![[ವೈರಲ್ ಚೆಕ್] ಗುಜರಾತಿನ ರೈಲ್ವೆ ನಿಲ್ದಾಣದಲ್ಲಿ ಮೋದಿ ಟೀ ಮಾರಿದ್ದು ನಿಜವೇ?](https://static.asianetnews.com/images/w-412,h-232,imgid-718e1098-f1e3-4ab2-b1d1-cca451ed2df5,imgname-image.jpg)
2014ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೇತಾರ ಮಣಿಶಂಕರ್ ಅಯ್ಯರ್ ಅವರು ಆಗಿನ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಚಾಯ್‌ವಾಲಾ ಎಂದು ವ್ಯಂಗ್ಯವಾಡಿದ್ದರು. ಬಿಜೆಪಿ ಅದನ್ನೇ ತನ್ನ ದೊಡ್ಡ ಟ್ರಂಪ್ ಕಾರ್ಡ್ ಆಗಿ ಬಳಸಿಕೊಂಡಿತ್ತು. ಎಲ್ಲೆಡೆ ಚಾಯ್ ಪೇ ಚರ್ಚಾ ಕಾರ್ಯಕ್ರಮ ಆಯೋಜಿಸಿ, ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಈ ನಡುವೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮೊದಲಬಾರಿಗೆ ತಾವು ಹುಟ್ಟಿ ಬೆಳೆದ ವಡ್ ನಗರ್‌ಗೆ ತೆರಳಿದ್ದರು. ಈ ವೇಳೆ ಪ್ರಧಾನಿ ಚಹಾ ಮಾರಿದ್ದರೆನ್ನಲಾದ ರೈಲ್ವೆ ನಿಲ್ದಾಣ ಸ್ಥಳವನ್ನೂ ಕಟೌಟ್‌ಗಳಿಂದ ಅಲಂಕರಿಸಲಾಗಿತ್ತು.
ಆದರೆ ನಿಜವಾಗಿಯೂ ಮೋದಿ ಬಾಲಕರಾಗಿದ್ದಾಗ ಚಹಾ ಮಾರಿದ್ದರಾ? ಆ ವೇಳೆ ವಡ್‌ನಗರದ ರೈಲ್ವೆ ನಿಲ್ದಾಣ ಕಾರ್ಯಾರಂಭ ಮಾಡಿತ್ತಾ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿವೆ. ಮೋದಿ ಹುಟ್ಟಿದ್ದು 1950ರಲ್ಲಿ. ಅವರು ತಮ್ಮ 6ನೇ ವಯಸ್ಸಿನಲ್ಲಿ ರೈಲ್ವೆ ನಿಲ್ದಾಣದಲ್ಲಿ ತಂದೆಗೆ ಚಹಾ ಮಾರಲು ನೆರವಾಗುತ್ತಿದ್ದರು ಎನ್ನಲಾಗುತ್ತಿದೆ. ಆದರೆ ನಿಲ್ದಾಣ ಆರಂಭವಾಗಿದ್ದೇ 1973ರಲ್ಲಿ. ಅಂದರೆ ತಮ್ಮ 23ನೇ ವಯಸ್ಸಿನಲ್ಲಿ ಚಹಾ ಮಾರುತ್ತಿದ್ದರೇ? ಅದು ಸಾಧ್ಯವಿಲ್ಲ, ಏಕೆಂದರೆ ಮೋದಿ ತಮ್ಮ 17ನೇ ವಯಸ್ಸಿನಲ್ಲೇ ಮನೆ ಬಿಟ್ಟು ತೆರಳಿದ್ದರು. ಹೀಗಾಗಿ ಮೋದಿ ಚಹಾ ಮಾರಿದ್ದೆಲ್ಲಾ ಸುಳ್ಳು ಎಂಬ ಸುದ್ದಿಗಳು ಓಡಾಡುತ್ತಿವೆ.
ಈ ಹಿನ್ನೆಲೆಯಲ್ಲಿ ಸತ್ಯಾಂಶವನ್ನು ಹುಡುಕಿ ಹೊರಟಾಗ ಕಂಡುಬಂದ ಅಂಶವೆಂದರೆ ವಾಡ್‌ನಗರ ಮತ್ತು ಮೆಹ್ಸಾನಾ ನಡುವೆ 1887ರಲ್ಲಿಯೇ ರೈಲ್ವೆ ಮಾರ್ಗ ನಿರ್ಮಾಣವಾಗಿತ್ತು. ಹೀಗಾಗಿ ನಿಲ್ದಾಣ ಆರಂಭವಾಗಿದ್ದು 1973ರಲ್ಲಿ ಎಂಬುದು ಸುಳ್ಳು. ಮೋದಿ ಚಹಾ ಮಾರಿದ್ದು ನಿಜ ಎಂಬುದು ಸಾಬೀತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.