ಪರೀಕ್ಷಾ ಒತ್ತಡ ನಿವಾರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಧಾನಿ ಸಲಹೆ

By Suvarna Web DeskFirst Published Feb 16, 2018, 11:28 AM IST
Highlights

ಪ್ರಧಾನಿ ನರೇಂದ್ರ ಮೋದಿ ಇಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರೀಕ್ಷಾ ಒತ್ತಡ ವಿಚಾರದ ಬಗ್ಗೆ  ಮಾತನಾಡಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರೀಕ್ಷಾ ಒತ್ತಡ ವಿಚಾರದ ಬಗ್ಗೆ  ಮಾತನಾಡಿದ್ದಾರೆ.

ಪರೀಕ್ಷೆಯ  ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಲ್ಲಿಯ ತಲ್ಕೋಟ್ರಾ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರೀಕ್ಷೆಗೆ ಹೇಗಿರಬೇಕು ತಯಾರಿ, ಪರೀಕ್ಷೆಯನ್ನು ಉತ್ತಮವಾಗಿ ಹೇಗೆ ಎದುರಿಸಬೇಕು ಎನ್ನುವ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳಿಗೆ ಪ್ರಧಾನಿ ತಿಳಿಸಿದ್ದಾರೆ. ದೇಶದ ಲಕ್ಷಾಂತರ ವಿದ್ಯಾರ್ಥೀಗಳು ಪ್ರಧಾನಿ ಅವರ ಮಾತುಗಳನ್ನು ಕೇಳಿದ್ದಾರೆ.

ಈ ವೇಳೆ ಮಾತನಾಡಿದ ಪ್ರಧಾನಿ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಲು ಆತ್ಮವಿಶ್ವಾಸ ಮುಖ್ಯ. ವಿಶ್ವಾಸವು ನಿಮ್ಮ  ಒತ್ತಡವನ್ನು ನಿವಾರಣೆ ಮಾಡುತ್ತದೆ.  ಈ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿದಲ್ಲಿ ನೀವು ಉತ್ತಮವಾಗಿ ಅಂಕಗಳನ್ನು ಪಡೆಯಲು ಸಾಧ್ಯ ಎಂದು ತಿಳಿಯಿರಿ ಎಂದಿದ್ದಾರೆ.

ಅಲ್ಲದೇ ಪೋಷಕರು ಕೂಡ ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಮೇಲೆ ಒತ್ತಡ ಹಾಕುವ ಬಗ್ಗೆಯೂ ಕೂಡ ಪ್ರಸ್ತಾಪಿಸಿದ್ದು, ನಿಮ್ಮ ಕುಟುಂಬಸ್ಥರ ಕಾಳಜಿಯನ್ನು ಅರಿಯಿರಿ. ಅವರಿಗೆ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಬೇಕೆನ್ನುವ  ಉದ್ದೇಶದಿಂದ  ರೀತಿಯ ಮಾಡುತ್ತಾರೆ. ಅವರು ಹೇಳುವ ವಿಚಾರದಲ್ಲಿ ನಿಮ್ಮ ಏಳ್ಗೆಯ ಉದ್ದೇಶವಿರುತ್ತದೆ ಎನ್ನುವುದುನ್ನು ಅರಿಯಿರಿ ಎಂದು ಪ್ರಧಾನಿ ಹೇಳಿದ್ದಾರೆ.

ಎಷ್ಟೇ ಪ್ರಮಾಣಿಕವಾಗಿ ತಯಾರಿ ನಡೆಸಿದರೂ ನಿಮ್ಮಲ್ಲಿ ಆತ್ಮವಿಶ್ವಾಸವು ಇಲ್ಲವೆಂದಲ್ಲಿ ಅದೆಲ್ಲವೂ ಕೂಡ ವ್ಯರ್ಥವಾಗಲಿದೆ ಎಂದು ಹೇಳಿದ್ದಾರೆ.  ಅಲ್ಲದೇ ಪ್ರಧಾನಿ ಕಚೇರಿಯು ದೇಶದಾದ್ಯಂತ ವಿದ್ಯಾರ್ಥಿಗಳಿಂದ ಸಾವಿರಾರು ಪ್ರಶ್ನೆಗಳನ್ನು ಸ್ವೀಕರಿಸಲಾಗಿತ್ತು.

click me!