ಟಾಟಾ ಹಿಂದಿಕ್ಕಿದ ರಿಲಯನ್ಸ್; 30 ಲಕ್ಷ ಕೋಟಿ ರೂ. ಮೌಲ್ಯದೊಂದಿಗೆ ದೇಶದ ನಂ.1 ಬಿಸಿನೆಸ್ ಗ್ರೂಪ್!

Published : Oct 28, 2026, 04:27 PM IST
Reliance Overtakes Tata to Become India Most Valuable Group at rs 30 Lakh Crore

ಸಾರಾಂಶ

ಜಿಯೋ ಪ್ಲಾಟ್‌ಫಾರ್ಮ್ಸ್‌ ಷೇರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಟಾಟಾ ಗ್ರೂಪ್ ಅನ್ನು ಹಿಂದಿಕ್ಕಿ 30 ಲಕ್ಷ ಕೋಟಿ ರೂ. ಮೌಲ್ಯದೊಂದಿಗೆ ಮುನ್ನುಗ್ಗಿದೆ. ಐಪಿಒ ಬೆಲೆಗಿಂತ ಶೇ. 21.36ರಷ್ಟು ಲಾಭದೊಂದಿಗೆ ಪಟ್ಟಿಯಾಗಿರುವ ಜಿಯೋ, ರಿಲಯನ್ಸ್ ನಂತರದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಬ್ರೋಕರೇಜ್ ಸಂಸ್ಥೆಗಳು ನೀಡಿದ್ದ ಗುರಿಯನ್ನೂ ಮೀರಿ ಇದು ಹೂಡಿಕೆದಾರರಿಗೆ ಭಾರೀ ಲಾಭ ತಂದುಕೊಟ್ಟಿದೆ.

ನವದೆಹಲಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ ಸಂಚಲನ ಸೃಷ್ಟಿಸಿದೆ. ಬರೋಬ್ಬರಿ 30 ಲಕ್ಷ ಕೋಟಿ ರೂಪಾಯಿಗಳೊಂದಿಗೆ ಟಾಟಾವನ್ನು ಹಿಂದಿಕ್ಕಿ ಮೌಲ್ಯಯುತ ಗುಂಪಾಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ.

ಟೆಲಿಕಾಂ ದೈತ್ಯ ಜಿಯೋ ಪ್ಲಾಟ್‌ಫಾರ್ಮ್ಸ್‌ 21.36 ರಷ್ಟು ಲಾಭದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಮುನ್ನುಗ್ಗಿದೆ. ಜೀಯೋ ಪ್ರತಿ ಷೇರಿಗೆ 1538 ರೂಪಾಯಿಗೆ ಪಟ್ಟಿ ಮಾಡಿದೆ. ಪ್ರತಿ ಷೇರಿಗೆ 1119 ಐಪಿಒ ಬೆಲೆಯಿಂದ ಶೇಕಡಾ 21.36 ರಷ್ಟು ಲಾಭವಾಗಿದೆ. ಈ ಮೂಲಕ ಎನ್‌ಎಸ್‌ಇನಲ್ಲಿ ಜೀಯೋದ ಮಾರುಕಟ್ಟೆಯ ಬಂಡವಾಳೀಕರಣವು 12,50,586.39 ಕೋಟಿ ತಲುಪಿದೆ. ಅಂದರೆ ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ನಂತರ ಎರಡನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಭಾರ್ತಿ ಏರ್‍‌ಟೆಲ್‌ ಅನ್ನು ಹಿಂದಿಕ್ಕಿದೆ.

ಎರಡನೇ ಸ್ಥಾನದಲ್ಲಿ ಟಾಟಾ ಗ್ರೂಪ್

ಮಂಗಳವಾರ ಅಂದರೆ ನಿನ್ನೆ ಟಾಟಾ ಗ್ರೂಪ್ 25.51 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳದೊಂದಿಗೆ ಎರಡನೇ ಸ್ಥಾನದಲ್ಲಿದೆ. ಬ್ಯುಸಿನೆಸ್‌ ಟುಡೇ ಏಸ್‌ ಇಕ್ವಿಟಿ ವರದಿ ಪ್ರಕಾರ.. ಅದಾನಿ ಗ್ರೂಪ್ ಒಂದು ದಿನದ ಹಿಂದೆ 16.68 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯವನ್ನು ಹೊಂದಿತ್ತು. ಬಲವಾದ ಆರಂಭದೊಂದಿಗೆ ಜಿಯೋ.. ದಿನದ ಆರಂಭದಲ್ಲೇ ಮೂರು ಬ್ರೋಕರೇಜ್ ಸಂಸ್ಥೆಗಳು ನೀಡಿದ್ದ 12 ತಿಂಗಳ ಟಾರ್ಗೆಟ್ ಅನ್ನು ತಲುಪಿಇದೆ. MOFSL ಸಂಸ್ಥೆಯು ಇಂದು ಬೆಳಗ್ಗೆಯೇ.. ಜಿಯೋ ಷೇರನ್ನು ಖರೀದಿಸಲು ಸಲಹೆ ನೀಡಿತ್ತು. ಅದರಂತೆ 1,350 ರೂಪಾಯಿ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು 2029ನೇ ಹಣಕಾಸು ವರ್ಷದ ಲಾಭದ ಆಧಾರದ ಮೇಲೆ ನೀಡಲಾಗಿದೆ.

ಇನ್ನು, ಇದನ್ನು IPO ಬೆಲೆಯಲ್ಲಿ ನೋಡಿದರೆ.. JPL ಕಂಪನಿಯ ಮೌಲ್ಯ ಭಾರ್ತಿ ಏರ್‌ಟೆಲ್ ಇಂಡಿಯಾ ಮೌಲ್ಯಕ್ಕೆ ಸಮನಾಗಿತ್ತು. ಆದರೆ ಜಿಯೋ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿ ಇರೋದ್ರಿಂದ ದರ ಹೆಚ್ಚಿಸುವ ಶಕ್ತಿ ಇರುವುದರಿಂದ.. ಭಾರ್ತಿಗಿಂತ ಹೆಚ್ಚಿನ ಬೆಲೆಗೆ ಜಿಯೋ ಟ್ರೇಡ್ ಆಗಬಹುದು ಎಂದು MOFSL ಅಂದಾಜಿಸಿದೆ. ಜೊತೆಗೆ ಬೇರೆ ಬೇರೆ ಬ್ರೋಕರೇಜ್ ಸಂಸ್ಥೆಗಳು ಕೂಡ ಖರೀದಿಗೆ ಸಲಹೆ ನೀಡಿವೆ.

ಜಿಯೋ ಕೇವಲ ಮಾರ್ಕೆಟ್ ಲೀಡರ್ ಮಾತ್ರವಲ್ಲ. ಬದಲಾಗಿ ಹೊಸ ಮಾರುಕಟ್ಟೆಯನ್ನೇ ಸೃಷ್ಟಿಸಿದ ಕಂಪನಿ ಎಂದು ಹೇಳಿವೆ. Nomura ಮತ್ತು Elara Securities ಕೂಡ ಷೇರು ಖರೀದಿಸಿ ಎಂದು ಸಲಹೆ ನೀಡಿವೆ. ಅವರ ಟಾರ್ಗೆಟ್ ಪ್ರಕಾರ ಷೇರು ಇನ್ನೂ 20 ರಿಂದ 22% ಏರಬಹುದು ಎಂದು ಅಂದಾಜಿಸಲಾಗಿದೆ. Nomura 1,340 ರೂಪಾಯಿ ಗುರಿ ನೀಡಿತ್ತು. ಇದು IPO ಬೆಲೆ 1,119 ರೂಪಾಯಿಗಿಂತ 20% ಹೆಚ್ಚು.ಇದಕ್ಕೂ ಮೊದಲು ಗ್ರೇ ಮಾರ್ಕೆಟ್ ನಲ್ಲಿ ಜಿಯೋ ಷೇರು 247 ರೂಪಾಯಿ ಹೆಚ್ಚು ಬೆಲೆಗೆ ಟ್ರೇಡ್ ಆಗುತ್ತಿತ್ತು. ಇದರಿಂದ ಲಿಸ್ಟಿಂಗ್ ದಿನ 22% ಲಾಭ ಸಿಗಬಹುದು ಎಂಬ ಸೂಚನೆ ಸಿಕ್ಕಿದೆ.

ಮೋತಿಲಾಲ್ ಓಸ್ವಾಲ್ ಹೇಳಿಕೆ ಪ್ರಕಾರ.. ಜೀಯೋದ ಗಳಿಕೆ ಮತ್ತು ಮೌಲ್ಯಮಾಪನವು ವೈರ್‍‌ಲೆಸ್‌ ARPU ಬೆಳವಣಿಗೆಗೆ ಪ್ರಮುಖವಾಗಿದೆ ಎಂದು ಎಂಓಎಫ್‌ಎಸ್‌ಎಲ್ ಹೇಳಿದೆ. ಪ್ರತಿತಿಂಗಳು ವೈರ್‍‌ಲೆಸ್‌ ARPU ನಲ್ಲಿ 10 ರೂಪಾಯಿ ಜೀಯೋದ ಏಕೀಕೃತ EBITDA ಅನ್ನು 3800, 3900 ಕೋಟಿಗಳಷ್ಟು ಬದಲಾಯಿಸಬಹುದು. ಪ್ರತಿ ಷೇರಿಗೆ 58 ರೂಪಾಯಿ ಅಥವಾ ಶೇಕಡಾ 4 ರಷ್ಟು ಬದಲಾಯಿಸಬಹುದು ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಂಗಾಳಕೊಲ್ಲಿಯಲ್ಲೇ ಅತಿ ಹೆಚ್ಚು ಚಂಡಮಾರುತಗಳು ಸೃಷ್ಟಿಯಾಗೋದು ಯಾಕೆ? ಈ 2 ತಿಂಗಳಲ್ಲಿ ಭಾರೀ ಆರ್ಭಟ!
'ಇಂದೇ ಟ್ರೀಟ್‌ಮೆಂಟ್‌ ಕೊಡಿಸಿ, ಇದರಲ್ಲಿ ತಡ ಮಾಡ್ಬೇಡಿ': ದೇವಸ್ಥಾನದ ಮುಂದೆ ಬಡ ಮಹಿಳೆಯ ಸಂಕಷ್ಟಕ್ಕೆ ತಕ್ಷಣ ಮಿಡಿದ ಅನಂತ್‌ ಅಂಬಾನಿ!