ಆರ್'ಬಿಐನ ಗವರ್ನರ್ ಸಂಬಳ ಕೇಳಿದರೆ ನಿಮಗೆ ಆಶ್ವರ್ಯವಾಗುತ್ತದೆ

Published : Dec 04, 2016, 02:55 PM ISTUpdated : Apr 11, 2018, 12:36 PM IST
ಆರ್'ಬಿಐನ ಗವರ್ನರ್ ಸಂಬಳ ಕೇಳಿದರೆ ನಿಮಗೆ ಆಶ್ವರ್ಯವಾಗುತ್ತದೆ

ಸಾರಾಂಶ

ಇಡೀ ದೇಶಕ್ಕೆ ಹಣಕಾಸು ಪೂರೈಸುವ, ಆರ್ಥಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಇವರಿಗೆ ಬರುವ ತಿಂಗಳ ಸಂಬಳ

ನವದೆಹಲಿ(ಡಿ.4): ದೇಶದ ದೊಡ್ಡ ಹಣಕಾಸು ಸಂಸ್ಥೆಯಾದ ಆರ್'ಬಿಐನ ಮುಖ್ಯಸ್ಥರಾದ ಗವರ್ನರ್ ಊರ್ಜಿತ್ ಪಟೇಲ್ ಅವರ ಸಂಬಳದ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲವಿರುತ್ತದೆ. ಇಡೀ ದೇಶಕ್ಕೆ ಹಣಕಾಸು ಪೂರೈಸುವ, ಆರ್ಥಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಇವರಿಗೆ ಬರುವ ತಿಂಗಳ ಸಂಬಳ ಕೇವಲ 2 ಲಕ್ಷ ರೂ. ಮಾತ್ರ. ಇದೇನಪ್ಪ ಐಟಿ ದಿಗ್ಗಜರೆ ಕೋಟಿಗಟ್ಟಲೇ ವೇತನ ಪಡೆಯುತ್ತಾರೆ. ಉನ್ನತ ಸ್ತರದ ಸರ್ಕಾರಿ ಅಧಿಕಾರಿಗಳಿಗೂ ಇದಕ್ಕಿಂತ ಹೆಚ್ಚಿಗೆ ಸಂಬಳ ಬರುತ್ತದಲ್ಲಾ ಇವರಿಗೇಕೆ ಇಷ್ಟು ಕಡಿಮೆ ಎಂದು ನೀವು ಮಾತನಾಡಿಕೊಳ್ಳಬಹುದು.

ಆದರೆ ಸಂಬಳ ಬಿಟ್ಟರೆ ಊರ್ಜಿತ್ ಅವರಿಗೆ ಇರುವ ಇನ್ನಿತರೆ ಸೌಕರ್ಯವೆಂದರೆ, ಒಂದು ಸರ್ಕಾರಿ ಫ್ಲಾಟ್, 2 ಕಾರುಗಳು ಹಾಗೂ ಇಬ್ಬರು ಚಾಲಕರು ಮಾತ್ರ. ಅಲ್ಲದೆ ಅವರಿಗೆ ಮನೆಯಲ್ಲೂ ಯಾವುದೇ ಸಿಬ್ಬಂದಿಯನ್ನು ನೀಡಲಾಗಿಲ್ಲ. ಇವರು ಅಧಿಕಾರ ವಹಿಸಿಕೊಂಡಿದ್ದು ಸೆಪ್ಟೆಂಬರ್'ನಲ್ಲಿ. ಮಾಹಿತಿ ಹಕ್ಕು ಆಯೋಗ ಕೇಳಿದ ಪ್ರಶ್ನೆಗೆ ಆರ್'ಬಿಐ ಉತ್ತರಿಸಿದೆ.

ಹಳೆಯ ಗವರ್ನರ್ ಅವರಿಗೆ ಹೋಲಿಸಿಕೊಂಡರೆ ವೇತನ, ಸೌಕರ್ಯದಲ್ಲಿ ಊರ್ಜಿತ್ ಅವರೇ ಪರವಾಗಿಲ್ಲ. ಹಿಂದಿದ್ದ ರಾಜನ್ ಅವರಿಗೆ 1.69 ಲಕ್ಷ ರೂ. ವೇತನ ಇತ್ತು. ತದ ನಂತರ 2014 ರಲ್ಲಿ 1.78 ಲಕ್ಷ ರೂ. 2015 ರಲ್ಲಿ 1.87 ಲಕ್ಷ ರೂ.ಗೇ ವೇತನವನ್ನು  ಪರಿಷ್ಟೃತಗೊಳಿಸಲಾಯಿತು. 2016ರ ಜನವರಿಯಲ್ಲಿ ಇವರ ವೇತನವನ್ನು 2.09 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ