನ್ಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿ ಏಪ್ರಿಲ್ 1ರಿಂದ 99 ರೂ ಪಾವತಿಸಿದರೆ ಇಂಟರ್'ನೆಟ್ ಹೊರತುಪಡಿಸಿ ಉಳಿದ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ನೀಡಲು ಆಫರ್'ಗಳನ್ನು ಪ್ರಕಟಿಸಿದ್ದರು.
ಅತ್ಯಂತ ಕಡಿಮೆ ಅವಧಿಯಲ್ಲಿ 10ಕೋಟಿಗೂ ಹೆಚ್ಚು ಗ್ರಾಹಕರನ್ನು ಪಡೆದ ಖ್ಯಾತಿ ರಿಲಯನ್ಸ್ ಜಿಯೋ ಸಂಸ್ಥೆಯದ್ದು. ಈಗ ಜಿಯೋ ಸಿಮ್'ಅನ್ನು ಉಪಯೋಗಿಸುತ್ತಿರುವ ಶೇ.80 ರಷ್ಟು ಗ್ರಾಹಕರು ಸಿಮ್'ಅನ್ನು ಉಳಿಸಿಕೊಳ್ಳುವದಾಗಿ ಹಲವು ಮಾಧ್ಯಮಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ವರದಿಯನ್ನು ನೀಡಿದ್ದವು.
ಮೂಲಗಳ ಪ್ರಕಾರ ಉಚಿತ ಕೊಡುಗೆಯನ್ನು ಕೇವಲ ಒಂದು ತಿಂಗಳಿಗೆ ವಿಸ್ತರಿಸದೆ ಮತ್ತಷ್ಟು ದಿನಗಳ ಕಾಲ ಸಾಧ್ಯತೆಯಿದೆ. ಜಿಯೋ ಸೇರಿದಂತೆ ಹಲವು ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ಬರಪೂರವಾಗಿ ಉಚಿತ ಇಂಟರ್'ನೆಟ್ ಹಾಗೂ ಹಲವು ಸೌಲಭ್ಯಗಳನ್ನು ನೀಡುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.