
ಬೆಳಗಾವಿ(ನ.30): ಅಪ್ರಾಪ್ತ ಬಾಲಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅಮಾನವೀಯವಾಗಿ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರುಗೇರಿ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀಶೈಲ ಬ್ಯಾಕೂಡ ಎಂಬ ಅಮಾವೀಯ ವ್ಯಕ್ತಿ 14 ವರ್ಷದ ಅಭೀಷೇಕ ಅಪ್ಪಾಸಾಹೇಬ ಶಿಂದೆ ಎಂಬ ಅಪ್ರಾಪ್ತ ಬಾಲಕನ್ನು ಕಳ್ಳತನದ ವಿಚಾರಣೆ ಹೆಸರಿನಲ್ಲಿ ಠಾಣೆಗೆ ಕರೆದೋಯ್ದು ಬಹಿರ್ದೆಸೆ ಮಾಡುವ ಜಾಗಕ್ಕೆ ಹಿಗ್ಗಾ ಮುಗ್ಗಾ ಥಳಿಸಿದ್ದು ಅಲ್ಲದೇ ಕಬ್ಬಿಣದ ಸಳಿಯಿಂದ ಬರೆ ನೀಡಿ ವಿಕೃತನವನ್ನು ಪ್ರದರ್ಶನ ಮಾಡಿದ್ದಾನೆ. ಇವನ ಜೊತೆಗೆ ಇರುವ ಕೆಲ ಪೇದೆಗಳು ನೀರು ಬೇಡಿದರೇ ಬಾಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ನೊಂದ ಅಭಿಷೇಕ ಮಾದ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾನೆ. 17-11-2016 ರಂದು ಪೊಲೀಸ್ ಠಾಣೆಗೆ ಕರೆದೊಯ್ದು ಪಿಎಸ್‍ಐ 25ರಂದು ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿದಾಗ ಅಭಿಷೇಕ ಪೊಲೀಸ್ ಠಾಣೆಯಲ್ಲಿ ಇರುವುದು ಗೊತ್ತಾಗಿದೆ. ನಂತರ ಈ ಪ್ರಕರಣ ಮಾಧ್ಯಮಗಳಿಗೆ ತಿಳಿಯಿತು ಎಂಬ ಭಯದಿಂದ ಪಿಎಸ್‍ಐ ಬಾಲಕ ಅಭಿಷೇಕನ ಮೇಳೆ ಕಳ್ಳತನದ ಪ್ರಕರಣ ದಾಖಲಿಸಿ ಬಾಲಪರಾಧಿ ರಿಮಾಂಡ್ ಹೋಮ್'ಗೆ ಒಪ್ಪಿಸಿದ್ದಾನೆ.
ಸುದ್ದಿ ತಿಳಿದ ತಾಯಿ ತನ್ನ ಮಗ ಮನೆಯಲ್ಲಿ ಇಲ್ಲದನ್ನಹ ಅರಿತು ಮಗನನನ್ನು ಹುಡುಕಲು ಪ್ರಾರಂಭ ಮಾಡಿದರು ಮಗ ಸಿಗದೆ ಇದ್ದಾಗ ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಡಲು ಹೋದಾಗ ಪೊಲೀಸರೆ ನಿನ್ನ ಮಗ ಕಳ್ಳ ಎಂದು ಹೇಳಿದ್ದಾರೆ. ಆಗ ಮಗನ ವಿಚಾರಣೆ ಮಾಡುವಾಗ ತನ್ನ ಮಗನ ಮರ್ಮಾಂಗ ಸುಟ್ಟಿದ್ದು ತಿಳಿದು ತಾಯಿ ಕರುಳ ಬಳ್ಳಿ ಕಿತ್ತು ಬಂದಿದೆ.
ಇದರಿಂದ ಮನ ನೊಂದ ತಾಯಿ ನೀಲವ್ವಾ ಬೆಳಗಾವಿಯಲ್ಲಿ ಗೃಹ ಮಂತ್ರಿ ಮತ್ತು ಜಿಲ್ಲಾಉಸ್ತುವಾರಿ ಸಚಿವರ ಮುಂದೆ ತನ್ನ ಕಷ್ಟ ಹಂಚಿಕೊಂಡಹ ಮಗನನ್ನು ಬಿಡಿಸುವಂತೆ ಅಂಗಲಾಚಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.