ಆರ್ ಬಿಐ ಗ್ರಾಹಕರಿಗೆ ನೀಡಿದೆ ಬಿಗ್ ರಿಲೀಫ್, 5 ಸಾವಿರ ಡಿಪಾಸಿಟ್ ನಿಯಮ ಸಡಿಲಿಕೆ

By Suvarna Web DeskFirst Published Dec 21, 2016, 7:59 AM IST
Highlights

5000ಕ್ಕೂ ಹೆಚ್ಚು ಹಳೆ ನೋಟು ಡೆಪಾಸಿಟ್​​ ಗೆ ಇದ್ದ ನಿಯಮವನ್ನು ಆರ್ ಬಿಐ ಸಡಿಲಿಕೆ ಮಾಡಿದೆ.   

ಬೆಂಗಳೂರು (ಡಿ. 21): 5000ಕ್ಕೂ ಹೆಚ್ಚು ಹಳೆ ನೋಟು ಡೆಪಾಸಿಟ್​​ ಗೆ ಇದ್ದ ನಿಯಮವನ್ನು ಆರ್ ಬಿಐ ಸಡಿಲಿಕೆ ಮಾಡಿದೆ.   

ಹಳೆ ನೋಟು ಡೆಪಾಸಿಟ್ ಮಾಡುವ ಗ್ರಾಹಕರಿಗೆ ಬಿಗ್​ ರಿಲೀಫ್ ಸಿಕ್ಕಂತಾಗಿದೆ. ಹಳೆ ನೋಟು ಡೆಪಾಸಿಟ್​​ ಮಾಡುವವರಿಗೆ ಬ್ಯಾಂಕ್ ಅಧಿಕಾರಿಗಳು ಪ್ರಶ್ನಿಸುವಂತಿಲ್ಲ.

ಡಿ. 19 ರಂದು ಆರ್ ಬಿಐ ಒಂದು ಸುತ್ತೋಲೆ ಹೊರಡಿಸಿತ್ತು. ಅದರ ಪ್ರಕಾರ ಡಿ. 19 ರಿಂದ 31 ರವರೆಗೆ ಕೇವಲ 5 ಸಾವಿರ ರೂಗಳನ್ನು ಮಾತ್ರ ಡಿಪಾಸಿಟ್ ಮಾಡಬಹುದಿತ್ತು.  ಅದಕ್ಕಿಂತ ಜಾಸ್ತಿ ಹಣ ಡಿಪಾಸಿಟ್ ಮಾಡುವುದಾದರೆ ಬ್ಯಾಂಕ್ ಅಧಿಕಾರಿಗಳು ಅದರ ಮೂಲವನ್ನು ಪ್ರಶ್ನಿಸಬಹುದಿತ್ತು. ಈ ನಿಯಮವನ್ನು ಆರ್ ಬಿಐ ಸಡಿಲಿಸಿದೆ.

5000 ಕ್ಕಿಂತ ಹೆಚ್ಚಿನ ಹಣವನ್ನು ಖಾತೆಗೆ ಹಾಕಬಹುದು. ಆದರೆ ಕೆವೈಸಿ ಕ್ಲಿಯರೆನ್ಸ್ ಆಗಿರಬೇಕು ಎನ್ನುವ ಸುತ್ತೋಲೆಯನ್ನು ಆರ್ ಬಿಐ ಹೊರಡಿಸಿದೆ.

click me!