ಆರ್'ಬಿಐ 1000 ರೂ ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದೆಯಂತೆ!

By Suvarna Web DeskFirst Published Sep 21, 2017, 4:50 PM IST
Highlights

ಆರ್'ಬಿಐ ನೋಟು ಅಮಾನ್ಯದ ನಂತರ ರೂ.500 ಹಾಗೂ  ರೂ.2000 ದ ನೋಟುಗಳನ್ನು ಬಿಡುಗಡೆಗೊಳಿಸಿದೆ. ಇದೀಗ 1000 ರೂ ಮುಖಬೆಲಯ ನಾಣ್ಯವನ್ನು ಬಿಡುಗಡೆ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನವದೆಹಲಿ (ಸೆ.21): ಆರ್'ಬಿಐ ನೋಟು ಅಮಾನ್ಯದ ನಂತರ ರೂ.500 ಹಾಗೂ  ರೂ.2000 ದ ನೋಟುಗಳನ್ನು ಬಿಡುಗಡೆಗೊಳಿಸಿದೆ. ಇದೀಗ 1000 ರೂ ಮುಖಬೆಲಯ ನಾಣ್ಯವನ್ನು ಬಿಡುಗಡೆ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ನಾಣ್ಯದ ಕೆಳಗಡೆ ಸತ್ಯ ಮೇವ ಜಯತೇ ಎಂದು ಬರೆಯಲಾಗಿದೆ. ಅದರ ಎರಡೂ ಕಡೆ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಭಾರತ್ ಮತ್ತು ಇಂಡಿಯಾ ಎಂದು ಬರೆಯಲಾಗಿದೆ. ನಾಣ್ಯದ ಕೆಳಗೆ ದೊಡ್ಡಕ್ಷರಗಳಲ್ಲಿ 1000 ರೂ ಎಂದು ಬರೆಯಲಾಗಿದೆ. ಎಲ್ಲರೊಂದಿಗೂ ಹಂಚಿಕೊಳ್ಳಿ ಎಂದು ಕೇಳಲಾಗುತ್ತಿದೆ. ಆದರೆ ಆರ್'ಬಿಐ 1000 ರೂ ನಾಣ್ಯವನ್ನು ಜಾರಿ ಮಾಡಿದ್ದೇ ಆದರೆ ಇಷ್ಟರಲ್ಲಾಗಲೇ ಜನರ ಕೈ ಸೇರಬೇಕಿತ್ತು. ಈ ಬಗ್ಗೆ ಅಧಿಕೃತವಾಗಿ ತಿಳಿದುಕೊಳ್ಳಲು ಭಾರತ ಸರ್ಕಾರದ ಅಧಿಕೃತ ವೆಬ್'ಸೈಟ್'ಗೆ ಭೇಟಿ ನೀಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 1000 ರೂ ಮುಖಬೆಲೆಯ ನಾಣ್ಯ ಲಭ್ಯವಾಗಿದೆ. ಅದರಲ್ಲಿ ನಾಣ್ಯದ ಹಿಂಭಾಗದ ಚಿತ್ರವೂ ಇದೆ. ತಂಜಾವೂರಿನ ಬೃಹದೀಶ್ವರ ದೇವಾಲಯಕ್ಕೆ 1000 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಈ ನಾಣ್ಯವನ್ನು 2010 ರಲ್ಲಿ ಈ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಇದು ಚಲಾವಣೆಗಾಗಿ ಬಿಡುಗಡೆ ಮಾಡಿದ ನಾಣ್ಯವಲ್ಲ. ಕೇವಲ ದೇವಾಲಯಸ ಸ್ಮರಣಾರ್ಥ ಬಿಡುಗಡೆ ಮಾಡಿದ ನಾಣ್ಯ ಇದಾಗಿದೆ. ಹೀಗಾಗಿ ಆರ್.ಬಿಐ 1000 ರೂ ನಾಣ್ಯವನ್ನು ಚಲಾವಣೆಗೆ ಬಿಡುಗಡೆ ಮಾಡಿಲ್ಲ ಎಂದು ಸಾಬೀತಾಗಿದೆ.

click me!