'ಆಕೆ'ಯ ಸುರಕ್ಷತೆಗಾಗಿ ಹೋರಾಡುವ 'ರಿಯಲ್ ಹೀರೋ'ಗಳಿಗೆ ಗೌರವ

Published : Oct 31, 2017, 08:13 PM ISTUpdated : Apr 11, 2018, 12:38 PM IST
'ಆಕೆ'ಯ ಸುರಕ್ಷತೆಗಾಗಿ ಹೋರಾಡುವ 'ರಿಯಲ್ ಹೀರೋ'ಗಳಿಗೆ ಗೌರವ

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ಲೈಂಗಿಕ ಕಿರುಕುಳ ಮಹಿಳಾ ಸಮಾಜಕ್ಕೆ ಸವಾಲಾಗಿದೆ.  ಹೆಣ್ಣು ಮಕ್ಕಳು ನಿರ್ಭೀತರಾಗಿ ಒಂಟಿಯಾಗಿ ಹೊರಗಡೆ ಓಡಾಡುವುದು ಕಷ್ಟವಾಗಿದೆ. ಒಂಟಿ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ರೇಗಿಸುವುದು, ಬಸ್ಸಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮೈಕೈ ಮುಟ್ಟುವುದು, ಕೈ ಹಿಡಿದು ಎಳೆಯುವುದು ಕೆಟ್ಟದಾಗಿ ಸಂಜ್ಞೆ  ಮಾಡುವುದು, ಎಲ್ಲೆಲ್ಲೋ ನೋಡಿ ಮುಜುಗರವನ್ನುಂಟು ಮಾಡುವುದು. ಹೀಗೆ ನಾನಾ ವಿಧದಲ್ಲಿ ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ.

ಬೆಂಗಳೂರು (ಅ.31): ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ಲೈಂಗಿಕ ಕಿರುಕುಳ ಮಹಿಳಾ ಸಮಾಜಕ್ಕೆ ಸವಾಲಾಗಿದೆ.  ಹೆಣ್ಣು ಮಕ್ಕಳು ನಿರ್ಭೀತರಾಗಿ ಒಂಟಿಯಾಗಿ ಹೊರಗಡೆ ಓಡಾಡುವುದು ಕಷ್ಟವಾಗಿದೆ. ಒಂಟಿ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ರೇಗಿಸುವುದು, ಬಸ್ಸಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮೈಕೈ ಮುಟ್ಟುವುದು, ಕೈ ಹಿಡಿದು ಎಳೆಯುವುದು ಕೆಟ್ಟದಾಗಿ ಸಂಜ್ಞೆ  ಮಾಡುವುದು, ಎಲ್ಲೆಲ್ಲೋ ನೋಡಿ ಮುಜುಗರವನ್ನುಂಟು ಮಾಡುವುದು. ಹೀಗೆ ನಾನಾ ವಿಧದಲ್ಲಿ ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ.

ಇಂತಹ ಸಂದರ್ಭದಲ್ಲಿ ಯಾರಿಗೆ ಹೇಳಲಿಕ್ಕೂ ಆಗದ, ಅನುಭವಿಸಲಿಕ್ಕೂ ಆಗದ ಸಂಕಟವನ್ನು ಅನುಭವಿಸುತ್ತಾಳೆ. ಕೆಲವೊಂದು ಘಟನೆ ಮಾನಸಿಕ ಸ್ಥೈರ್ಯವನ್ನೇ ಕುಸಿಯುವಂತೆ ಮಾಡುತ್ತದೆ. ಅಬಾಲವೃದ್ಧರಾದಿಯಾಗಿ ಯಾರೂ ಇದಕ್ಕೆ ಹೊರತಲ್ಲ ಎನ್ನುವಂತಾಗಿದೆ. ಇಂತಹ ಸಂದರ್ಭದಲ್ಲಿ ಹೆಣ್ಣುಮಕ್ಕಳ ಬೆಂಬಲಕ್ಕೆ ನಿಲ್ಲುವುದು ಅಗತ್ಯ. ಎಷ್ಟೋ ಸಾರಿ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳಿಗೆ ಪುಂಡರು ಕಿರುಕುಳ ಕೊಟ್ಟಾಗ, ಚುಡಾಯಿಸಿದಾಗ ಸಾರ್ವಜನಿಕರು, ಸುತ್ತಮುತ್ತಲಿರುವವರು ಯಾರೂ ನೆರವಿಗೆ ಧಾವಿಸುವುದಿಲ್ಲ. ಮೂಕ ಪ್ರೇಕ್ಷಕರಂತೆ ನಿಂತಿರುತ್ತಾರೆ. ಇನ್ನು ಕೆಲವರು ತಮಗ್ಯಾಕೆ ಊರ ಉಸಾಬರಿ ಎಂದು ತಮ್ಮ ಪಾಡಿಗೆ ಹೋಗುತ್ತಾರೆ. ಇದು ಪುಂಡರಿಗೆ, ಕಾಮುಕರಿಗೆ ಇನ್ನಷ್ಟು ಧೈರ್ಯವನ್ನು ಕೊಟ್ಟಂತಾಗುತ್ತದೆ.

ಇಂತಹ ಸಂದರ್ಭದಲ್ಲಿ ಸುತ್ತಮುತ್ತಲಿರುವವರು ಸಂತ್ರಸ್ಥ ಹೆಣ್ಣು ಮಗಳ ನೆರವಿಗೆ ಧಾವಿಸಿ ಅವಳಿಗೆ ನೆರವು ನೀಡುವುದು, ತಕ್ಷಣ ತಮ್ಮಿಂದಾಗುವ ಸಹಾಯವನ್ನು ಮಾಡುವುದು, ಮಹಿಳೆ ಬಳಿ ಧಾವಿಸಿ, ಸಹಾಯಬೇಕಾ ಎಂದು ಕೇಳುವುದು, ಹೆದರಬೇಡಿ ಎಂದು ಧೈರ್ಯ ತುಂಬುವುದು ಅಗತ್ಯವಾಗಿದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾದಾಗ ಸಾರ್ವಜನಿಕರ, ಸುತ್ತಮುತ್ತಲಿನವರ ಪಾತ್ರವೇನು ಎಂಬುದರ ಅರಿವು ಮೂಡಿಸಲು, ಜನಜಾಗೃತಿ ಮೂಡಿಸಲು, ದುರ್ಗಾ ಸಂಸ್ಥೆ  ಶ್ರಮಿಸುತ್ತಿದೆ.  ದುರ್ಗಾಸಂಸ್ಥೆ ಯ ಮುಖ್ಯಸ್ಥೆ ಪ್ರಿಯಾ ವರದರಾಜನ್ ಸುವರ್ಣನ್ಯೂಸ್’ಗೆ ಹೇಳಿದ್ದಾರೆ.  ಅದರ ಒಂದು ಭಾಗವಾಗಿ ಇದೇ ನ. 03 ‘ರಿಯಲ್ ಹೀರೋ’ ಎನ್ನುವ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಪೊಲೀಸ್ ಕಮಿಷನರ್  ಕಛೇರಿಯಲ್ಲಿ ಇಟ್ಟುಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ  ಮೇಲೆ ದೌರ್ಜನ್ಯವಾದಾಗ, ಅವರ ನೆರವಿಗೆ ಧಾವಿಸಿ, ತಮ್ಮಿಂದಾಗುವ ಸಹಾಯವನ್ನು ಮಾಡಿ ಇತರರಿಗೆ ಮಾದರಿಯಾಗುವ 20 ಮಂದಿಯನ್ನು ಆಯ್ಕೆ ಮಾಡಿ ಗೌರವಿಸುತ್ತಿದ್ದಾರೆ. ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಇವರಿಗೆ ಗೌರವಿಸುತ್ತಿದ್ದಾರೆ.  ಈ ಮೂಲಕ ಸಾರ್ವಜನಿಕ ಜನಜಾಗೃತಿ ಮೂಡಿಸಿ, ಅಂತಹ ಸಂದರ್ಭದಲ್ಲಿ ತಾವು ಕೂಡಾ ಇತರರಿಗೆ ಮಾದರಿಯಾಗುವಂತೆ ಪ್ರೇರೇಪಿಸುವುದೇ ಈ ಕಾರ್ಯಕ್ರಮದ ಸದಾಶಯವಾಗಿದೆ. ಪ್ರಿಯಾ ವರದರಾಜನ್ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ಬನ್ನಿ, ನೀವೂ ಭಾಗವಹಿಸಿ, ಇತರರಿಗೆ ಮಾದರಿಯಾಗಿ. ಕಷ್ಟದಲ್ಲಿರುವ ಹೆಣ್ಣು ಮಕ್ಕಳ ರಕ್ಷಣೆಗೆ ಸದಾ ಸಿದ್ದರಾಗಿರೋಣ ಎಂಬುದೇ ನಮ್ಮ ಆಶಯ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ