ಬೆಳಗ್ಗೆ 9 ಗಂಟೆ ಒಳಗೆ ಕಚೇರಿಗೆ ಬಾರದಿದ್ದರೆ ವೇತನ ಕಟ್

By Web DeskFirst Published Jun 29, 2019, 11:15 AM IST
Highlights

ಕಚೇರಿಗೆ 9 ಗಂಟೆ ಒಳಗೆ ಆಗಮಿಸಬೇಕು.ಇಲ್ಲವಾದಲ್ಲಿ ವೇತನ ಕಟ್ ಆಗಲಿದೆ. ಹೀಗೆಂದು ಮುಖ್ಯಮಂತ್ರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಲಖನೌ [ಜೂ.29] : ಕಚೇರಿಯಲ್ಲಿ ಆಲಸ್ಯ, ನಿರಾಸಕ್ತಿ ಮತ್ತು ತಡವಾಗಿ ಬರುವ ಸರ್ಕಾರಿ ನೌಕರರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ! ಸರ್ಕಾರಿ ನೌಕರರ ಮೇಲೆ ಹದ್ದಿನಕಣ್ಣು ನೆಟ್ಟಿರುವ ಸಿಎಂ ಯೋಗಿ ಕಚೇರಿ ಇದೀಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಬೆಳಗ್ಗೆ 9  ಗಂಟೆಗೆ ಕಚೇರಿಯಲ್ಲಿ ಹಾಜರಿರಲು ಆದೇಶಿಸಲಾಗಿದ್ದು, ತಡವಾಗಿ ಬಂದರೆ ಶಿಸ್ತು ಕ್ರಮದ ಜೊತೆಗೆ ವೇತನಕ್ಕೂ ಕತ್ತರಿ ಹಾಕುವುದಾಗಿ ಎಚ್ಚರಿಸಿದೆ. 

ಅಲ್ಲದೆ, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸ್ ಮುಖ್ಯಸ್ಥರು ಬೆಳಗ್ಗೆ 9 ರಿಂದ 11  ಗಂಟೆ ತನಕ ಕಡ್ಡಾಯವಾಗಿ ಸಾರ್ವಜನಿಕರ ಭೇಟಿಗೆ ಮೀಸಲಿಡಬೇಕೆಂದು ಆದೇಶಿಸಲಾಗಿದೆ. 

click me!