ಹೆಲಿಕಾಪ್ಟರ್ ಮೂಲಕ ಜೈಲಿನಿಂದ ಕ್ಷಣಾರ್ಧದಲ್ಲಿ ಕೈದಿ ಎಸ್ಕೇಪ್

First Published Jul 3, 2018, 4:57 PM IST
Highlights
  • ರಿಡೋಯಿನೆ ಫಾಯಿದ್[46] ತಪ್ಪಿಸಿಕೊಂಡ ಪ್ಯಾರಿಸಿನ ಕುಖ್ಯಾತ ಕೈದಿ
  • 3 ಶಸ್ತ್ರಸಜ್ಜಿತ ತಂಡದೊಂದಿಗೆ ಹೆಲಿಕಾಪ್ಟರ್ ನಲ್ಲಿ ಎಸ್ಕೇಪ್
  • ದರೋಡೆ ಪ್ರಕರಣದಲ್ಲಿ  25 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ 

ಪ್ಯಾರಿಸ್[ಜು.03]: ಕೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ, ವಾಹನಗಳ ಮೂಲಕ ಕರೆದುಕೊಂಡು ಹೋಗುವಾಗ ತಪ್ಪಿಸಿಕೊಂಡಿರುವುದನ್ನು ಕೇಳಿರುತ್ತೇವೆ. ತನ್ನ ಗುಂಪಿನ ಜನರೊಂದಿಗೆ ಹೆಲಿಕಾಪ್ಟರ್ ಮೂಲಕ ತಪ್ಪಿಸಿಕೊಂಡಿರುವುದನ್ನು ನಾವು ನೋಡಿದ್ದರೆ ಅದು ಸಿನಿಮಾದಲ್ಲಿ ಮಾತ್ರ. ಇದೇ ರೀತಿಯ ಘಟನೆ ಫ್ರಾನ್ಸ್ ರಾಜಧಾನಿ ಪ್ಯಾರೀಸ್'ನಲ್ಲಿ  ನಡೆದಿದೆ.

ರಿಡೋಯಿನೆ ಫಾಯಿದ್[46] ಎಂಬ ಪ್ಯಾರಿಸಿನ ಕುಖ್ಯಾತ ಕೈದಿ ತನ್ನ ಸಹಚರರ ಸಹಾಯದೊಂದಿಗೆ ನಿನ್ನೆ ಸಂಜೆ ತಪ್ಪಿಸಿಕೊಂಡಿದ್ದಾನೆ. ಪ್ಯಾರಿಸಿನ ಗೊನ್ನಾಸೆ ಪ್ರದೇಶದಲ್ಲಿ ಮೂರು ತಂಡದಲ್ಲಿ ಬಂದ ಶಸ್ತ್ರಸಜ್ಜಿತರು ಜೈಲಿನೊಳಗೆ ಸ್ಪೋಕ್ ಬಾಂಬ್ ಗಳನ್ನು ಸ್ಫೋಟಿಸಿದೆ. ತದ ನಂತರ ಹೆಲಿಕಾಪ್ಟರ್'ನಲ್ಲಿ ಫಾಯದ್'ನನ್ನು ಕರೆದುಕೊಂಡು ಹೋಗಿದ್ದಾರೆ. ತನ್ನ ಸಹಚರರು ಬರುವ ವೇಳೆ ಫಾಯದ್ ತನ್ನ ಸಹೋದರರ ಜೊತೆ ಮಾತನಾಡುತ್ತಿದ್ದ.

25 ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು
ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರನ್ನು ಕೊಂದ ಆರೋಪದಲ್ಲಿ 2010ರಲ್ಲಿ 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ತಪ್ಪಿಸಿಕೊಳ್ಳುವ ವೇಳೆ ಯಾರೊಬ್ಬರಿಗೂ ಗಾಯವಾಗಿಲ್ಲ. ಈತನನ್ನು ಕರೆದೋಯ್ದಿದ್ದ ಹೆಲಿಕಾಪ್ಟರ್ ಫ್ರಾನ್ಸ್'ನ ಉತ್ತರದಲ್ಲಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.  ಈತನ ಪತ್ತೆಗೆ 3 ಸಾವಿರ ಫ್ರೆಂಚ್ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು  ಫ್ರಾನ್ಸಿನ  ಆಂತರಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

1972ರಲ್ಲಿ ಜನಿಸಿದ್ದ ಫಾಯದ್  ತನ್ನ 18ನೇ ವಯಸ್ಸಿನಲ್ಲಿಯೇ ಪಾತಕ ಲೋಕಕ್ಕೆ ಆಗಮಿಸಿದ್ದ. 2013ರಲ್ಲೂ ಜೈಲಿನಿಂದ ತಪ್ಪಿಸಿಕೊಂಡಿದ್ದ. ಪ್ಯಾರೀಸ್'ನಲ್ಲಿ ಹೆಲಿಕಾಪ್ಟರ್ ಮೂಲಕ ತಪ್ಪಿಸಿಕೊಳ್ಳುತ್ತಿರುವ ಘಟನೆ ಇದು 2ನೇ ಬಾರಿಯಾಗಿದೆ. 2001ರಲ್ಲಿ ಮೂವರು ಕೈದಿಗಳು ಹೆಲಿಕಾಪ್ಟರ್ ಮೂಲಕ ಮೂವರು ಕೈದಿಗಳು ತಪ್ಪಿಸಿಕೊಂಡಿದ್ದರು.

click me!