
ನವದೆಹಲಿ(ನ.30): 500, 1000 ರೂ ನೋಟ್ ನಿಷೇಧದ ಬಳಿಕ ಬ್ಯಾಂಕ್ ಹಾಗೂ ATM ಎದುರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಜನರು ಪರದಾಡುತ್ತಿದ್ದಾರೆ. ಅಲ್ಲದೆ ಹಣ ಡ್ರಾ ಮಾಡಿಕೊಳ್ಳುವ ಮಿತಿ ಕಡಿತಗೊಳಿಸದ ಕಾರಣದಿಂದ ಜನರು ಹಣ ಸಿಗದೆ ಪರದಾಡುತ್ತಿದ್ದಾರೆ. ಅಲ್ಲದೆ ಹೊಡ ತಿಂಗಳು ಆರಂಭವಾಗಲಿದ್ದು ಉದ್ಯೋಗಿಗಳಿಗೆ ವೇತನ ಬರಲಿದೆ. ಈ ವೇಳೆ ಬಾಡಿಗೆ ಕಟ್ಟಲು, ಬಿಲ್ ಪಾವತಿಸಲು ಹಣದ ವಶ್ಯಕತೆ ಇದೆ. ಇಷ್ಟೆಲ್ಲಾ ಸಮಸ್ಯೆ ಜನರಿಗೆ ಏನು ಮಾಡಬೇಕೆಂಬುವುದು ತಿಳಿಯುತ್ತಿಲ್ಲ. ಜನರ ಈ ಕಷ್ಟವನ್ನು ನಿವಾರಿಸಲು RBI ಕೆ ಸಲಹೆಗಳನ್ನು ನೀಡಿದೆ. ಈ ಸಲಹೆಗಳು ಹೀಗಿವೆ
- ಅವಕಾಶವಿರುವ ಕಡೆಯಲ್ಲೆಲ್ಲ ಡೆಬಿಟ್ ಕಾರ್ಡ್ ಬಳಸಿ
- ಮನೆ ಬಾಡಿಗೆಯನ್ನು ಚೆಕ್ ಮೂಲಕವೇ ಕೊಡಿ
- ಮನೆ ಬಾಡಿಗೆಯನ್ನು ಮಾಲೀಕರ ಖಾತೆಗೇ ಆನ್ಲೈನ್ನಲ್ಲಿ ಜಮಾ ಮಾಡಿ
- ಕಾರು, ಮನೆ ಮತ್ತಿತರ ಸಾಲದ ಕಂತನ್ನು ಜನವರಿ ನಂತರವೂ ಕಟ್ಟಬಹುದು. ಬಡ್ಡಿ ಇರಲ್ಲ
- ದಿನಸಿ ಅಂಗಡಿ ಬಿಲ್ಗಳನ್ನೂ ಚೆಕ್ ಮೂಲಕವೇ ಕೊಡಿ
- ಒಂದು ದಿನಕ್ಕೆ ಎಟಿಎಂಗಳಲ್ಲಿ 2 ಸಾವಿರ ರೂ. ಡ್ರಾ ಮಾಡಬಹುದು
- ಚೆಕ್ ಮೂಲಕ 10 ಸಾವಿರ ರೂ. ಪಡೆಯಲು ಅವಕಾಶವಿದೆ
- ಚೆಕ್ ಮೂಲಕ ವಾರಕ್ಕೆ 24 ಸಾವಿರ ರೂ. ಡ್ರಾ ಮಾಡಿಕೊಳ್ಳಲು ಅವಕಾಶವಿದೆ
- ಪೆಟ್ರೋಲ್ ಬಂಕ್ಗಳಲ್ಲಿ ಹಳೆಯ 500 ರೂ. ನೋಟು ಬಳಸಹುದು
- ಸಹಕಾರಿ ಬ್ಯಾಂಕುಗಳಲ್ಲಿ ಸಾಲದ ಹಣ ಪಡೆಯಲು ನಿರ್ಬಂಧಗಳಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.