2 ಸಾವಿರ ನೋಟು ಮುದ್ರಣ ಸ್ಥಗಿತ: ಮುಂದಿನ ತಿಂಗಳಿಂದ 200 ರೂ. ನೋಟು ಬಿಡುಗಡೆ

By Suvarna Web DeskFirst Published Jul 26, 2017, 5:18 PM IST
Highlights

. ಆದಾಗ್ಯೂ ಆರ್'ಬಿಐ ಇಲ್ಲಿಯವರೆಗೂ 7.4 ಟ್ರಿಲಿಯನ್ ರೂ. ಮೊತ್ತದ 3.7 ಬಿಲಿಯನ್ ನೋಟುಗಳನ್ನು ಮುದ್ರಿಸಿದೆ. ಹಾಗೆಯೇ 7.85 ಟ್ರಿಲಿಯನ್ ರೂ. ಮೊತ್ತದ 14 ಬಿಲಿಯನ್ 500 ರೂ.ಗಳ ನೋಟುಗಳನ್ನು ಮುದ್ರಿಸಲಾಗಿದೆ.

ಮುಂಬೈ(ಜು.26): ಕಳೆದ 9 ತಿಂಗಳ ಹಿಂದೆ ಕೇಂದ್ರ ಸರ್ಕಾರ 1 ಸಾವಿರ ಹಾಗೂ ಹಳೆಯ 500 ರೂ. ರದ್ದುಗೊಳಿಸಿ  2 ಸಾವಿರ ನೂತನ 500 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು. ಈಗ 2 ಸಾವಿರ ರೂ. ನೋಟುಗಳನ್ನು ಮುದ್ರಣವನ್ನು ಸ್ಥಗಿತಗೊಳಿಸಿ 500 ರೂ. ನೋಟುಗಳ ಕಡೆಗೆ ಹೆಚ್ಚು ಗಮನಹರಿಸುವುದಾಗಿ ಆರ್'ಬಿಐ ತಿಳಿಸಿದೆ. ಜೊತೆಗೆ ಮುಂದಿನ ತಿಂಗಳಿಂದ ನೂತನ 200 ರೂ. ನೋಟುಗಳು ಚಾಲ್ತಿಗೆ ಬರಲಿದೆ.

ಈ ವರ್ಷದಿಂದಲೇ 2 ಸಾವಿರ ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಿದ್ದು, 500 ಹಾಗೂ 200 ರೂ.ಗಳ ನೋಟುಗಳ ಕಡೆ ಹೆಚ್ಚು ಗಮನಹರಿಸುವುದಾಗಿ ಆರ್'ಬಿಐ ಅಧಿಕೃತ ಪ್ರಕಟಣೆ ತಿಳಿಸಿದೆ. ಆದಾಗ್ಯೂ ಆರ್'ಬಿಐ ಇಲ್ಲಿಯವರೆಗೂ 7.4 ಟ್ರಿಲಿಯನ್ ರೂ. ಮೊತ್ತದ 3.7 ಬಿಲಿಯನ್ ನೋಟುಗಳನ್ನು ಮುದ್ರಿಸಿದೆ. ಹಾಗೆಯೇ 7.85 ಟ್ರಿಲಿಯನ್ ರೂ. ಮೊತ್ತದ 14 ಬಿಲಿಯನ್ 500 ರೂ.ಗಳ ನೋಟುಗಳನ್ನು ಮುದ್ರಿಸಲಾಗಿದೆ.

ನೂತನ 200 ರೂ. ನೋಟುಗಳನ್ನು ಮೊದಲ ಹಂತದ ಮುದ್ರಣವನ್ನು ಜೂನ್'ನಿಂದಲೇ ಆರಂಭಿಸಲಾಗಿದ್ದು, ಮುಂದಿನ ತಿಂಗಳು ಆರಂಭದಲ್ಲಿಯೇ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಇದಕ್ಕಾಗಿಯೇ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆರ್'ಬಿಐ'ನ ಮುದ್ರಣ ಪ್ರೆಸ್'ಗಳಾದ ಮೈಸೂರು ಹಾಗೂ ಸಲ್ಬೋ'ನಿಯಲ್ಲಿ ಮುದ್ರಣವನ್ನು ಆರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ನವೆಂಬರ್'ನಲ್ಲಿ 1000 ಹಾಗೂ 500 ರೂ. ನೋಟುಗಳನ್ನು ರದ್ದುಗೊಳಿಸಿದ್ದರು.

click me!