ಇಂದು ರವಿ ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ

Published : Dec 16, 2017, 08:39 AM ISTUpdated : Apr 11, 2018, 12:48 PM IST
ಇಂದು ರವಿ ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ

ಸಾರಾಂಶ

ಸಹೋದ್ಯೋಗಿ ಕೊಲೆಗೆ ಸುಪಾರಿ ನೀಡಿ ಸದ್ಯಕ್ಕೆ ಆಸ್ಪತ್ರೆಪಾಲಾಗಿರುವ ರವಿ ಬೆಳಗೆರೆಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ಬೆಂಗಳೂರು (ಡಿ.16): ಸಹೋದ್ಯೋಗಿ ಕೊಲೆಗೆ ಸುಪಾರಿ ನೀಡಿ ಸದ್ಯಕ್ಕೆ ಆಸ್ಪತ್ರೆಪಾಲಾಗಿರುವ ರವಿ ಬೆಳಗೆರೆಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.

 ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು ಜಾಮೀನು ಸಿಗುವ ಬಹುತೇಕ ಸಾಧ್ಯತೆಯಿದೆ.  ಇನ್ನು ಈಗಾಗಲೇ ಸಿಟಿ ಸಿವಿಲ್ ಕೋರ್ಟ್ ರವಿ ಬೆಳಗೆರೆಗೆ ಜಾಮೀನನ್ನು ನೀಡಿ ಮಧ್ಯಂತರ ಆದೇಶವನ್ನು ಹೊರಡಿಸಿತ್ತು.  ಡಿ.12 ರಂದು ಮಧ್ಯಂತರ ಜಾಮೀನು ನೀಡಿದ್ದು ಇಂದಿಗೆ ಅವಧಿ ಮುಕ್ತಾಯವಾಗಲಿದ್ದು ಮತ್ತೆ ವಿಚಾರಣೆ ನಡೆಸಲಿದೆ.. ಇನ್ನು ರವಿ ಬೆಳಗೆರೆ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದ್ದು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ.. ನಿನ್ನೆ ರಾತ್ರಿ ರವಿಬೆಳಗೆರೆಯ ಮೊದಲ ಪತ್ನಿ ಲಲಿತಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಸಿದ್ದು ಇನ್ನೂ ಮೂರು ದಿನಗಳ ಕಾಲ ರವಿ ಜಯದೇವ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಛಲವಿದ್ದರೆ ವಯಸ್ಸು ಅಡ್ಡಿಯಲ್ಲ: 75ರ ಹರೆಯದಲ್ಲಿ ಪತ್ತಾರ ಅಂತಾರಾಷ್ಟ್ರೀಯ ಈಜಿನ ಸಾಧನೆ
CJP ಕಾರ್ಯಕರ್ತರ ಬಂಧನಕ್ಕೆ ಮಹಿಳೆಯರನ್ನೇ ಕಳಿಸಿದ್ದೇಕೆ? ಇಂದಿರಾಗಾಂಧಿನೂ ಹೀಗೆ ಮಾಡಿಲ್ಲ ಅಂದರೇಕೆ ದೀಪ್ಕೆ