ಮಳೆಗೆ ಅರ್ಧ ಮುಳುಗಿದ ಬೆಂಗಳೂರು:ಪರದಾಡಿದ ಜನತೆ,ಕೆರೆಯಂತಾದ ರಸ್ತೆಗಳು

Published : Oct 05, 2017, 09:25 PM ISTUpdated : Apr 11, 2018, 01:11 PM IST
ಮಳೆಗೆ ಅರ್ಧ ಮುಳುಗಿದ ಬೆಂಗಳೂರು:ಪರದಾಡಿದ ಜನತೆ,ಕೆರೆಯಂತಾದ ರಸ್ತೆಗಳು

ಸಾರಾಂಶ

ವಿಧಾನಸೌಧದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಗೂ ಮಳೆ ತಟ್ಟಿದೆ. ದೂರದೂರುಗಳಿಂದ ಕಾರ್ಯಕ್ರಮಕ್ಕೆ ಆಗಮಿಸಿದವರು ಮಳೆಯಿಂದ ನಲುಗಿ ಹೋಗಿ ಸಿಕ್ಕ ಸಿಕ್ಕಲ್ಲಿ ಬಚ್ಚಿಟ್ಟುಕೊಂಡರು. ಕೆಲವರು ಬಸ್ ಕೆಳಗೆ ಅವಿತುಕೊಂಡರೆ, ಮತ್ತೆ ಕೆಲವರು ಚೇರ್​ಗಳನ್ನೇ ಕೊಡೆಯಾಗಿ ಬಳಸಿಕೊಂಡರು.

ಬೆಂಗಳೂರು ಮತ್ತೊಮ್ಮೆ ನಡುಗಿ ಹೋಗಿದೆ. ಮಧ್ಯಾಹ್ನದ ಹೊತ್ತಿಗೆ ಎಂಟ್ರಿಕೊಟ್ಟ ವರುಣ ಇಡೀ ಸಿಟಿಯನ್ನು  ಮಳೆಯಲ್ಲಿ ಮುಳುಗಿಸಿದ್ದು, ವಾಹನ ಸವಾರರು ಪರದಾಡಿದರು.

ಶಿವನಹಳ್ಳಿಯಲ್ಲಿ ಮರ ಧರೆಗುರುಳಿ ಒಂದು ಆಟೋ,ಒಂದು ಬೈಕ್ ಜಖಂ ಗೊಂಡಿವೆ. ಶಾಂತಿಗರದ ಬಿಎಂಟಿಸಿ ಡಿಪೋವಂತೂ ಸಂಪೂರ್ಣ ಜಲಾವೃತವಾಗಿತ್ತು. ವಿಲ್ಸನ್​ ಗಾರ್ಡನ್​ನ ಬಹುತೇಕ ರಸ್ತೆಗಳು ಕೆರೆಯಂತಾಗಿದ್ವು. ಇತ್ತ ಮೆಜೆಸ್ಟಿಕ್ ಸುತ್ತಾ ಮುತ್ತ ಜನ ತೊಂದರೆ ಅನುಭವಿಸಿದರು. ತ್ರಿವೇಣಿ ಥಿಯೇಟರ್ ಎದುರಿನ ರಸ್ತೆಯಲ್ಲಿ ನೀರು ರಭಸದಿಂದ ಹರಿಯುತ್ತಿತ್ತು. ಬಿನ್ನಿ ಮಿಲ್ ರಸ್ತೆಯಲ್ಲಿರುವ ಆರೋಗ್ಯಭವನಕ್ಕೆ ನೀರು ನುಗ್ಗಿ ಅವಾಂತರವಾಗಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಂತೂ ಕಾರುಗಳು ಬಹುತೇಕ ಮುಳುಗಿ ಹೋಗಿವೆ.ವಾಹನಗಳು ನೀರಿನಲ್ಲಿ ತೇಲಾಡುತ್ತಿರುವಂತೆ ಭಾಸವಾಗುತ್ತಿತ್ತು. ಇನ್ಫೋಸಿಸ್ ಕ್ಯಾಂಪಸ್ ಕೂಡ ಮಳೆ ನೀರಿನಿಂದ ಕೆರೆಯಂತಾಗಿತ್ತು. ವಿಧಾನಸೌಧದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಗೂ ಮಳೆ ತಟ್ಟಿದೆ. ದೂರದೂರುಗಳಿಂದ ಕಾರ್ಯಕ್ರಮಕ್ಕೆ ಆಗಮಿಸಿದವರು ಮಳೆಯಿಂದ ನಲುಗಿ ಹೋಗಿ ಸಿಕ್ಕ ಸಿಕ್ಕಲ್ಲಿ ಬಚ್ಚಿಟ್ಟುಕೊಂಡರು. ಕೆಲವರು ಬಸ್ ಕೆಳಗೆ ಅವಿತುಕೊಂಡರೆ, ಮತ್ತೆ ಕೆಲವರು ಚೇರ್​ಗಳನ್ನೇ ಕೊಡೆಯಾಗಿ ಬಳಸಿಕೊಂಡರು.

ಇನ್ನು ಒಂದು ವಾರ ಮಳೆ :ಹವಾಮಾನ ಇಲಾಖೆ ಎಚ್ಚರಿಕೆ

ನಗರದ ಶಾಂತಿನಗರ, ಮಲ್ಲೇಶ್ವರಂ, ಶಿವಾಜಿನಗರ, ನಾಯಂಡಹಳ್ಳಿ, ಕೋರಮಂಗಲ, ಮಾಗಡಿ ರಸ್ತೆ, ವಿಜಯ ನಗರ, ಆನೇಕಲ್ ಸೇರಿದಂತೆ ಬಹುತೇಕ ಪ್ರದೇಶಗಳು ಮಳೆಯಿಂದ ಜಲಾವೃತವಾಗಿವೆ.  ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ  ಇನ್ನು ಐದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳ ಬಳಿ, 6 ಹೊಸ ಬಿಎಂಟಿಸಿ ಬಸ್ ತಂಗುದಾಣಗಳ ಸ್ಥಾಪನೆ!
ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!