ಜಿಯೋನಿಂದ ಮತ್ತೊಂದು ಸೂಪರ್ ಬಂಪರ್ ಆಫರ್

Published : Jul 02, 2018, 02:51 PM ISTUpdated : Jul 02, 2018, 02:55 PM IST
ಜಿಯೋನಿಂದ ಮತ್ತೊಂದು ಸೂಪರ್ ಬಂಪರ್  ಆಫರ್

ಸಾರಾಂಶ

ಒಪ್ಪೋ ಸಂಸ್ಥೆಯ 4ಜಿ ಸ್ಮಾರ್ಟ್ ಫೋನ್'ಗಳನ್ನು ಖರೀದಿಸುವ ತನ್ನ ಗ್ರಾಹಕರಿಗೆ 1,800ರೂ. ಕ್ಯಾಶ್ ಬ್ಯಾಕ್  ಸೆ.25, 2018ಕ್ಕೆ ಮುನ್ನ ರೂ. 198 ಅಥವಾ ರೂ. 299 ರೀಚಾರ್ಜ್ ಮಾಡಿಸುವ ಮೂಲಕ ಈ ಆಫರ್ ಪಡೆಯಬಹುದು 

ಮುಂಬೈ[ಜು.02]: ರಿಲಯನ್ಸ್ ಜಿಯೋ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಮತ್ತೊಂದು ಹೊಸ ಬಂಪರ್ ಅಫರ್ ಪರಿಚಯಿಸಿದೆ.

ಒಪ್ಪೋ ಸಂಸ್ಥೆಯ 4ಜಿ ಸ್ಮಾರ್ಟ್ ಫೋನ್'ಗಳನ್ನು ಖರೀದಿಸುವ ತನ್ನ ಗ್ರಾಹಕರಿಗೆ ಕೊಡುಗೆಯಾಗಿ ರೂ. 1,800ರೂ. ಕ್ಯಾಶ್ ಬ್ಯಾಕ್ ನೀಡುತ್ತಿದೆ. ಒಪ್ಪೋ 4ಜಿ ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರಿಗೆ ಈ ಕ್ಯಾಶ್ ಬ್ಯಾಕ್ ಜೊತೆಗೆ ಜಿಯೋನಿಂದ ರೂ. 3,100 ಹೆಚ್ಚುವರಿ ಆಫರ್ ಗಳನ್ನು ನೀಡಲಾಗುತ್ತದೆ. 

'ರಿಯಲ್ಮಿ' ಬ್ರಾಂಡಿನ ಫೋನುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಒಪ್ಪೋ ಮೊಬೈಲ್ ಖರೀದಿಸುವ ಎಲ್ಲ ಹಳೆಯ ಹಾಗೂ ಹೊಸ ಜಿಯೋ ಗ್ರಾಹಕರಿಗೆ ಈ ಕ್ಯಾಶ್ ಬ್ಯಾಕ್ ದೊರೆಯಲಿದೆ. 

ಸೆ. 25, 2018ಕ್ಕೆ ಮುನ್ನ ರೂ. 198 ಅಥವಾ ರೂ. 299 ರೀಚಾರ್ಜ್ ಮಾಡಿಸುವ ಮೂಲಕ ಈ ಕೊಡುಗೆಯನ್ನು ಪಡೆದುಕೊಳ್ಳಬಹುದು. ಮೊದಲ ಯಶಸ್ವಿ ರೀಚಾರ್ಜ್ ನಂತರ ಗ್ರಾಹಕರು ತಮ್ಮ ಮೈಜಿಯೋ ಆಪ್'ನಲ್ಲಿ ತಲಾ ರೂ. 50ರ 36 ವೋಚರ್  ರೂ.ಗಳನ್ನು ಪಡೆಯಲಿದ್ದು, ಆ ವೋಚರ್ ಗಳನ್ನು ಭವಿಷ್ಯದ ರೂ.198 ಅಥವಾ ರೂ. 299 ರೀಚಾರ್ಜ್'ಗಳ ಮೇಲೆ ರಿಯಾಯಿತಿ ಪಡೆಯಲು ಪ್ರತಿ ಬಾರಿಗೆ ಒಂದರಂತೆ ಬಳಸಬಹುದಾಗಿದೆ.

ಜೊತೆಗೆ 36  ತಿಂಗಳುಗಳ ಅವಧಿಯಲ್ಲಿ ರೂ.198 ಅಥವಾ ರೂ. 299ರ 39 ರೀಚಾರ್ಜ್ ಗಳನ್ನು ಮಾಡಿಸುವ ಗ್ರಾಹಕರು ತಮ್ಮ ಜಿಯೋ ಮನಿ ಖಾತೆಯಲ್ಲಿ ರೂ. 1,800ರ ಕ್ರೆಡಿಟ್ ಪಡೆಯಲಿದ್ದಾರೆ. ಈ ಮೊತ್ತವನ್ನು ಜಿಯೋ ಮನಿ ಸ್ವೀಕರಿಸುವ ಎಲ್ಲ ಸ್ಥಳಗಳಲ್ಲೂ ಬಳಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಣ್ಣಲ್ಲಿ ಮರೆಯಾಗಿದ್ದ ಜೈನರ ಕಾಲದ ಕಲ್ಯಾಣಿಗೆ ಮರುಜೀವ ನೀಡಿದ ಉದ್ಯೋಗ ಖಾತ್ರಿ ಯೋಜನೆ
ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!