50,20 ರೂಪಾಯಿಯ ಹೊಸ ನೋಟುಗಳು ಪ್ರಿಂಟಾಗುತ್ತಿವೆ: ಮತ್ತೆ ಹಳೆಯ ನೋಟುಗಳ ಗತಿ ?

By Suvarna Web DeskFirst Published Dec 4, 2016, 11:38 AM IST
Highlights

ಹಾಗಾದರೆ ಹಳೆಯ 50 ಹಾಗೂ 20 ರೂಗಳ ಗತಿಯೇನು ಎನ್ನುತ್ತೀರಾ ?

ಮುಂಬೈ(ಡಿ.4): ಭಾರತೀಯ ರಿಸರ್ವ್ ಬ್ಯಾಂಕ್ 50 ಹಾಗೂ 20 ರೂಪಾಯಿಯ ಹೊಸ ನೋಟುಗಳನ್ನು ಈ ವರ್ಷದಲ್ಲೇ ಮುದ್ರಿಸಲು ಅಣಿಯಾಗುತ್ತಿದ್ದು ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಹಾಗಾದರೆ ಹಳೆಯ 50 ಹಾಗೂ 20 ರೂಗಳ ಗತಿಯೇನು ಎನ್ನುತ್ತೀರಾ ? ಚಿಂತಿಸಬೇಡಿ ಆ ಹಳೆಯ ನೋಟುಗಳು ಸಹ ಚಾಲ್ತಿಯಲ್ಲಿರುತ್ತವೆ ಎಂದು ಆರ್'ಬಿಐ ಸ್ಪಷ್ಟಪಡಿಸಿದೆ. ಈ ಹೊಸ ನೋಟುಗಳಲ್ಲಿ ಆರ್'ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯಿರುತ್ತದೆ. 20 ರೂಗಳ ನೋಟಿನಲ್ಲಿ 'ಎಲ್' ಅಕ್ಷರವನ್ನು ಜೋಡಿಸಲಾಗಿದೆ. ಇನ್ನುಳಿದಂತೆ ಮಹಾತ್ಮ ಗಾಂಧಿಯವರ ಭಾವಚಿತ್ರವೂ ಒಳಗೊಂಡು ಭದ್ರತೆಯ ಲಕ್ಷಣಗಳು ಸಾಮಾನ್ಯವಾಗಿರುತ್ತವೆ.

ಹಳೆಯ 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿದ ಕಾರಣ ಕಾಳಧನಿಕರಿಗೆ ಕಾನೂನಿನ ಶಿಕ್ಷೆಯ ಚಿಂತೆ ಕಾಡಿದರೆ, ಜನ ಸಾಮಾನ್ಯರಲ್ಲೂ ದಿನನಿತ್ಯದ ಖರ್ಚು ವೆಚ್ಚಗಳಿಗಾಗಿ ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಸರದಿಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಕ್ಕೂ ಸಹ ಸಾವಿರಾರು ಕೋಟಿ ರೂ. ಆದಾಯ ಕೂಡ ಬಂದಿತ್ತು.

click me!