ನಿಷೇಧಿತ ನೋಟುಗಳ ನಾಶಕ್ಕೆ ಆರ್ ಬಿಐಗೆ ಬೇಕು ಒಂದು ವರ್ಷ!

Published : Nov 30, 2016, 12:52 PM ISTUpdated : Apr 11, 2018, 12:42 PM IST
ನಿಷೇಧಿತ ನೋಟುಗಳ ನಾಶಕ್ಕೆ ಆರ್ ಬಿಐಗೆ ಬೇಕು ಒಂದು ವರ್ಷ!

ಸಾರಾಂಶ

ನಿಷೇಧಗೊಂಡಿರುವ ರೂ.500 ಹಾಗೂ ರೂ.1000 ಮುಖಬೆಲೆ ನೋಟುಗಳನ್ನು ನಾಶಪಡಿಸುವುದಕ್ಕೆ ಆರ್ ಬಿಐಗೆ ಒಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಮುಂಬೈ (ನ.30): ನಿಷೇಧಗೊಂಡಿರುವ ರೂ.500 ಹಾಗೂ ರೂ.1000 ಮುಖಬೆಲೆ ನೋಟುಗಳನ್ನು ನಾಶಪಡಿಸುವುದಕ್ಕೆ ಆರ್ ಬಿಐಗೆ ಒಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಮುಂಬೈ, ಬೆಲಾಪುರ್ ಹಾಗೂ ನಾಗ್ಪುರಗಳಲ್ಲಿ ಈಗಾಗಲೇ ನೋಟುಗಳ ವಿಂಗಡನೆ, ಪರಿಶೀಲನೆ ಹಾಗೂ  ಹರಿದು ಹಾಕುವ ಪ್ರಕ್ರಿಯೆ ನಡೆಯುತ್ತಿದೆ.

ಹೆಸರು ಹೇಳಲಿಚ್ಚಿಸದ ಆರ್ ಬಿಐ ಹಿರಿಯ ಅಧಿಕಾರಿಯೊಬ್ಬರು “ ಮುಂಬೈ ನಗರವೊಂದರಲ್ಲೇ ಅಮಾನ್ಯಗೊಂಡ ನೋಟುಗಳ ಪ್ರಮಾಣ 70-80 ಸಾವಿರ ಗೋಣಿಚೀಲಗಳಷ್ಟಿದ್ದು ಅವುಗಳನ್ನು ನೋಟು ಹರಿಯುವ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ" ಎಂದಿದ್ದಾರೆ.

ಅಮಾನ್ಯಗೊಂಡ ಹೆಚ್ಚು ಮುಖಬೆಲೆಯ ನೋಟುಗಳನ್ನು ನಾಶಪಡಿಸುವ ತನಕ ಆರ್ ಬಿಐ ಕಡಿಮೆ ಮುಖಬೆಲೆಯ ಹಾನಿಗೊಂಡ ನೋಟುಗಳನ್ನು ನಾಶಪಡಿಸುವುದನ್ನು ವಿಳಂಬ ಮಾಡುವ ಸಾಧ್ಯತೆಯಿದೆ. ಒಟ್ಟು 15 ಸಾವಿರ ಮಿಲಿಯನ್ ನೋಟುಗಳನ್ನು ನಾಶಪಡಿಸುವ ಅಂದಾಜಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿಂದ ಗೋಕರ್ಣ ಹೊರಟಿದ್ದ ಬಸ್ ಅಗ್ನಿದುರಂತ: ಸುಟ್ಟು ಕರಕಲಾದ 9 ಮೃತರ ಪತ್ತೆಗೆ DNA ಮೊರೆ
ಡಿಸಿ ಹಕ್ಕುಚ್ಯುತಿ ಬಗ್ಗೆ ಸಂಸದರು ಧ್ವನಿ ಎತ್ತಲಿ: ಸಚಿವ ಸತೀಶ್‌ ಜಾರಕಿಹೊಳಿ