
ಬೆಂಗಳೂರು(ಸೆ.29): ನಾಡಿನೆಲ್ಲೆಡೆ ದಸರಾ ಸಂಭ್ರಮ. ಅದರಲ್ಲೂ ಇಂದು ಆಯುಧ ಪೂಜೆ ಸಡಗರ.. ವಾಹನ ಪೂಜೆ ಜೋರು.. ಇನ್ನೂ ಹಬ್ಬ ಅಂದ್ಮೇಲೆ ಕೇಳ್ಬೇಕಾ. ಮಾರ್ಕೆಟ್ನಲ್ಲಿ ರೇಟ್ ಗಗನಕ್ಕೇರಿರುತ್ತೆ. ಈ ಬಾರಿ ವಾಹನಗಳನ್ನ ಅಲಂಕಾರ ಮಾಡಬೇಕಂದ್ರೆ ಸ್ವಲ್ಪ ಯೋಚನೆ ಮಾಡಲೇಬೇಕು. ಯಾಕಂದ್ರೆ ಈ ಬಾರಿ ಹೂ, ಹಣ್ಣುಗಳ ಬೆಲೆ ಇತರೆ ಹಬ್ಬಗಳಿಗಿಂತ ದುಪ್ಪಟ್ಟು ಹೆಚ್ಚಾಗಿದೆ.
ಗಗನಕ್ಕೇರಿದೆ ಹೂವಿನ ದರ
ಒಂದು ವಾರದ ಹಿಂದೆ ಕೆಜಿಗೆ 300 ರೂಪಾಯಿ ಇದ್ದ ಮಲ್ಲಿಗೆ ಹೂ 900 ರೂಪಾಯಿಯಾಗಿದೆ. ಇನ್ನು, 200 ರೂಪಾಯಿ ಇದ್ದ ಕಾಕಡ 500 ರೂಪಾಯಿಗೆ ತಲುಪಿದೆ. ಕನಕಾಂಬರ ಹೂ ಒಂದು ವಾರಗಳ ಹಿಂದೆ 500 ರೂಪಾಯಿ ಇತ್ತು.. ಇದೀಗ ಸಾವಿರ ರೂಪಾಯಿಗೆ ಮುಟ್ಟಿದೆ. ಕೆಜಿಗೆ 120 ರೂಪಾಯಿ ಇದ್ದ ಸೇವಂತಿಗೆ ಹೂ 200 ರೂಪಾಯಿಗೆ ತಲುಪಿದ್ದು, ಗುಲಾಬಿ ಹೂ 80 ರೂಪಾಯಿಯಿಂದ 200 ರೂಪಾಯಿಗೆ ತಲುಪಿದೆ. ಇನ್ನು, ಸುಗಂಧ ರಾಜ ಹೂ 100 ರೂಪಾಯಿಯಿಂದ 300 ರೂಪಾಯಿಗೆ ತಲುಪಿದೆ. ಚೆಂಡು ಹೂ 10 ರೂಪಾಯಿಯಿಂದ 100ಕ್ಕೆ ತಲುಪಿದ್ದು, 300 ರೂಪಾಯಿ ಇದ್ದ ಮಲ್ಲೆ ಹೂ ಕೆಜಿಗೆ 600ಕ್ಕೆ ತಲುಪಿದೆ.
ಇನ್ನೂ ದ್ರಾಕ್ಷಿ, ದಾಳಿಂಬೆ, ಸೇಬು ಸೇರಿದಂತೆ ಹಣ್ಣಿನ ಬೆಲೆಗಳಲ್ಲಿ ಕೂಡ ಹೆಚ್ಚಳವಾಗಿದೆ. ತರಕಾರಿ ಬೆಲೆ ಕೂಡ ಕೊಂಚ ಏರಿಕೆ ಕಂಡಿದೆ.
ಹಬ್ಬಕ್ಕೆ ಬೆಲೆ ಏರಿಕೆ ಸಾಮಾನ್ಯ. ಆದರೆ ಈ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದ್ದು, ಜನರು ಖರೀದಿ ವೇಳೆ ಎರಡೆರೆಡು ಬಾರಿ ಯೋಚಿಸುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.