ಸರ್ಕಾರ ಚರ್ಚೆಗೆ ಸಿದ್ಧವಿದೆ, ಪ್ರತಿಪಕ್ಷಗಳಿಗೆ ಬೇಡವಾಗಿದೆ: ಕಾನೂನು ಸಚಿವ ರವಿಶಂಕರ್ ಪ್ರಸಾದ್

By Suvarna Web DeskFirst Published Nov 28, 2016, 10:34 AM IST
Highlights

ಸರ್ಕಾರ ಅಪಮೌಲ್ಯೀಕರಣ ಕುರಿತು ಚರ್ಚೆ ನಡೆಸಲು ಸಿದ್ಧವಿದೆ. ವಾಸ್ತವದಲ್ಲಿ ಪ್ರತಿಪಕ್ಷಗಳಿಗೆ ಆ ಕುರಿತು ಚರ್ಚೆ ಬೇಕಾಗಿಲ್ಲ, ಆದುದರಿಂದಲೇ, ಅವುಗಳು ಸಂಸತ್ತಿನಲ್ಲಿ ಅನಗತ್ಯವಾಗಿ ಕೊಲಾಹಲ ಸೃಷ್ಟಿಸುತ್ತಿವೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ನವದೆಹಲಿ (ನ.28): ನೋಟು ಅಮಾನ್ಯ ಕ್ರಮಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ವಿರುದ್ಧ ಹರಿಹಾಯ್ದಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ವಿಪಕ್ಷಗಳು ಅನಗತ್ಯವಾಗಿ ಸಂಸತ್ತಿನ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡುತ್ತಿವೆ ಎಂದಿದ್ದಾರೆ.

ದೇಶದ ಜನತೆ ಸರ್ಕಾರದ ಕ್ರಮವನ್ನು ಬೆಂಬಲಿಸುತ್ತಿದೆ ಎಂದಿರುವ ರವಿಶಂಕರ್ ಪ್ರಸಾದ್, ವಿಪಕ್ಷಗಳು ಆಚರಿಸುತ್ತಿರುವ  ಆಕ್ರೋಶ ದಿವಸಕ್ಕೆ ಯಾವುದೇ ಮಹತ್ವವಿಲ್ಲವೆಂದು ಹೇಳಿದ್ದಾರೆ.

ಸರ್ಕಾರ ಅಪಮೌಲ್ಯೀಕರಣ ಕುರಿತು ಚರ್ಚೆ ನಡೆಸಲು ಸಿದ್ಧವಿದೆ. ವಾಸ್ತವದಲ್ಲಿ ಪ್ರತಿಪಕ್ಷಗಳಿಗೆ ಆ ಕುರಿತು ಚರ್ಚೆ ಬೇಕಾಗಿಲ್ಲ, ಆದುದರಿಂದಲೇ, ಅವುಗಳು ಸಂಸತ್ತಿನಲ್ಲಿ ಅನಗತ್ಯವಾಗಿ ಕೊಲಾಹಲ ಸೃಷ್ಟಿಸುತ್ತಿವೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ನೋಟು ನಿಷೇಧದಿಂದಾಗಿ ಈಗಾಗಲೇ ದೇಶದಲ್ಲಿ 70ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಪ್ರಧಾನಿ ಸದನದಲ್ಲಿ ಬಂದು ಉತ್ತರಿಸುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

click me!