ಜಿಯೋ ಫ್ರೀ ಅಂತ ಸಿಕ್ಕಾಪಟ್ಟೆ ಬಳಸಿದ್ದವನಿಗೆ ಕಾದಿತ್ತು ಶಾಕ್..! ಮನೆಗೆ ಬಂತು 27 ಸಾವಿರದ ಬಿಲ್.. ಸತ್ಯವೋ ಸುಳ್ಳೋ..!

Published : Nov 24, 2016, 07:09 AM ISTUpdated : Apr 11, 2018, 12:56 PM IST
ಜಿಯೋ ಫ್ರೀ ಅಂತ ಸಿಕ್ಕಾಪಟ್ಟೆ ಬಳಸಿದ್ದವನಿಗೆ ಕಾದಿತ್ತು ಶಾಕ್..! ಮನೆಗೆ ಬಂತು 27 ಸಾವಿರದ ಬಿಲ್.. ಸತ್ಯವೋ ಸುಳ್ಳೋ..!

ಸಾರಾಂಶ

ಉಚಿತ ಅಂತ ಸಿಕ್ಕಪಟ್ಟೆ ಡೇಟಾ ಮತ್ತು ಕಾಲ್ ಬಳಕೆ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಜಿಯೋ 27,718 ರೂಗಳ ಬಿಲ್ ಕಳುಹಿಸಿದೆ ಜಿಯೋ

ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸಿದ ಜಿಯೋ, ತನ್ನ ಗ್ರಾಹಕರಿಗೆ ಉಚಿತ ಸೇವೆಗಳನ್ನು ನೀಡಿತ್ತು. ಮಾರುಕಟ್ಟೆಯಲ್ಲಿ 1 ಜಿಬಿ 3ಜಿ ಡೇಟಾಗೆ 200ರೂ. ಗಿಂತಲೂ ಅಧಿಕವಿರುವ ಸಮಯದಲ್ಲಿ 4ಜಿ ಡೇಟಾವನ್ನು ಉಚಿತವಾಗಿ ಬಳಸಿ ಎಂದು ಆಫರ್ ಮಾಡಿತ್ತು, ಉಚಿತವಾಗಿ ಕರೆ ಮಾಡಿ ಹಾಗೂ ಎಸ್ ಎಂಎಸ್ ಕಳುಹಿಸುವ ಅವಕಾಶವನ್ನು ನೀಡಿತ್ತು.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, ಉಚಿತ ಅಂತ ಸಿಕ್ಕಪಟ್ಟೆ ಡೇಟಾ ಮತ್ತು ಕಾಲ್ ಬಳಕೆ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಜಿಯೋ 27,718 ರೂಗಳ ಬಿಲ್ ಕಳುಹಿಸಿದೆ ಎಂದು.  ಆಧಾರ್ ಕಾರ್ಡ್ ನಲ್ಲಿರುವ ವಿಳಾಸಕ್ಕೆ ಬಿಲ್ ಕಳುಹಿಸಲಾಗಿದೆ ಎಂಬ ಸಂದೇಶಗಳು ಫೇಸ್'ಬುಕ್ ಹಾಗೂ ವಾಟ್ಸಪ್'ನಲ್ಲಿ ಹರಿದಾಡುತ್ತಿದೆ. ಇದರೊಂದಿಗೆ ಬಿಲ್ ನ ಪೋಟೋಕಾಪಿಯನ್ನು ಸಹ ಹಾಕಲಾಗಿದೆ. 

ಆದರೆ ಈ ಕುರಿತು ಮಾಹಿತಿ ನೀಡಿರುವ ಜಿಯೋ ತಂಡ ಇದೊಂದು ನಕಲಿ ಬಿಲ್ ಆಗಿದ್ದು, ಡಿ.31ರ ವರೆಗೂ ಜಿಯೋ ಬಳಕೆ ಉಚಿತವಾಗಿದ್ದು, ಗ್ರಾಹಕರಿಗೆ ಯಾವುದೇ ರೀತಿಯಲ್ಲು ಬಿಲ್ ಕಳಿಸುವುದಾಗಲಿ, ಹಣ ಪಾವತಿಸಿ ಎಂದು ಯಾವುದೇ ಸಂದೇಶವನ್ನು ಕಳುಹಿಸುವುದಿಲ್ಲ ಎಂದಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಖ್ಯಾತ ಸಿನಿಮಾ ನಟಿ-ನಿರೂಪಕಿ ಜೊತೆ ಆರ್‌ಸಿಬಿ ಮಾಜಿ ಪ್ಲೇಯರ್‌ ಡೇಟಿಂಗ್‌?
ಭಾರಿ ಇಳಿಕೆ ಬಳಿಕ ಶಾಕ್ ಕೊಟ್ಟ ಚಿನ್ನದ ಬೆಲೆ, ಬೆಂಗಳೂರು-ಹೈದರಾಬಾದ್‌ನಲ್ಲಿ 6,500 ರೂ ಏರಿಕೆ