ಕೇಂದ್ರ ಸರಕಾರಿ ನೌಕರರಿಗೆ ಆಸ್ತಿ ಘೋಷಣೆ ವಿನಾಯಿತಿ

Published : Dec 21, 2016, 07:11 AM ISTUpdated : Apr 11, 2018, 01:08 PM IST
ಕೇಂದ್ರ ಸರಕಾರಿ ನೌಕರರಿಗೆ ಆಸ್ತಿ ಘೋಷಣೆ ವಿನಾಯಿತಿ

ಸಾರಾಂಶ

ಲೋಕಪಾಲ್‌ ಕಾಯಿದೆ ಅಡಿಯಲ್ಲಿ ಡಿ.31ರ ಒಳಗಾಗಿ ಕಡ್ಡಾಯವಾಗಿ ಆಸ್ತಿ ಮತ್ತು ಸಾಲಗಳನ್ನು ಘೋಷಿಸಿಕೊಳ್ಳಬೇಕಿದ್ದ ಕೇಂದ್ರ ಸರಕಾರಿ ನೌಕರರಿಗೆ ಈ ಬಾರಿ ವಿನಾಯಿತಿ ನೀಡಲಾಗಿದೆ.

ಬೆಂಗಳೂರು (ಡಿ. 21): ಲೋಕಪಾಲ್‌ ಕಾಯಿದೆ ಅಡಿಯಲ್ಲಿ ಡಿ.31ರ ಒಳಗಾಗಿ ಕಡ್ಡಾಯವಾಗಿ ಆಸ್ತಿ ಮತ್ತು ಸಾಲಗಳನ್ನು ಘೋಷಿಸಿಕೊಳ್ಳಬೇಕಿದ್ದ ಕೇಂದ್ರ ಸರಕಾರಿ ನೌಕರರಿಗೆ ಈ ಬಾರಿ ವಿನಾಯಿತಿ ನೀಡಲಾಗಿದೆ.

ಈ ಸಂಬಂಧ ಹೊಸ ನಿಯಮಗಳನ್ನು ಸಿದ್ಧಪಡಿಸುತ್ತಿರುವ ಹಿನ್ನೆಲೆಯಲ್ಲಿ ಡಿ.31ರ ಒಳಗೆ ಆಸ್ತಿ ಮತ್ತು ಸಾಲಗಳ ಬಗ್ಗೆ ಸ್ವಯಂ ಘೋಷಣೆ ನೀಡುವುದು ಅಗತ್ಯವಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ. ಪರಿಷ್ಕೃತ ನಿಯಮಗಳಡಿ ಆಸ್ತಿ ಘೋಷಣೆಗೆ ಸಮಯ ನಿಗದಿಪಡಿಸಿ ಆದೇಶ ಹೊರಡಿಸಲಾಗುವುದು. ಅಲ್ಲಿಯವರೆಗೂ ಈ ವಿನಾಯಿತಿ ಮುಂದುವರಿಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಲೋಕಪಾಲ್‌ ಕಾಯಿದೆ ಸೆಕ್ಷನ್‌ 44ರ ಪ್ರಕಾರ, ಡಿ.31ರ ಒಳಗಾಗಿ ಕೇಂದ್ರ ಸರಕಾರಿ ನೌಕರರು ಆಸ್ತಿ ಮತ್ತು ಸಾಲಗಳ ವಿವರ ಘೋಷಿಸಬೇಕೆಂದು ಕಳೆದ ಜುಲೈನಲ್ಲಿ ಸರಕಾರ ಆದೇಶ ಹೊರಡಿಸಿತ್ತು. ಅಲ್ಲದೆ, ಮಾ.31, 2015 ರ ಅವಧಿಯವರೆಗೂ ಇದ್ದ ಆಸ್ತಿ ಮತ್ತು ಸಾಲಗಳ ವಿವರವನ್ನು ಒಳಗೊಂಡ ವಾರ್ಷಿಕ ರಿಟರ್ನ್ಸ್‌ 2016ರ ಡಿ.31ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಲೋಕಪಾಲ್‌ ಕಾಯಿದೆಯಡಿ ಕೇಂದ್ರ ಸರಕಾರಿ ನೌಕರರು ವಿದೇಶಿ ಬ್ಯಾಂಕ್‌ ಖಾತೆಗಳಲ್ಲಿರುವ ಠೇವಣಿ, ದುಬಾರಿ ವರ್ಣಚಿತ್ರಗಳು, ಪುರಾತನ ಕಲಾಕೃತಿಗಳು, ಪೀಠೋಪಕರಣ, ಎಲೆಕ್ಟ್ರಾನಿಕ್‌ ಉಪಕರಣಗಳು, ಚಿರಾಸ್ತಿ, ವಿಮೆ, ಬಾಂಡ್‌ಗಳು, ಮ್ಯೂಚುಯಲ್‌ ಫಂಡ್‌ ಮತ್ತು ಷೇರುಗಳ ವಿವರವನ್ನು ಘೋಷಣೆಯಲ್ಲಿ ಒದಗಿಸಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ
ಸೆಲ್ಫಿ ವಿಡಿಯೋ ಮಾಡಿ ಪ್ರಾಣಬಿಟ್ಟ ಮಹಿಳೆ ಕೇಸಿಗೆ ಟ್ವಿಸ್ಟ್; ಗಂಡನ ಬಿಟ್ಟು ಬಂದರೂ ನರಕ ತೋರಿಸಿದ್ದ ಪ್ರೇಮಿ!